Ad Widget

ನಿಧನ : ಬಾಲಕೃಷ್ಣ ಗೌಡ ಚಿದ್ಗಲ್ಲು

ಬಾಲಕೃಷ್ಣ ಗೌಡ ಚಿದ್ಗಲ್ಲು ಹೊಸೊಳಿಕೆ(73) ಇವರು ಬುಧವಾರ ಸಂಜೆ 7:00 ಗಂಟೆ ಸುಮಾರಿಗೆ ಸುಬ್ರಹ್ಮಣ್ಯದ ಹೊಸೊಳಿಕೆ ಸ್ವಗೃಹದಲ್ಲಿ  ನಿಧನರಾಗಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು, ಬಂಧು-ಮಿತ್ರರನ್ನು ಅಗಲಿರುತ್ತಾರೆ.

ಲಕ್ಷ್ಮಿ ಮುತ್ಲಾಜೆ ನಿಧನ

ನಾಲ್ಕೂರು ಗ್ರಾಮದ ನಡುಗಲ್ಲು ಮುತ್ಲಾಜೆ ದಿ.ಸುಬ್ಬಣ್ಣ ಗೌಡರ ಧರ್ಮಪತ್ನಿ ಲಕ್ಷ್ಮಿ ಅಲ್ಪಕಾಲದ ಅಸೌಖ್ಯದಿಂದ ಆ.13 ರಂದು ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ನಿವೃತ್ತ ಪೋಲೀಸ್ ಸೋಮಶೇಖರ್,  ರಾಧಾಕೃಷ್ಣ, ಪುತ್ರಿಯರಾದ ಭಾನುಮತಿ, ಸುನಂದಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Ad Widget

ಗುತ್ತಿಗಾರು : ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಗುತ್ತಿಗಾರು ಸಮೀಪದ ಕೆಂಬಾರೆ ಬಳಿ ವ್ಯಕ್ತಿಯೋರ್ವ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಇಂದು  ಪತ್ತೆಯಾಗಿದೆ. ಮೂರು ದಿನದ ಹಿಂದೆ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು ಮೃತದೇಹ ಕೊಳೆತ ಸ್ಥಿತಿಯಲ್ಲಿದೆ.ಮೃತರನ್ನು ಕೆಂಬಾರೆ ಕುಂಞ ನಾಯ್ಕ ಅವರ ಪುತ್ರ ಸುಕುಮಾರ ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿರುವ ಈತ ವಳಲಂಬೆಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದ.   ನಾಲ್ಕು ದಿನದ ಹಿಂದೆ ಮನೆಗೆ...

ಜಯರಾಮ ಗೌಡ ಕಟ್ರಮನೆ ನಿಧನ

ಐನೆಕಿದು ಗ್ರಾಮದ ಕಟ್ರಮನೆ ನಿವಾಸಿ ಜಯರಾಮ ಗೌಡ ಕಟ್ರಮನೆಯವರು ಇಂದು ಮುಂಜಾನೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 52ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಚಂದ್ರಕಲಾ ಮಕ್ಕಳಾದ ಸಿಂಚನ, ಸ್ನೇಹಿತ್ ಮತ್ತು ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೆ.ವಿ.ಜಿ. ಪಾಲಿಟೆಕ್ನಿಕ್ ಉದ್ಯೋಗಿ ಜಯಪ್ರಕಾಶ್ ಅನಾರೋಗ್ಯದಿಂದ ನಿಧನ

ಕನಕಮಜಲು ಗ್ರಾಮದ ಪಲ್ಲತ್ತಡ್ಕ ದಿ. ಶಿವರಾಮ ಗೌಡರ ಪುತ್ರ ಕೆ.ವಿ.ಜಿ .ಪಾಲಿಟೆಕ್ನಿಕ್ ಉದ್ಯೋಗಿ ಜಯಪ್ರಕಾಶ್ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಕೆಲ ಸಮಯದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರು ತಾಯಿ ದೇವಕಿ, ಪತ್ನಿ ಶರತ್ ಕುಮಾರಿ ( ಪ್ರಮೀಳಾ), ಪುತ್ರ ಧನ್ವಿತ್, ಪುತ್ರಿ ತನ್ವಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕುಶಾಲನಗರ : ಕಾರು ಬೈಕ್ ಭೀಕರ ಅಪಘಾತ ; ಪೆರುವಾಜೆಯ ಯುವಕ ಮೃತ್ಯು

ಕುಶಾಲನಗರದ ಆನೆಕಾಡು ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬೈಕ್‌ ಸವಾರ ಪೆರುವಾಜೆಯ ಕಾರ್ತಿಕ್ ಭಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಅವಿವಾಹಿತರಾಗಿದ್ದ ಅವರು ಮೈಸೂರಿನ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಅರ್ನಾಡಿ ವಿಷ್ಣು ಭಟ್ ರವರ ಪುತ್ರ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್...

ಶಿವರಾಮ ಗೌಡ ಎಣ್ಣೆಮಜಲು ನಿಧನ

ಬಳ್ಪ ಗ್ರಾಮದ ಶಿವರಾಮ ಗೌಡ ಎಣ್ಣೆಮಜಲು ಆ.02 ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲೀಲಾವತಿ, ಪುತ್ರ ಪುನಿತ್, ಪುತ್ರಿಯರಾದ ಶ್ರೀಮತಿ ವಾಣಿ, ಶ್ರೀಮತಿ ವೀಣಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ನಿತಿನ್ ಕೊಯಿಂಗೋಡಿ ನಿಧನ

ಸುಳ್ಯ ಕಸಬಾ ಗ್ರಾಮದ ಕೊಯಿಂಗೋಡಿ ದಿ.ಭವಾನಿ ಪ್ರಸಾದ್ ರವರ ಪುತ್ರ ನಿತಿನ್ ಕೊಯಿಂಗೋಡಿ(35ವ) ಯವರು ಅಸೌಖ್ಯದಿಂದ ಜು.25 ರಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು.ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜು.25 ರಂದು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.ಮೃತರು ತಾಯಿ ಕವಿತಾ, ಪತ್ನಿ ಶಿಲ್ಪ, ಪುತ್ರ ಪ್ರಿಯಂಷು, ಸಹೋದರ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಏನೆಕಲ್ಲು : ಅನಾರೋಗ್ಯದಿಂದ ಮಹಿಳೆ ಮೃತ್ಯು

ಕಡಬ ತಾಲೂಕು ಏನೆಕಲ್ಲು ಗ್ರಾಮದ ಪದ್ನಡ್ಕ ದಿ.ವಿಜಯಕುಮಾರ್ ಪೂಜಾರಿಯವರ ಪುತ್ರಿ ಅಶ್ವಿನಿ(25) ಅಸೌಖ್ಯದಿಂದ ಜು.21 ರಂದು ನಿಧನರಾದರು.‌  ಅಶ್ವಿನಿ ಅವರಿಗೆ ಒಂದುವರೆ  ವರ್ಷಗಳ ಹಿಂದಷ್ಟೇ ಕೊಡಿಂಬಾಳದ ರಂಜಿತ್ ಅವರೊಂದಿಗೆ ವಿವಾಹವಾಗಿತ್ತು.  ಅನಾರೋಗ್ಯ ಎಂದು ಚಿಕಿತ್ಸೆಗೆ ಹೋದಾಗ ಬ್ಲಡ್ ಕ್ಯಾನ್ಸರ್ ಎಂದು ಗೊತ್ತಾಗಿ ಅವರು ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತಿ ರಂಜಿತ್, ತಾಯಿ...

ಆಸ್ತಿಕ್ ಬಾಳಿಕಳ ಪಾರ್ಥಿವ ಶರೀರ ಇಂದು ಅಪರಾಹ್ನ 2.15ಕ್ಕೆ ಸುಳ್ಯಕ್ಕೆ

ಸಂಜೆ ಮಡಪ್ಪಾಡಿ ಮನೆಯಲ್ಲಿ ಅಂತ್ಯಸಂಸ್ಕಾರ

ಕಣ್ಣೂರಿನ ಗೆಳೆಯನ ಮನೆಗೆ ತೆರಳಿದ್ದ ಆಸ್ತಿಕ್ ಬಾಳಿಕಳ ಕೆರೆ ನೀರಿನಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದರು.‌ ಇಂದು ಆಸ್ತಿಕ್ ರವರ ಪಾರ್ಥಿವ ಶರೀರ ಅಪರಾಹ್ನ 2.15ಕ್ಕೆ ಸುಳ್ಯಕ್ಕೆ  ತಲುಪಲಿರುವುದಾಗಿ ತಿಳಿದುಬಂದಿದೆ. ನಿವೃತ್ತ ವೈದ್ಯಾಧಿಕಾರಿ ಡಾ| ನಂದಕುಮಾರ್ ಬಾಳಿಕಳ ರವರ ಪುತ್ರ ಆಸ್ತಿಕ್ ರಾಘವ್ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜ್ ನಲ್ಲಿ ಪ್ರಥಮ ವರ್ಷದ...
Loading posts...

All posts loaded

No more posts

error: Content is protected !!