- Sunday
- May 18th, 2025

ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿ ನಾಪತ್ತೆಯಾಗಿದ್ದ ಉಳುವಾರಿನ ಮಹಿಳೆಯ ಮೃತದೇಹ ಪೆರಾಜೆ ಸಮೀಪ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.ಅರಂತೋಡು ಗ್ರಾಮದ ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ. 11ರಂದು ಸಂಜೆ 5 ಗಂಟೆ ಸುಮಾರಿಗೆ ಅರಂತೋಡಿನ ಮಾಡದ ಬಳಿ ಇರುವ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ನಾಪತ್ತೆಯಾಗಿದ್ದರು. ತೊಡಿಕಾನ ಅರಂತೋಡಿನ ಗ್ರಾಮಸ್ಥರು, ಅಗ್ನಿಶಾಮಕ ದಳ, ಪೈಚಾರಿನ...

ನಾಲ್ಕೂರು ಗ್ರಾಮದ ಕಡವೆಪಳ್ಳ ದಿವಂಗತ ವಾಮನ ಮಾಸ್ತರ್ ಅವರ ತಂದೆ ಕುಂಜ್ಞಣ್ಣ ನಾಯ್ಕ್ ಅವರು ಸೆ.14 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 115 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ. (ವರದಿ :- ಉಲ್ಲಾಸ್ ಕಜ್ಜೋಡಿ)

ನಾಲ್ಕೂರು ಗ್ರಾಮದ ದೇರಪ್ಪಜ್ಜನ ಮನೆ ಡಿ.ಎಚ್. ಪೂರ್ಣಚಂದ್ರ ರವರು ಮೆದುಳಿನ ರಕ್ತಸ್ರಾವದಿಂದ ಆ.27 ರಂದು ಪೂನಾದಲ್ಲಿ ನಿಧನರಾದರು. ಪೂನಾದ ಖಾಸಗಿ ಕಂಪೆನಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಲತಾ, ಪುತ್ರ ಶಮಂತ್, ಪುತ್ರಿ ವಿಂಧ್ಯಾ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪಂಜ ಸಂಕಡ್ಕ ನಿವಾಸಿ ಕೂತ್ಕುಂಜ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಕುಕ್ಕುಪುಣಿಯವರ ಪತ್ನಿ ಶ್ರೀಮತಿ ಅನಸೂಯ.ಸಿ.ಕೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.20ರಂದು ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.ಶ್ರೀಮತಿ ಅನಸೂಯ.ಸಿ.ಕೆ ಯವರು ಪಂಜ ವನಿತಾ ಸಮಾಜದ ಕಾರ್ಯದರ್ಶಿಯಾಗಿ, ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು.

ಕೊಡಿಯಾಲ ಗ್ರಾಮದ ಶತಾಯುಷಿ ಶ್ರೀಮತಿ ಚೋಮು ಕಲ್ಲಪಣೆಯವರು ಆ.18ರಂದು ನಿಧನರಾದರು. ಅವರಿಗೆ 105 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮುದರ, ಪುತ್ರಿಯರಾದ ಲಕ್ಷ್ಮೀ, ಕುಸುಮ, ಕಮಲ, ಚನ್ನು, ಸೊಸೆಯಂದಿರಾದ ಜಾನಕಿ, ಸೇಸಮ್ಮ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಳಂಜ ನಿವಾಸಿ ಬಾಬು ಪೂಜಾರಿ ಕಳಂಜ ಹೃದಯಾಘಾತದಿಂದ ಆ.15ರಂದು ನಿಧನರಾದರು. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಭವಾನಿ, ಪುತ್ರ ಸುಧೀರ್, ಪುತ್ರಿಯರಾದ ಶ್ರೀಮತಿ ಜಯಶ್ರೀ, ಶ್ರೀಮತಿ ಸುಜಾತ ಈಶ್ವರಮಂಗಲ, ಶ್ರೀಮತಿ ವಿಜಯಶ್ರೀ ಬೆಂಗಳೂರು ಹಾಗೂ ಸಹೋದರರಾದ ಆನಂದ ಪೂಜಾರಿ ಕಳಂಜ, ಐತ್ತಪ್ಪ ಪೂಜಾರಿ ಕಳಂಜ, ಸುಂದರ ಪೂಜಾರಿ ಸಜೀಪ ಮೇಲ್ಕಾರ್, ಸಹೋದರಿಯರಾದ...

ಶತಾಯುಷಿ ನಾರ್ಕೊಡು ಕೃಷ್ಣಪ್ಪ ಗೌಡ ನಿಧನತೊಡಿಕಾನ ಗ್ರಾಮದ ಪರ್ನೋಜಿ ನಾರ್ಕೋಡು ಮನೆಯ ಶತಾಯುಷಿ ಕೃಷ್ಣಪ್ಪ ಗೌಡ (106) ಸ್ವಗ್ರಹದಲ್ಲಿ ಶುಕ್ರವಾರ ನಿಧನರಾದರು.ಪುತ್ರರಾದ ಸುಂದರ ಗೌಡ, ಕೂಸಪ್ಪ ಗೌಡ, ಚಂಗಪ್ಪ ಗೌಡ, ಗಣಪಯ್ಯ ಗೌಡ, ಪುತ್ರಿ ಭಾಗೀರಥಿ ಹಾಗೂ ಸೊಸೆಯಂದಿರನ್ನು, ಮೊಮ್ಮಕ್ಕಳನ್ನು, ಮರಿಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಉಬರಡ್ಕ ಗ್ರಾಮದ ಅಮೈ ಪಾಲಡ್ಕ ನಿವಾಸಿಯಾಗಿದ್ದ ದಿ. ಕುಶಾಲಪ್ಪ ಗೌಡರ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ರತ್ನಾವತಿ ಜು.31 ರಂದು ನಿಧನರಾದರು. ಪ್ರಸ್ತುತ ಇವರು ಪುತ್ತೂರು ತಾ. ಬಲ್ನಾಡು ಗ್ರಾಮದ ಬೆಳಿಯೂರು ಕಟ್ಟೆ ದಂಬೆತಡ್ಕದಲ್ಲಿ ನೆಲೆಸಿದ್ದರು. ಸೋಮವಾರ ಪೇಟೆಯಲ್ಲಿ ಶಿಕ್ಷಕಿ ವೃತ್ತಿ ಆರಂಭಿಸಿದ ಇವರು ಚೆಂಬು ಹಾಗೂ ಕೊಯನಾಡು ಶಾಲೆಯಲ್ಲಿ ಸೇವೆ ನಿವೃತ್ತರಾಗಿದ್ದರು. ಮೃತರು ಪುತ್ರರಾದ...

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಸುಳ್ಯ ವಿಭಾಗದ ಫಾರೆಸ್ಟರ್ ಉಮೇಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಕಳೆದ ಶನಿವಾರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೂ ಕರೆದೊಯ್ಯಲಾಯಿತಾದರೂ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಕೌಟುಂಬಿಕ...

All posts loaded
No more posts