Ad Widget

ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿ ನೂತನ ಆಡಳಿತ ಮಂಡಳಿ ರಚನೆ : ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ- ಉಪಾಧ್ಯಕ್ಷ ಸುರೇಶ್ ಕಣೆಮರಡ್ಕ

ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆಯ ನೇತೃತ್ವದಲ್ಲಿ ಫೆ. 11 ರಂದು ಮೀನುಗಾರಿಕಾ ಸಚಿವರಾದ ಎಸ್. ಅಂಗಾರರವರ ಸುಳ್ಯದ ಕಛೇರಿಯಲ್ಲಿ ನಡೆದ ಸಭೆಯಲ್ಲಿ "ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿ ಲಿಮಿಟೆಡ್” ಇದರ ನೂತನ ಆಡಳಿತ ಮಂಡಳಿಯ ರಚನೆ ನಡೆಯಿತು. ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳಾಗಿ 11 ಜನರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್‌ ಕುಮಾರ್‌ ಮೇನಾಲ, ಉಪಾಧ್ಯಕ್ಷರಾಗಿ...

ಸುಬ್ರಹ್ಮಣ್ಯ : ತರಕಾರಿ ಬೀಜ ವಿತರಣಾ ಕಾರ್ಯಕ್ರಮ – ತಾಳೆ ಕೃಷಿ ಮಾಹಿತಿ ಕಾರ್ಯಕ್ರಮ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ತೋಟಗಾರಿಕಾ ಇಲಾಖೆ ಸುಳ್ಯ ಇದರ ವತಿಯಿಂದ ಫೆ.11 ರಂದು ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಮತ್ತು ರೈತ ಉತ್ಪಾದಕ ಸಂಸ್ಥೆ ರಚಿಸುವ ಬಗ್ಗೆ ಮಾಹಿತಿ ಹಾಗೂ ತಾಳೆ ಬೆಳೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.ಸುಬ್ರಹ್ಮಣ್ಯ...
Ad Widget

ಅಜ್ಜಾವರ ಮಂಡೆಕೋಲು ಉತ್ಸಾಹಿ ರೈತರ ಗುಂಪಿನ ಪ್ರಥಮ ಜೇನು ಕೊಯಿಲು ಕಾರ್ಯಕ್ರಮ

ರೈತರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ ರಚನೆಗೆ ಕೇಂದ್ರ ಸರಕಾರ ಈಗಾಗಲೇ ಕರೆಕೊಟ್ಟಂತೆ ರಚನೆಗೊಂಡ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ (ರಿ) ಪುತ್ತೂರು ಇದರ ವತಿಯಿಂದ ನಡೆಯುತ್ತಿರುವ ವಿನೂತನ ಒಪ್ಪಂದ ಆಧಾರಿತ ಜೇನು ಕೃಷಿ ಕಾರ್ಯಕ್ರಮದಲ್ಲಿ ಈಗಾಗಲೇ ಜೇನು ಕೃಷಿಯಲ್ಲಿ ತೊಡಗಿಕೊಂಡ ಅಜ್ಜಾವರ ಮಂಡೆಕೋಲು ಉತ್ಸಾಹಿ ರೈತರ ಗುಂಪಿನ ಪ್ರಥಮ ಜೇನು...

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದಲ್ಲಿ ವಿಶೇಷ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ದಿನಾಂಕ 20/01/ 2022 ರಂದು ಸಂಘದ ಆಶ್ರಯದಲ್ಲಿ ಮತ್ತು ನೆಟ್ ಸರ್ಪ್ ಕಂಪನಿ ಸಹಯೋಗದಲ್ಲಿ ವಿಶೇಷ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ರೈತ ಸ್ನೇಹಿತರ ಕೂಟ ಮತ್ತು ಸಾಯ ಎಂಟರ್ ಪ್ರೈಸಸ್ ಪುತ್ತೂರು ಸಹಯೋಗದಲ್ಲಿ ಅಡಿಕೆ ಕೊಯ್ಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ...

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ – 100 ಕೋಟಿಗೂ ಮಿಕ್ಕಿ ವ್ಯವಹಾರ,43.5ಲಕ್ಷ ನಿವ್ವಳ ಲಾಭ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-21 ನೇ ಸಾಲಿನವಾರ್ಷಿಕ ಮಹಾಸಭೆಯು ಡಿ.19 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು. ಸಂಘವು ರೂ.100 ಕೋಟಿ 42 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.43ಲಕ್ಷ 64,287.81 ನಿವ್ವಳ ಲಾಭ ಗಳಿಸಿದೆ. ರೂ.1,73,03,559.32 ವಿವಿಧ ನಿಧಿಗಳಿವೆ. ರೂ.13,65,59,169.95...

ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ- ಸಂಘಕ್ಕೆ ನಿವ್ವಳ ಲಾಭ ರೂ.52,10,897.61/-, ಸದಸ್ಯರಿಗೆ 6% ಡಿವಿಡೆಂಡ್

ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ.) ಅಲೆಕ್ಕಾಡಿ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯ ಡಿ.19 ಆದಿತ್ಯವಾರದಂದು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ, ಅಲೆಕ್ಕಾಡಿಯಲ್ಲಿ ಸಂಘದ ಅಧ್ಯಕ್ಷರಾದ ವಸಂತ ಹೆಚ್ ಹುದೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ಕೃಷಿಕರಾದ ಗಿರಿಯಪ್ಪ ಗೌಡ ದೀಪ ಬೆಳಗಿಸಿ ಮಹಾಸಭೆಯನ್ನು ಉದ್ಘಾಟಿಸಿದರು. ಸಂಘದ ಮುಖ್ಯ...

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ – ಸಂಘಕ್ಕೆ ರೂ.24,90,223.32/- ನಿವ್ವಳ ಲಾಭ, ಸದಸ್ಯರಿಗೆ 4% ಡಿವಿಡೆಂಡ್ ಘೋಷಣೆ

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಎಡಮಂಗಲ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಎಂ.ರಾಮಕೃಷ್ಣ ರೈ ಮಾಲೆಂಗ್ರಿ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಎಡಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ.ಡಿ ಕಾರ್ಯಸೂಚಿ ಮಂಡಿಸಿದರು. 2020-21ನೇ ಸಾಲಿನಲ್ಲಿ ಸಂಘವು ರೂ.24,90,223.32/- ನಿವ್ವಳ ಲಾಭ ಗಳಿಸಿದ್ದು,...

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ- ಒಟ್ಟು ಲಾಭಾಂಶ ರೂ.20,78,434.33, ಸದಸ್ಯರಿಗೆ 3% ಡಿವಿಡೆಂಡ್ ಘೋಷಣೆ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರಾಘವೇಂದ್ರ.ಪಿ.ಕೆ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಸಂಘದ ಸಭಾಭವನ 'ಅಮರ ಸಹಕಾರ ಸೌಧ' ಕುಕ್ಕುಜಡ್ಕದಲ್ಲಿ ನಡೆಯಿತು.ಸಂಘದ ನಿರ್ದೇಶಕ ಗಣೇಶ್ ಪಿಲಿಕಜೆ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷರಾದ ರಾಘವೇಂದ್ರ.ಪಿ.ಕೆ ಸರ್ವರನ್ನು ಸ್ವಾಗತಿಸಿ, ಸಂಘವು 2020-21ನೇ ಸಾಲಿನಲ್ಲಿ ರೂ.20,78,434.33/- ನಿವ್ವಳ...

ಮರ್ಕಂಜ : ರೈತರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ರೈತ ಸಂಘದ ಗ್ರಾಮ ಘಟಕದ ಪುನರ್ ರಚನೆ

ಕರ್ನಾಟಕ ರಾಜ್ಯ ರೈತಸಂಘ ಸುಳ್ಯ ತಾಲೂಕು ಘಟಕದ ವತಿಯಿಂದ ವಾರಕ್ಕೊಂದು ಗ್ರಾಮಭೇಟಿ ಅಭಿಯಾನದ ಮುಂದುವರೆದ ಭಾಗವಾಗಿ ಮರ್ಕಂಜ ಗ್ರಾಮವನ್ನು ಡಿ.5 ರಂದು ಭೇಟಿ ಮಾಡಲಾಯಿತು. ಮರ್ಕಂಜ ಗ್ರಾಮದಲ್ಲಿ ಅಡಿಕೆ ಎಲೆ ಹಳದಿರೋಗ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರದ ಆಯ ಜಿಲ್ಲೆಯ ಇತರ ಸಮಸ್ಯೆಗಳ ಬಗ್ಗೆ ವಿಚಾರ ಸಂಕೀರ್ಣ ಹಾಗೂ ಗ್ರಾಮ ಘಟಕದ ಪುನರ್ ರಚನೆಯ ಸಭೆಯು...

ಕಳಂಜ ಬಾಳಿಲ ಸಹಕಾರಿ ಸಂಘದಿಂದ ಶಿರಸಿಗೆ ಅಧ್ಯಯನ ಪ್ರವಾಸ, ಅನುಭವ ಹಂಚಿಕೊಂಡ ಅಧ್ಯಕ್ಷ ಎಂ.ಕೂಸಪ್ಪ ಗೌಡ

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯ ಅಧ್ಯಯನ ಪ್ರವಾಸವು ನ. 24ರಿಂದ ನ. 26ರವರೆಗೆ ನಡೆಯಿತು.ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ. ಸಂಸ್ಥೆಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದು ಸಹಕಾರ ಕ್ಷೇತ್ರದ ಬೆಳವಣಿಗೆ ಕುರಿತಂತೆ ಮಾಹಿತಿಯನ್ನು ಪಡೆದೆವು. ಈ ಸಂಸ್ಥೆಯು 1921 ರಲ್ಲಿ ಸ್ಥಾಪನೆಗೊಂಡಿದ್ದು ಪ್ರಸ್ತುತ...
Loading posts...

All posts loaded

No more posts

error: Content is protected !!