- Sunday
- October 4th, 2026
ಸುಳ್ಯ: ಸುಳ್ಯ ಕಾಂತಮಂಗಲ ಶಾಲೆಯ ಊಟದ ಹಾಲ್ ಮುಂಭಾಗದಲ್ಲಿ ಕೊಲೆ ಮಾದರಿಯಲ್ಲಿ ಶವ ಪತ್ತೆಯಾಗಿದ್ದು ಸುಬ್ರಹ್ಮಣ್ಯ ತನಿಖಾ ಠಾಣಾ ಎಸೈ ಮಹೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು ಇದೀಗ ಸ್ಥಳಕ್ಕೆ ಪುತ್ತೂರು ಡಿವೈಎಸ್ ಪಿ ಆಗಮಿಸಿದ್ದು ಪರಿಶೀಲನೆ ನಡೆಸಲಾಗುತ್ತಿದ್ದು ಮೃತಪಟ್ಟ ವ್ಯಕ್ತಿಯು ಅಪರಿಚಿತನಾಗಿದ್ದು, ಶವದ ಬಳಿಯಲ್ಲಿ ಒಂದು ಸಿಮ್ ಕಾರ್ಡ್ ಲಭ್ಯವಾಗಿದ್ದು ಅಲ್ಲದೆ ತಲೆ ಕಲ್ಲಿನಿಂದ ಜಜ್ಜಿದ...
ಯುವಕನೊಬ್ಬನ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿರುವ ರೀತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಅಜ್ಜಾವರ ಗ್ರಾಮದ ಕಾಂತಮಂಗಲದ ಶಾಲಾ ಮಕ್ಕಳ ಊಟದ ಜಗಲಿಯಲ್ಲಿ ನಡೆದಿದೆ.ಸುಮಾರು 25 – 30 ವರ್ಷದ ಅಪರಿಚಿತ ಯುವಕನ ಶವ ಎಂದು ಅಂದಾಜಿಸಲಾಗಿದೆ. ಪೋಲೀಸರು ಸ್ಥಳಕ್ಕೆ ಬಂದಿದ್ದು ಪರಿಶೀಲನೆ ನಡೆಸುತಿದ್ದಾರೆ. ಊರವರು ಜಮಾಯಿಸಿದ್ದಾರೆ.
ಆರಂತೋಡು ಪೆಟ್ರೋಲ್ ಪಂಪ್ ಸಮೀಪ ವಿದ್ಯುತ್ ಕಂಬಕ್ಕೆ ಕಾರೊಂದು ಗುದ್ದಿ ಪರಾರಿಯಾದ ಘಟನೆ ನಡೆದಿದೆ. ರಾತ್ರಿ ಅಂದಾಜು ಎರಡು ಗಂಟೆ ವೇಳೆಗೆ ಘಟನೆ ನಡೆದಿದ್ದು ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದೆ. ವಾಹನ ಹಾಗೂ ಪ್ರಯಾಣಿಕರಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಸುಬ್ರಹ್ಮಣ್ಯ ಜೂನ್ 16. ಕುಕ್ಕೆ ಸುಬ್ರಹ್ಮಣ್ಯದ ರೋಟರಿ ಕ್ಲಬ್ಬಿನ ಕಾರ್ಯ ನಿಕಟ ಪೂರ್ವ ಕಾರ್ಯದರ್ಶಿ, ಕ್ರಿಯಾಶೀಲ ಕೆಲಸಗಾರ ,ಸಮಾಜ ಸೇವಕ, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ಅವರಿಗೆ ರೋಟರಿ ಜಿಲ್ಲೆ 31 81ರ ಈ ವರ್ಷದ ತೆರೆಮರೆಯ ನಾಯಕ ಪ್ರಶಸ್ತಿ ಲಭಿಸುತ್ತದೆ. ಈ ತಿಂಗಳ...
ಗುತ್ತಿಗಾರು ಲಯನ್ಸ್ ಕ್ಲಬ್ ನ 24-25ನೇ ಸಾಲಿನ ಅಧ್ಯಕ್ಷರಾಗಿ ಕುಶಾಲಪ್ಪ ಟಿ, ಕಾರ್ಯದರ್ಶಿಯಾಗಿ ವೆಂಕಪ್ಪ ಕೇನಾಜೆ ಹಾಗೂ ಕೋಶಾಧಿಕಾರಿಯಾಗಿ ಮಣಿಯಾನ ಪುರುಷೋತ್ತಮ ನಿಯುಕ್ತಿಗೊಂಡಿರುತ್ತಾರೆ.ಉಪಾಧ್ಯಕ್ಷರುಗಳಾಗಿ ಪ್ರವೀಣ್ ಮುಂಡೋಡಿ ಮತ್ತು ಶಿವರಾಮ ಚಿಲ್ತಡ್ಕ ಅವರನ್ನು ನಿಯುಕ್ತರಾದರು. ಇತರ ಪದಾಧಿಕಾರಿಗಳಾಗಿ ಕೆ ಬಾಲಕೃಷ್ಣ, ಜಯರಾಮ ಕಡ್ಲಾರ್, ಎಂ ಕೆ ಮೋಹನಕುಮಾರ್, ಡಿ ಆರ್ ಉದಯಕುಮಾರ್, ವಿನೋದ್ ಕುಮಾರ್ ಮುಂಡೋಡಿ, ನಿತ್ಯಾನಂದ...
ಸುಬ್ರಹ್ಮಣ್ಯ, ಜೂನ್ 16: ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿ ಸ್ನಾನಘಟ್ಟ ನದಿಯಲ್ಲಿ ಸಾವಿರಾರು ಸಂಖ್ಯೆಯ ಬಟ್ಟೆ ಬರೆಗಳು ನದಿಯಲ್ಲಿ ಬಿದ್ದಿದ್ದು ಇಡೀ ನದಿಯ ನೀರು ಮಲಿನ ಗೊಂಡಿರುವುದಲ್ಲದೆ ಪಕ್ಕದ ಹರಿಯುತ್ತಿರುವ ನದಿಯ ಭಾಗಗಳಲ್ಲಿ ಕೂಡ ವಸ್ತ್ರಗಳು ತೇಲಿಕೊಂಡು ಬಂದು ಇಕ್ಕೆಲಗಳಲ್ಲಿ ಶೇಖರಣೆ ಗೊಂಡಿರುತ್ತದೆ. ಇದನ್ನು ಮನಗಂಡ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್...
ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ಈ ಚುನಾವಣೆ ನಡೆಸಲಾಯಿತು. ಮೊದಲಿಗೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜೊತೆ ಶಾಲಾ ಗವರ್ನರ್ ಗೆ ನಾಮಪತ್ರ ಸಲ್ಲಿಸಿದರು. ಮರುದಿನ ನಾಮಪತ್ರ ಹಿಂಪಡೆಯಲು ಆವಕಾಶ ಕಲ್ಪಿಸಲಾಯಿತು. ನಂತರ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿದರು. ದಿನಾಂಕ 14-6-2024 ರಂದು...
ಉಚಿತ ಉಚಿತ ಎಂದ ಸರಕಾರದ ನಿಲುವು ಈಗ ಬೆಲೆ ಏರಿಕೆ ಖಚಿತ ಖಚಿತ ಖಚಿತ. ಕಳೆದ ವರುಷ ಬಡವರ ಸರಕಾರ ಎಂದು ಪ್ರಚಾರ ಪಡೆದು ಅಧಿಕಾರಕ್ಕೆ ಬಂದ ಈ ಸರಕಾರ ಈಗ ಏಕಾಏಕಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಬರೆಎಳೆದಿದೆ. ಹಿಂದಿನ ಬಾಗಿಲಿನಿಂದ ಕದ್ದು ಎದುರು ಬಾಗಿಲಿನಿಂದ ಉಚಿತವಾಗಿ ಕೊಡುವ ನಾಟಕವನ್ನು ಮಾಡುತ್ತ...
ಪುತ್ತೂರಿನಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ನಾಲ್ಕೂರು ಗ್ರಾಮದ ಹಾಲೆಮಜಲು ಹೊಸಹಳ್ಳಿ ನಿವಾಸಿ ಬಾಲಕೃಷ್ಣ ಆಚಾರ್ಯ ಜೂ.13ರಂದು ಕೆಲ ಕಾಲದ ಅಸೌಖ್ಯತೆಯಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ದಮಯಂತಿ, ಪತ್ನಿ ಕಾವ್ಯ, ಪುತ್ರಿ ನಿದ್ವಿಕಾ, ಸಹೋದರ ಹಾಲೆಮಜಲಿನಲ್ಲಿ ಸುದ್ದಿ ವಿತರಕರಾಗಿರುವ ವಿಜಯಕುಮಾರ್, ಸಹೋದರ ಯತೀಶ್, ಸಹೋದರಿ ಶ್ರೀಮತಿ ಉಷಾ ಹಾಗೂ ಕುಟುಂಬಸ್ಥರು ಹಾಗೂ...
ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಯೋಗ ತರಬೇತಿ ಶಿಬಿರ ಉದ್ಘಾಟನೆಗೊಂಡಿತು. ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಆಯುರ್ವೇದ ತಜ್ಞವೈದ್ಯ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅತಿಥಿಗಳನ್ನು ಸ್ವಾಗತಿಸಿದರು . ಯೋಗ ಶಿಕ್ಷಕ ಚಂದ್ರಶೇಖರ್ ಎನ್ . ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಹಲವರು ಶಿಬಿರಾರ್ಥಿಗಳು ಭಾಗವಹಿಸಿದರು .ಸರಳಪ್ರಾಣಾಯಾಮ , ಯೋಗಾಸನಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ಪ್ರಯೋಜನಗಳನ್ನು ವಿವರಿಸಲಾಯಿತು...
Loading posts...
All posts loaded
No more posts
