- Sunday
- September 20th, 2026
ಪಂಜದಲ್ಲಿ ಹಲವು ವರ್ಷಗಳಿಂದ ರಿಕ್ಷಾ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕಿಶೋರ್ ಕಮಿಲ ಇವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರು ತೀರ ಬಡತನದಲ್ಲಿರುವುದನ್ನು ಗಮನಿಸಿ ಬಿಎಂಎಸ್ ಸಂಘದ ಸದಸ್ಯರೆಲ್ಲರೂ ಸೇರಿ ಸಂಗ್ರಹಿಸಿದ 7,410 ರೂಪಾಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ -ಪಂಜ ಇದರ ನೂತನ ಅಧ್ಯಕ್ಷರಾಗಿ ಕವನ್ ಪಲ್ಲೋಡಿ, ಕಾರ್ಯದರ್ಶಿ ಯಾಗಿ ಪ್ರದೀಪ್ ಪಲ್ಲೋಡಿ, ಗೌರವಾಧ್ಯಕ್ಷರಾಗಿ ನೇಮಿರಾಜ್ ಪಲ್ಲೋಡಿ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಪಲ್ಲೋಡಿ, ಕೋಶಾಧ್ಯಕ್ಷರಾಗಿ ಮಹೇಶ್ ಪಲ್ಲೋಡಿ, ಜತೆ ಕಾರ್ಯದರ್ಶಿ ಅಶೋಕ್ ದೇರಾಜೆ ಆಯ್ಕೆಯಾಗಿದ್ದಾರೆ.
ಕೊಲ್ಲಮೊಗ್ರದಲ್ಲಿ ಲಾಸ್ಯ ಕಲಾಶಾಲೆಯ ನೇತೃತ್ವದಲ್ಲಿ ಮಾ.7 ರಿಂದ ನೃತ್ಯ ತರಬೇತಿ ಆರಂಭವಾಗಲಿದೆ. ಪ್ರತಿ ಆದಿತ್ಯವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಮಯೂರ ಕಲಾ ಮಂದಿರದಲ್ಲಿ ತರಬೇತಿ ನಡೆಯಲಿದೆ ಎಂದು ಸಂಯೋಜಕಿ ರೇಷ್ಮಾ ಕಡ್ಯ ತಿಳಿಸಿದ್ದಾರೆ.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.11 ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದೆ. ಸಂಜೆ ಗಂಟೆ 5.00 ರಿಂದ ಶತರುದ್ರಾಭಿಷೇಕ, ರಾತ್ರಿ ಗಂಟೆ 9.30 ಕ್ಕೆ ಮಹಾಪೂಜೆ ನಡೆಯಲಿದೆ. ರಾತ್ರಿ ಗಂಟೆ 10.00 ರಿಂದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ " ಬೂಡುದ ಭಂಡಾರ ” ತುಳು ಯಕ್ಷಗಾನ ಬಯಲಾಟ...
ಕಾಂಚೋಡು ಶ್ರೀ ಮಂಜುನಾಥೇಶ್ವರದೇವಾಲಯದಲ್ಲಿ ಮಾ. 11 ರಂದು ಮಹಾಶಿವರಾತ್ರಿ ಉತ್ಸವ ಜರುಗಲಿದೆ. ಉತ್ಸವದ ಅಂಗವಾಗಿ ಸಂಜೆ ಗಂಟೆ 6 ರಿಂದ ಶತರುದ್ರಾಭಿಷೇಕ, ರಂಗಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಯಸ್.ಬಿ.ದಳರವರು ತಿಳಿಸಿದ್ದಾರೆ.
ಭಾರತ ಸರ್ಕಾರದ ದಕ್ಷಿಣ ನೈರುತ್ಯ ರೈಲ್ವೇಯ ವಿಭಾಗೀಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ( Zonal Railway User Consultative Commitee of South Western) ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ನೇಮಕಗೊಂಡಿದ್ದಾರೆ.ಈ ಬಗ್ಗೆ ರೈಲ್ವೇ ಸಚಿವಾಲಯ ಕಾರ್ಯಾಲಯದಿಂದ ಅಧಿಸೂಚನೆ ಬಂದಿದ್ದು ಮುಂದಿನ ಎರಡು ವರ್ಷಗಳ ಕಾಲ ಇವರು...
ಕೋವಿಡ್ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ತಡವಾಗಿ ಶಾಲೆಗಳು ಆರಂಭವಾಗಿರುವ ಹಿನ್ನಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾರ್ಚ್ ತಿಂಗಳ ಬದಲಿಗೆ, ಜೂನ್ 21 ರಿಂದ ಜುಲೈ 5 ರವರೆಗೆ ನಡೆಯಲಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್, ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು...
ನೆಹರೂ ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿನಯುವ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯೂಎಸಿ ವತಿಯಿಂದ ಅಗ್ನಿ ಅವಘಡಗಳ ಅರಿವು ಮತ್ತುಅಗ್ನಿ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಸುಳ್ಯದ ಅಗ್ನಿ ಶಾಮಕ ಠಾಣೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಶ್ರೀಮತಿ ರತ್ನಾವತಿ ಡಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಇಂತಹ...
ನ.ಪಂ.ನ ಆವರಣದಲ್ಲಿರು ಪ್ಲಾಸ್ಟಿಕ್ ಕಸ ವಿಲೇವಾರಿಗೆ ಬರ್ನಿಂಗ್ ಮೆಷಿನ್ ಪಂಚಾಯತ್ ಆವರಣ ತಲುಪಿದ್ದು ಶೀಘ್ರವೇ ಕಸ ವಿಲೇವಾರಿ ಆಗಲಿದೆ ಎಂದು ನ.ಪಂ.ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಆದರೇ ನ.ಪಂ.ಆವರಣಕ್ಕೆ ಪ್ಲಾಸ್ಟಿಕ್ ಪ್ರೆಸ್ಸಿಂಗ್ ಮೆಷಿನ್ ನಂತೆ ಕಂಡುಬರುತ್ತಿದ್ದು ಹಾಗೂ ಹಳೆಯದಾಗಿದ್ದು ಈ ಯಂತ್ರದಿಂದ ಎಲ್ಲಾ ತ್ಯಾಜ್ಯ ವಿಲೇವಾರಿ ಸಾಧ್ಯವೇ ಅಥವಾ ಎಲ್ಲಾ ತ್ಯಾಜ್ಯ ನಿರ್ವಹಣೆಗೆ ಬೇರೆ ಯಂತ್ರ ಇದೇ...
ಕೋಟೆಮುಂಡುಗಾರಿನಲ್ಲಿ ಫೆ. 26 ರಿಂದ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಕೈಕೊಟ್ಟಿದ್ದು ಇದುವರೆಗೆ ನೆಟ್ವರ್ಕ್ ಸರಿಯಾಗದೇ ಜನ ಪೇಚಿಗೆ ಸಿಲುಕಿದ್ದಾರೆ. 4 ದಿನಗಳಿಂದ ಬಿ ಎಸ್ ಎನ್ ಎಲ್ ಸ್ತಬ್ದವಾಗಿದ್ದು ಬೇರೆ ನೆಟ್ವರ್ಕ್ ವ್ಯವಸ್ಥೆ ಇಲ್ಲದೆ ತುರ್ತು ಅಗತ್ಯಗಳಿಗೆ ಪರದಾಡುವಂತಾಗಿದೆ. ಓ ಎಫ್ ಸಿ ಕಡಿತಗೊಂಡಿರುವುದು ನೆಟ್ವರ್ಕ್ ಸಮಸ್ಯೆಗೆ ಕಾರಣವಾಗಿದ್ದು ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಲು...
Loading posts...
All posts loaded
No more posts
