ಹುತಾತ್ಮ ಸೈನಿಕರ ಬಲಿದಾನ ವ್ಯರ್ಥವಾಗದಿರಲಿ : ಡಾ|| ಚೂಂತಾರು ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಕಾರ್ಗಿಲ್ ದಿನಾಚರಣೆ

ಜು.26ರಂದು ಮೇರಿಹಿಲ್ ನ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಕಾರ್ಗಿಲ್ ದಿನಾಚರಣೆ ಅಂಗವಾಗಿ ಕಾರ್ಗಿಲ್ ನಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸುತ್ತಾ, 23ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ವಹಿಸಿದ್ದರು. 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶಕ್ಕಾಗಿ ಮಡಿದ ಆ...

ಕಳಂಜ ಘಟನೆ : ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ನ್ಯಾಯಕ್ಕಾಗಿ ಮೊರೆ

ಕಳಂಜದಲ್ಲಿ ಹತ್ಯೆಗೊಳಗಾದ ಶಹೀದ್ ಮಸೂದ್ ಕುಟುಂಬಸ್ಥರು ದ.ಕ ಜಿಲ್ಲಾಧಿಕಾರಿಯನ್ನು ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಒದಗಿಸುವಂತೆ,ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು. ಹಾಗೂ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ಧನ ಕೊಡಲು ಶಿಫಾರಸು ಮಾಡುವಂತೆಯೂ ಇದೇ ಸಂದರ್ಭದಲ್ಲಿ ವಿನಂತಿಸಿದರು. ನಿಯೋಗದಲ್ಲಿ ಮಸೂದ್‌ನ ತಾಯಿ ಸಾರಮ್ಮ ,ಸಹೋದರ ಇರ್ಶಾದ್ , ಮಿರ್ಶಾದ್, ಸಹೋದರಿ ಶಿಫಾನ,...
Ad Widget

ಐವರ್ನಾಡು : ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ 1837ರ ಉಪನ್ಯಾಸ ಕಾರ್ಯಕ್ರಮ

ಗ್ರಾಮ ಪಂಚಾಯತ್ ಐವರ್ನಾಡು, ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಐವರ್ನಾಡು ಮತ್ತು ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ - 1837ರ ಉಪನ್ಯಾಸ ಮಾಲಿಕೆಯ ಎರಡನೇ ಉಪನ್ಯಾಸ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡುನಲ್ಲಿ ನಡೆಸಲಾಯಿತು....

ವಳಲಂಬೆ : ಗಣೇಶೋತ್ಸವ ಸಮಿತಿ ರಚನೆ ; ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿ ರವೀಂದ್ರ ಹೊಸೊಳಿಕೆ

ವಳಲಂಬೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆ ಜು. 24 ರಂದು ದೇವಸ್ಥಾನದ ವಠಾರದಲ್ಲಿ. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ. ಅಧ್ಯಕ್ಷರಾಗಿ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿಯಾಗಿ ರವೀಂದ್ರ ಹೊಸೊಳಿಕೆ, ಖಜಾಂಜಿಯಾಗಿ ಲೋಹಿತ್ ಚೈಪೆ ಯವರನ್ನು ಆಯ್ಕೆ ಮಾಡಲಾಯಿತು. ,

ಕುಕ್ಕೆ ಸುಬ್ರಹ್ಮಣ್ಯ : ಆ.25 ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹ-ಅರ್ಜಿಆಹ್ವಾನ

ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ ಮತ್ತು ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.25 ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕುಕ್ಕೆ ದೇವಳದಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹ...

ಸುಳ್ಯ : ಬಡ ಕುಟುಂಬಕ್ಕೆ ನೆರವಾದ ಕೆಪಿಸಿಸಿ ಸಂಯೋಜಕ ನಂದಕುಮಾರ್

ಅಮರಮಡ್ನೂರು ಗ್ರಾಮದ ಕಲ್ಲುಮಲೆ ಎಂಬಲ್ಲಿ ವಾಸವಾಗಿರುವ ಅಶಕ್ತ ಬಡಕುಟುಂಬದ ನಾರಾಯಣ ಮುಗೇರ ಮತ್ತು ಗಂಗು ದಂಪತಿಗಳ ಮನೆಯು ಗಾಳಿ ,ಮಳೆಯ ಸಂದರ್ಭದಲ್ಲಿ ಹಾನಿಗೊಂಡದ್ದನ್ನು ಮನಗಂಡು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಯೋಜಕ ನಂದಕುಮಾರ್ ರವರು ಸ್ಥಳೀಯ ಪಂಚಾಯತ್ ಸದಸ್ಯ ಅಶೋಕ್ ಚೂಂತಾರ್‌ರವರೊಂದಿಗೆ ಸ್ಥಳಕ್ಕೆ ತೆರಳಿ ಬಡ ಕುಟುಂಬಕ್ಕೆ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಸುಳ್ಯ ನಗರ...

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ.ವಿ‌. ತೀರ್ಥರಾಮ ನೇಮಕ

ಸುಳ್ಯದ ಬಿಜೆಪಿ ಮುಖಂಡ, ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎ.ವಿ. ತೀರ್ಥರಾಮ ಅಂಬೆಕಲ್ಲು ಅವರನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಜ್ಯ ಸರಕಾರ ನೇಮಕಗೊಳಿಸಿದೆ. ಧಾರ್ಮಿಕ, ಸಹಕಾರಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ರಾಷ್ಟ್ರ ಮಟ್ಟದ ಡಾ. ಎ ಪಿ ಜೆ ಅಬ್ದುಲ್ ಕಲಾಂ ಎಜ್ಯುಕೇಷನ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿಗೆ ಡಾ ಅನುರಾಧಾ ಕುರುಂಜಿ ಆಯ್ಕೆ.

ನವದೆಹಲಿಯ ಅಚೀವರ್ಸ್ ಅಸೋಸಿಯೇಷನ್ ಅಂಡ್ ಎಜ್ಯುಕೇಷನ್ ಗ್ರೋತ್ ಸಂಸ್ಥೆಯವರು ಪ್ರತೀವರ್ಷ ಕೊಡಮಾಡುವ ಡಾ. ಎ ಪಿ ಜೆ ಅಬ್ದುಲ್ ಕಲಾಂ ಎಜ್ಯುಕೇಷನ್ ಎಕ್ಸಲೆನ್ಸ್ ಅವಾರ್ಡ್ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ವಲಯ ತರಬೇತುದಾರರಾಗಿರುವ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ. ವಲಯ ತರಬೇತುದಾರರಾಗಿ ಶಿಕ್ಚಣದ ಜೊತೆಗೆ ಬೇರೆ ಬೇರೆ ವರ್ಗದ ಜನರಿಗೆ 1600 ಕ್ಕಿಂತ ಅಧಿಕ ತರಬೇತಿಗಳನ್ನು ನೀಡುವ...

ಮೌನ ಮಾತಾದಾಗ ಆಲ್ಬಮ್ ಸಾಂಗ್ ಬಿಡುಗಡೆ – ಕೆಲವೇ ಕ್ಷಣಗಳಲ್ಲಿ ಅತೀ ಹೆಚ್ಚು ವೀಕ್ಷಣೆ

ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ, ಪ್ರಶಾಂತ್ ವಿಟ್ಲ ಸಾಹಿತ್ಯದ ,ವಿಷ್ಣು ನಾಗ್ ಶೇಟ್ ಹಾಡಿರುವ, ಯಶ್ ಫೋಟೋಗ್ರಾಫಿ ಛಾಯಾಗ್ರಹಣದ, ಜೀವನ್ ಕೆರೆಮೂಲೆ ಹಾಗೂ ಗಿರೀಶ್ ಇವರ ಸಂಕಲನದ ಬಹುನಿರೀಕ್ಷಿತ ಕನ್ನಡ ಆಲ್ಬಮ್ ಸಾಂಗ್ "ಮೌನ ಮಾತಾದಾಗ" ಭಾನುವಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದ ಹೆಸರಾಂತ ನಟ ಆರ್ಯನ್, ಕನ್ನಡ ಸಿನಿಮಾ...

ದೆಹಲಿಯ ಸ್ವಾತಂತ್ರ್ಯೋತ್ಸವದ ಪೆರೇಡ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ನೀಡುವ ರಾಜ್ಯ ತಂಡಕ್ಕೆ ಸುಳ್ಯದ ಕು.ಸಾಹಿತ್ಯ ಆಯ್ಕೆ

ಆಗಸ್ಟ್ ೧೫ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನೃತ್ಯ ಪ್ರದರ್ಶನ ನೀಡಲು ಕರ್ನಾಟಕ ರಾಜ್ಯ ತಂಡ ತೆರಳಲಿದ್ದು ಈ ತಂಡದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸುಳ್ಯದ ಕು.ಸಾಹಿತ್ಯ ಪುರುಷೋತ್ತಮ್ ಭಾಗವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಬಿಬಿಎ ವಿದ್ಯಾರ್ಥಿನಿಯಾಗಿರುವ ಕು.ಸಾಹಿತ್ಯ ಅಲ್ಲಿಯ ಎನ್.ಸಿ.ಸಿ. ತಂಡದ ವಿದ್ಯಾರ್ಥಿನಿ. ಇತ್ತೀಚೆಗೆ ನಡೆದ ಎನ್.ಸಿ.ಸಿ. ಕ್ಯಾಂಪ್‌ನಲ್ಲಿ ಸಾಹಿತ್ಯ...
Loading posts...

All posts loaded

No more posts

error: Content is protected !!