- Friday
- April 18th, 2025

ಕೊರೊನ ವೈರಸ್ ಹಿನ್ನೆಲೆಯಲ್ಲಿ ಜಾಗೃತಿ ಗೊಂಡಿರುವ ಮುಸಲ್ಮಾನ ಬಾಂಧವರು ಈ ಬಾರಿಯ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿ ಕೊಳ್ಳುವ ಉದ್ದೇಶದಿಂದ ಯಾವುದೇ ರೀತಿಯ ಹೊಸ ಉಡುಪುಗಳನ್ನು ಧರಿಸದೆ ಸರಳತೆಯಿಂದ ಆಚರಿಸಲು ನಿರ್ಧರಿಸಿದಂತಿದೆ. ಇದೇ ಕಾರಣದಿಂದ ಸುಳ್ಯದ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಬಟ್ಟೆ ಹಾಗೂ ಫೂಟ್ ವೇರ್ ಅಂಗಡಿಗಳಲ್ಲಿ ಮುಸಲ್ಮಾನ ಗ್ರಾಹಕರುಗಳಿಲ್ಲದೆ ವ್ಯಾಪಾರ ವಹಿವಾಟುಗಳು ಮಂಕಾಗಿರುವಂತೆ...

ಕೊರೊನಾ ವಿಪತ್ತು ನಿರ್ವಹಣೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ವಿರುದ್ಧ ವಿಫಲರಾಗಿದ್ದಾರೆ ಎನ್ನುವ ಆರೋಪ ಹೆಣೆಯುವ ಮೂಲಕ ಈ ಷಡ್ಯಂತ್ರ ನಡೆಯುತ್ತಿದೆ.ಸ್ವತ ಅಧಿಕಾರಿಗಳಿಂದಲೇ ಈ ರೀತಿಯ ವ್ಯವಸ್ಥಿತ ಸಂಚು ನಡೆಯುತ್ತಿದೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ. ಸಿಂಧು ಬಿ ರೂಪೇಶ್ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೊರೊನಾ ಮಹಾಮಾರಿಯಂತ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಅನಿವಾರ್ಯ...

ಉದ್ಯೋಗ ನಿಮಿತ್ತ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿದ್ದ ಅಮರಮುಡ್ನೂರು ಗ್ರಾಮದ ನಿವಾಸಿಗಳು ಸರಕಾರದಿಂದ ಪಾಸ್ ಪಡೆದು ಸ್ವಂತ ಊರಿಗೆ ಬಂದಿದ್ದಾರೆ. ಇವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೇನ್ ನಲ್ಲಿ ಇಡಲಾಗಿದೆ. ಗ್ರಾಮ ಪಂಚಾಯತ್ ಕಾರ್ಯಪಡೆಯವರು ತಮಗೆ ಬಂದ ಮಾಹಿತಿ ಹಿನ್ನಲೆಯಲ್ಲಿ ಕುಕ್ಕುಜಡ್ಕ ಸರಕಾರಿ ಶಾಲೆಯಲ್ಲಿ ಮೂರು ಮಂದಿಯನ್ನು ಇನ್ಸಿಟ್ಯೂಶನಲ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಇದರ ಮೇಲುಸ್ತುವಾರಿಯನ್ನು ಗ್ರಾಮ ಮಟ್ಟದ...

ಬೆಳ್ಳಾರೆಯ ಮೇಲಿನ ಪೇಟೆ ಸಿಂಡಿಕೇಟ್ ಬ್ಯಾಂಕ್ ಸಮೀಪ ಇಂದು ಮುಂಜಾನೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ತುಂಬಿ ಕೆಸರುಮಯವಾಗಿದೆ.ಪ್ರತೀ ವರ್ಷವೂ ಇಲ್ಲಿ ಮಳೆಗಾಲದಲ್ಲಿ ನೀರು ನಿಂತು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು ಇದನ್ನು ಈ ವರ್ಷವಾದರೂ ಇಲಾಖೆ ಗಮನ ಹರಿಸಿ ಸರಿಯಾದ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು ಅದರ ಪ್ರಭಾವದಿಂದಮುಂದಿನ 3 ದಿನಗಳ ಕಾಲ ಜಿಲ್ಲೆಯಾದ್ಯಂತ ಭಾರೀ ಮಳೆ ಬೀಳುವ ಬಗ್ಗೆ ಮಾಹಿತಿ ದೊರೆತಿದೆ.ದಕ್ಷಿಣ ಕರಾವಳಿ ಭಾಗದಲ್ಲಿ ಅಂಫಾನ್ ಚಂಡಮಾರುತ ಬಂದರೇ ಭಾರಿ ವೇಗದಲ್ಲಿ ಗಾಳಿ ಬೀಸಲಿದೆ. ಜಿಲ್ಲಾಡಳಿತ ವು ಜಿಲ್ಲೆಯಲ್ಲಿ ೩ ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಿಸಿದ್ದಾರೆ.ಆದುದರಿಂದ...

ಸಂಪಾಜೆ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಮುಂಡಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು ಈ ಸಭೆಯಲ್ಲಿ ಈ ಕೆಳಗಿನ ನಿರ್ಣಯವನ್ನು ಕೈಗೊಳ್ಳಲಾಯಿತು. ಪೇಟೆಯಲ್ಲಿ ವರ್ತಕರು ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕಲ್ಲುಗುಂಡಿ ಸರಕಾರಿ ಶಾಲೆಯಲ್ಲಿ ಕೋರಂಟೈನ್ ಗೆ ವ್ಯವಸ್ಥೆ ಹೊರ ರಾಜ್ಯ ಜಿಲ್ಲೆಯಿಂದ ಬಂದವರ ಬಗ್ಗೆ ಗಮನ ಹರಿಸುವುದು, ಗ್ರಾಮ...

ಕೊಡಿಯಾಲ ಗ್ರಾಮದ ರಾಮಕುಮೇರು ಎಂಬಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಮೇ. 18 ರಂದು ಸಂಜೆ ನಡೆದಿದೆ.ರಾಮಕುಮೇರು ದಿ. ಸೋಮಶೇಖರ ಕುಂದಲ್ಪಾಡಿ ಎಂಬವರ ಪುತ್ರ ನಿಶಾಂತ್ (17 ) ಮನೆಯ ಸಮೀಪದ ಮಾವಿನ ಮರದಿಂದ ಅಲ್ಯುಮಿನಿಯಂ ಗಳೆಯಿಂದ ಮಾವಿನ ಹಣ್ಣನ್ನು ಕೊಯ್ಯುತ್ತಿರುವಾಗ ಸಮೀಪವಿದ್ದ ವಿದ್ಯುತ್ ಲೈನ್‌ಗೆ ಗಳೆ ತಾಗಿ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ...

ಬಾಳೆ ಕೋಡಿಮಠದ ಮಠಾಧೀಶರಾದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರು ಮೇ. 18 ರಂದು ರಾತ್ರಿ ಇಹಲೋಕ ತ್ಯಜಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮುರ ಬಾಳೆ ಕೋಡಿಮಠದ ಮಠಾಧೀಶರಾದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಸಾಹಿತ್ಯ ಪ್ರೇಮಿಗಳು, ಅನೇಕ ಪ್ರಶಸ್ತಿ ಪುರಸ್ಕೃತರು, ಗೌರವ ಡಾಕ್ಟರೇಟ್ ಪದವಿಧರರು, ಮಠದ ಮೂಲಕ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು...

ಗುತ್ತಿಗಾರಿನಲ್ಲಿ ಮೇ ಕೊನೆಯ ತನಕ ಸಂಜೆ ೫ ಗಂಟೆವರೆಗೆ ಅಂಗಡಿಗಳನ್ನು ತೆರೆಯಲು ವರ್ತಕರು ನಿರ್ಧರಿಸಿದ್ದಾರೆ. ಮೇ ೧೮ ರಂದು ನಡೆದ ಗ್ರಾ.ಪಂ. ಮತ್ತು ವರ್ತಕರ ಸಂಘದ ಜಂಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ವರ್ತಕರ ಸಂಘ ತಿಳಿಸಿದೆ.

ಈ ಸಂಕಷ್ಟದ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೆಲವೊಂದು ಯೋಜನೆಗಳನ್ನು ಪ್ಯಾಕೇಜ್ ಮೂಲಕ ಘೋಷಿಸಿರುವುದನ್ನು ಸ್ವಾಗತಿಸುವುದಾದರೂ ಅದರ ಸಾಧಕ ಭಾದಕ ಮತ್ತು ಅದರ ಜಾರಿ ಹಿನ್ನಲೆಯ ಬಳಿಕವಷ್ಟೇ ಯೋಜನೆಯ ಪ್ರಾಮುಖ್ಯತೆ ಜನರಿಗೆ ತಿಳಿಯಬಹುದು.ವಾಸ್ತವವಾಗಿ ಜನ ಸಾಮಾನ್ಯ ಈ ಮೂರು ತಿಂಗಳ ಅವಧಿಯಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಮಾತನಾಡುತ್ತಿರುವುದೇ ಹೆಚ್ಚು. ಉದಾಹರಣೆಗೆ ಲಾಕ್ ಡೌನ್ ಮಾಡುವ...

All posts loaded
No more posts