- Sunday
- August 16th, 2026
ಬಾಳುಗೋಡು ಕೊಲ್ಲಮೊಗ್ರ ಕಲ್ಮಕಾರು ಭಾಗದಲ್ಲಿ ಸುರಿದ ವ್ಯಾಪಕ ಮಳೆಗೆ ಹರಿಹರಪಲ್ಲತ್ತಡ್ಕದ ಸಂಗಮಕ್ಷೇತ್ರ ಅಯ್ಯಪ್ಪ ದೇವಸ್ಥಾನದ ಆವರಣ ಮುಳುಗಡೆಯಾಗಿದೆ.
ಕಳ್ಳರು ಮನೆಯೊಂದರಿಂದ ಕದ್ದಿದ್ದ 10 ಗೋಣಿ ಕಾಳುಮೆಣಸನ್ನು ಸಾಗಿಸುತ್ತಿದ್ದ ವೇಳೆ ಬೆಳ್ಳಾರೆ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಕಳಂಜ ನಿವಾಸಿ ಮಂಜು, ಕೊಡಿಯಲ ಬೈಲು ನಿವಾಸಿ ಪ್ರವೀಣ, ಜಾಲ್ಸೂರು ಗ್ರಾಮದ ಬೆರ್ಪಡ್ಕ ನಿವಾಸಿ ಪವನ್ ಕುಮಾರ್ ಹಾಗೂ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಬ್ದುಲ್ ಬಾಶೀತ್ ಎಂದು...
ಮಳೆಗಾಲ ಆರಂಭ ದಿನಗಳಿಂದ ಆರಂತೋಡು, ತೊಡಿಕಾನ ಸಂಪಾಜೆ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನಪ್ರತಿನಿಧಿಗಳು ಸಚಿವ ಎಸ್. ಅಂಗಾರರಿಗೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಸಚಿವರು ಮೆಸ್ಕಾಂ ನ ಸಹಾಯಕ ತಾಂತ್ರಿಕ ಅಧಿಕಾರಿ ಸುಪ್ರಿತ್ ಅವರನ್ನು ಕಛೇರಿಗೆ ಕರೆಸಿ ನಿರಂತರ ವಿದ್ಯುತ್ ನೀಡಲು ಆಗಬೇಕಾಗಿರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಆದೇಶಿಸಿದರು....
ಬಳ್ಪ ಗ್ರಾಮದ ಆಲ್ಕಬೆ ಎಂಬಲ್ಲಿ ಗುಡ್ಡ ಕುಸಿತ ಜು.4 ರಂದು ಗುಡ್ಡ ಕುಸಿದಿದ್ದು ಸಂಚಾರಕ್ಕೆ ತಡೆಯುಂಟಾಗಿದೆ.ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಸಂಪೂರ್ಣವಾಗಿ ಕೆಸರುಮಯವಾಗಿ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ ಮಳೆ ಇದೇ ರೀತಿ ಮುಂದುವರಿದರೆ ಗುಡ್ಡ ಇನ್ನಷ್ಟೂ ಕುಸಿಯುವ ಭೀತಿಯಲ್ಲಿದೆ. ಪಂಚಾಯಿತಿಗೆ ಮನವಿ ಮಾಡಿದ್ದರು ಯಾವ ಕ್ರಮ ಇನ್ನು ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವರದಿ...
ಕೊಡಿಯಾಲ - ಪೆರುವಾಜೆ ಗ್ರಾಮಗಳನ್ನು ಸಂಪರ್ಕಿಸುವ ಸಾರಕೆರೆ ಎಂಬಲ್ಲಿ ಸುಮಾರು 45 ವರ್ಷಗಳ ಹಿಂದೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಈಗ ಸಂಪೂರ್ಣ ಶಿಥಿಲಗೊಂಡಿದ್ದು, ಸದ್ರಿ ಅಣೆಕಟ್ಟಿನ ಮೇಲೆ ಇರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ಈ ಕಾಲುದಾರಿಯಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಕೊಡಿಯಾಲ ಗ್ರಾಮದ ಅನಗುರಿ, ಕೆಡೆಂಜಿಮೊಗ್ರು, ಬೇರ್ಯ ಉಡುಕಿ ಕಾಲೋನಿಯ ನಾಗರಿಕರು ಹಾಗೂ...
ಸುಳ್ಯಕ್ಕೆ 110 ಕೆವಿವಿದ್ಯುತ್ ಲೈನ್ ಹಾದು ಹೋಗಲು ಅರಣ್ಯ ಇಲಾಖೆಯ ತೊಡಕು ನಿವಾರಣೆಯಾಗಿದ್ದು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದೆ. 110 ಕೆ.ವಿ. ಲೈನ್ ಹಾಗೂ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ...
ತುಳುನಾಡಿನ ಪ್ರಸಿದ್ಧ ತಾಣವಾದ ಬೆಳ್ಳಾರೆ ಪೆರುವಾಜೆಯ ಉದ್ಭವ ಸ್ವರೂಪಿನಿ ಶ್ರೀ ಜಲದುರ್ಗ ದೇವಸ್ಥಾನದ ಮಹಿಮೆಯನ್ನು ವರ್ಣಿಸುವ, ""ಕರುಣಾಮಯಿ ಜಲದುರ್ಗೆ "" ತುಳು ಭಕ್ತಿಗೀತೆಯನ್ನು ಪಿ.ಪದ್ಮನಾಭ ಶೆಟ್ಟಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವ್ಯವಸ್ಥಾಪನಾ ಸಮಿತಿ ಹಾಗೂ ಸಿಬ್ಬಂದಿ ವರ್ಗ ಶ್ರೀ ಕ್ಷೇತ್ರ ಪೆರುವಾಜೆ ಇವರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.ಈ ಭಕ್ತಿಗೀತೆ ಗೆ ಸಾಹಿತ್ಯವನ್ನು ಸುದೀಪ್ ಕೆಯ್ಯೂರು ಬರೆದು...
ಕೇನ್ಯ : ಶ್ರೀ ದುರ್ಗಾ ಸೇವಾ ಸಂಘ ಉಳಿಸಿದ ಕೇನ್ಯ ಇದರ " ನಮ್ಮೂರ ಶಾಲೆ ಅಭಿಯಾನಕ್ಕೆ ಓಗೊಟ್ಟು " ಓಮ್ ಶಕ್ತಿ ಸಂಸ್ಥೆ ಕಲ್ಯಾಣ್" ಮುಂಬಯಿ ಇವರಿಂದ ಕೇನ್ಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇನ್ಯ, ನೇಲ್ಯಡ್ಕ ಮತ್ತು ಕನ್ಕಲ್ ಶಾಲೆಗಳಿಗೆ ಸುಮಾರು 1 ಲಕ್ಷದಷ್ಟು ಮೌಲ್ಯದ ಸಮವಸ್ತ್ರ ಮತ್ತು ನೋಟು ಪುಸ್ತಕಗಳನ್ನು...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರ "ಎ" ಮತ್ತು ಶಿರೂರು ಚಾಂತಾಳ "ಬಿ" ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜು. 04 ರಂದು ಮಯೂರ ಕಲಾಮಂದಿರ ಕೊಲ್ಲಮೊಗ್ರದಲ್ಲಿ ನಡೆಯಿತು. ಅಯ್ಯಪ್ಪ ಪೂಜಾ ಮಂದಿರದ ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಕಿರಿಭಾಗ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು...
ಸುಳ್ಯ ನಗರಪಂಚಾಯತ್ ನಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ಘಟಕದಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ದುಗಲಡ್ಕದ ನೀರಬಿದಿರೆ ನಿವಾಸಿ ದೇವನಾಥ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ದೇವನಾಥರಿಗೆ 32 ವರ್ಷ ವಯಸ್ಸಾಗಿತ್ತು.ನಿನ್ನೆ ವಿಷ ಸೇವಿಸಿದರೆನ್ನಲಾಗಿದೆ. ಕೂಡಲೇ ಗೆಳೆಯರಿಗೆ ವಿಷಯ ಗೊತ್ತಾಗಿ ಆಸ್ಪತ್ರೆಗೆ ಕರೆತಂದರು. ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು....
Loading posts...
All posts loaded
No more posts
