- Monday
- September 21st, 2026
ಕಾಯರ್ತೋಡಿಯಲ್ಲಿರುವ ಶ್ರೀ ವರದಾಯಿನಿ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನದಲ್ಲಿ ಎ.11, 12 ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರಮದಾನ ಕಾರ್ಯಕ್ರಮ ಏ.4 ರಂದು ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಮೊಕೇಸರರಾದ ಡಿ.ಎಸ್.ಕುಶಾಲಪ್ಪ, ಡಿ.ಎಸ್.ಗಿರೀಶ್ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಸರಗೋಡು ವಿಧಾನ ಸಭಾ ಕ್ಷೇತ್ರ ಅಭ್ಯರ್ಥಿ ಕೆ. ಶ್ರೀಕಾಂತ್ ಅವರ ಪರವಾಗಿ ಕಾರಡ್ಕ ಗ್ರಾಮ ಪಂಚಾಯತ್ ವಠಾರದ ಅಂಬಿಕಾ ನಗರದಲ್ಲಿ ಬಿಜೆಪಿ ಸುಳ್ಯ ಮಂಡಲದ ವತಿಯಿಂದ, ಮತ ಯಾಚಿಸಲಾಯಿತು. ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬೂಡು ರಾಧಾಕೃಷ್ಣ ರೈ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಜಗದೀಶ್ ಸರಳಿಕುಂಜ, ಬಿಜೆಪಿ...
ಕೋವಿಡ್ -19 ವೈರಾಣುವಿನ ವಿರುದ್ದ ಈಗಾಗಲೇ ದೇಶಾದ್ಯಂತ ಕೋವಿಶೀಲ್ಡ್ ಲಸಿಕೆಯನ್ನು ಫ್ರಂಟ್ ಲೈನ್ ವರ್ಕರ್ಸ್, 60 ವರ್ಷ ದಾಟಿದ ವಯಸ್ಕರು ಮತ್ತು 45-59 ವರ್ಷ ವಯೋಮಾನದ ಬಿಪಿ, ಶುಗರ್,ಅಸ್ತಮಾ, ಹೃದಯ, ಕಿಡ್ನಿ ಸಂಬಂಧಿತ ತೊಂದರೆ ಇರುವವರಿಗೆ ಮೊದಲ ಆದ್ಯತೆಯಲ್ಲಿ ನೀಡಲಾಗಿದೆ. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು ವಾರದ...
ಬೆಳ್ಳಾರೆ ಟೌನ್ ರೊಟರಿ ಕ್ಲಬ್ ವತಿಯಿಂದ ನಿವೃತ್ತ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ ಯವರಿಗೆ ಸನ್ಮಾನ ಕಾರ್ಯಕ್ರಮ ಏ.1 ರಂದು ನಡೆಯಿತು.
ಪೆರುವಾಜೆ ಗ್ರಾಮ ಪಂಚಾಯತ್ ನ ಎದುರುಗಡೆ ರೋಟರಿ ಕ್ಲಬ್ ಬೆಳ್ಳಾರೆ ಹಾಗೂ ಭಾವೈಕ್ಯ ಯುವಕ ಮಂಡಲ (ರಿ.) ಪೆರುವಾಜೆಯ ಸಹಭಾಗಿತ್ವದಲ್ಲಿ ಯುವಕ ಮಂಡಲದ ಪೂರ್ವಾಧ್ಯಕ್ಷರಾದ ದಿ.ಪ್ರೇಮನಾಥ ರೈ ರವರ ಸ್ಮರಣಾರ್ಥವಾಗಿ ನಿರ್ಮಿಸಿದ ನೂತನ ಬಸ್ಸು ತಂಗುದಾಣವನ್ನು ಎ.01ರಂದು ಉದ್ಘಾಟಿಸಲಾಯಿತು.ಉದ್ಘಾಟನೆಯನ್ನು ರೋಟರಿಯ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ,...
ನೀನಾಸಂ ರಂಗ ಶಿಕ್ಷಣ ಕೇಂದ್ರ ಹೆಗ್ಗೋಡು ಆಶ್ರಯದಲ್ಲಿ ಎಪ್ರಿnoಲ್ 11 ರಿಂದ ನಡೆಯುವ ಒಂದು ತಿಂಗಳ ರಾಜ್ಯಮಟ್ಟದ ರಂಗ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಲು ಸುಳ್ಯ ತಾಲೂಕು ಕಲ್ಮಕಾರು ಇಲ್ಲಿನ ಹಳ್ಳಿ ಪ್ರತಿಭೆ ಮಮತಾ ಕೆ.ಆಯ್ಕೆಯಾಗಿದ್ದಾರೆ. ಕರ್ನಾಟಕ ಅರೆಭಾಷೆ ಅಕಾಡೆಮಿ ವತಿಯಿಂದ ರಾಜ್ಯಾದ್ಯಂತ ನಡೆದ,ಜೀವನ್ ರಾಂ ಸುಳ್ಯ ನಿರ್ದೇಶನದ ಸಾಹೇಬ್ರು ಬಂದವೇ ಅರೆಭಾಷೆ ನಾಟಕದ...
ಅರಂತೋಡು ಗ್ರಾಮದ ದೇರಾಜೆ ಮನೆಯ ಕಮಲಾಕ್ಷರವರ ಪುತ್ರ ರಾಜೇಶ್ ದೇರಾಜೆ ಮಾ.31 ರಂದು ಹೃದಯಾಘಾತದಿಂದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು. ರಾತ್ರಿ ಲೋ ಬಿ.ಪಿ.ಯಿಂದ ಅಸ್ವಸ್ಥಗೊಂಡ ಅವರನ್ನು ಮನೆಯವರು ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದಿದ್ದರು.ಮೃತರು ತಂದೆ, ತಾಯಿ ಯಶೋದಾ, ಪತ್ನಿ ರಚನಾ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ, ಸಹೋದರ ಸತೀಶ್...
ಸುಳ್ಯದ ಖಾಸಗಿ ಬಸ್ಸು ನಿಲ್ದಾಣ ಬಳಿ ಇರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಕಳ್ಳರು ನುಗ್ಗಿ ಚಿನ್ನ, ನಗದು ಕಳವು ಮಾಡಿದ್ದಾರೆ. ಜ್ಯುವೆಲ್ಲರಿ ಅಂಗಡಿಯ ಬೀಗ ಒಡೆದ ಕಳ್ಳರು ಸುಮಾರು 10 ಲಕ್ಷ ಮೌಲ್ಯದ ಚಿನ್ನ ಹಾಗೂ ಸುಮಾರು ಐವತ್ತು ಸಾವಿರ ರೂಪಾಯಿ ಕಳವುಗೈದಿದ್ದಾರೆನ್ನಲಾಗಿದೆ. ಪತ್ರಿಕಾ ವಿತರಕರು ಅಂಗಡಿಗೆ ಪತ್ರಿಕೆ ಹಾಕುವ ಸಂದರ್ಭದಲ್ಲಿ ಬೀಗ ಒಡೆದಿರುವುದು...
ಬೇಕಾಗಿದ್ದಾರೆ : ಗುತ್ತಿಗಾರಿನ ಕಾಳಿಕಾಂಬ ಇಂಡಸ್ಟ್ರೀಸ್ ಗೆ ನುರಿತ ವೆಲ್ಡರ್ ಬೇಕಾಗಿದ್ದಾರೆ. ಸಂಪರ್ಕಿಸಿ : 9481633172, 8762478533
ಮಂಡೆಕೋಲು ಗ್ರಾಮದ ಪೇರಾಲು ಶ್ರೀ ರಾಮ ಮಂದಿರದ ಪುನಃ ಪ್ರತಿಷ್ಠಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಾ.29 ರಂದು ಜರಗಿತು. ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್. ಗೋಪಾಲ್ ರಾವ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು. ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ್ ನೀರ್ಪಾಡಿ ವಹಿಸಿದ್ದರು. ಅತಿಥಿಗಳಾಗಿ ಮುಚ್ಚಿರಡಿ ಕ್ಷೇತ್ರದ ಮೊಕ್ತೇಸರ ಕುಕ್ಕೇಟಿ ಲಕ್ಷ್ಮಣ...
Loading posts...
All posts loaded
No more posts
