- Saturday
- September 12th, 2026
ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಎಡಮಂಗಲ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಎಂ.ರಾಮಕೃಷ್ಣ ರೈ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಪೂರ್ವಾಹ್ನ ಗಂಟೆ 11.00ಕ್ಕೆ ಸರಿಯಾಗಿ ಎಡಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಲಿದೆ. ಈ ಸಭೆಗೆ ಸಂಘದ ಎಲ್ಲಾ ಸದಸ್ಯರು ಸಕಾಲಕ್ಕೆ ಹಾಜರಾಗುವಂತೆ ಸಂಘದ ಮುಖ್ಯ...
ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ.) ಅಲೆಕ್ಕಾಡಿ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯ ಡಿ.19 ಆದಿತ್ಯವಾರ ಪೂರ್ವಾಹ್ನ ಗಂಟೆ 10.30ಕ್ಕೆ ಸರಿಯಾಗಿ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ, ಅಲೆಕ್ಕಾಡಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಹೆಚ್ ಹುದೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಗೆ ಸಂಘದ ಎಲ್ಲಾ ಸದಸ್ಯರು...
ಮಂಡೆಕೋಲು ಗ್ರಾಮದ ಕುತ್ತಿಮುಂಡ ಕುಟುಂಬದ ಶಿವಾಜಿನಗರ ನಿವಾಸಿ ಮುತ್ತಪ್ಪ ಗೌಡ ಅವರು ನ.30ರಂದು ಮನೆಯಿಂದ ಕೆಲಸಕ್ಕೆಂದು ಹೊರಟವರು ಕಾಣೆಯಾಗಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 48 ವರ್ಷ ಪ್ರಾಯದ ಇವರು ಮಂಡೆಕೋಲಿನಿಂದ ಸುಳ್ಯಕ್ಕೆ ಬಂದು ಅಲ್ಲಿಂದ ಪುತ್ತೂರಿಗೆ ಸರಕಾರಿ ಬಸ್ ಮೂಲಕ ಪ್ರಯಾಣಿಸಿರುವ ಮಾಹಿತಿ ಇದ್ದು ಯಾರಿಗಾದರೂ ಕಂಡುಬಂದಲ್ಲಿ ಸುಳ್ಯ ಠಾಣೆಯನ್ನು...
ಬೆಳ್ಳಾರೆ ಮೇಲಿನ ಪೇಟೆಯಲ್ಲಿರುವ ಬಸ್ ನಿಲ್ದಾಣದ ಎದುರುಗಡೆ ವಿದ್ಯುತ್ ಕಂಬವೊಂದು ರಸ್ತೆಗೆ ವಾಲಿದ್ದು, ಮುರಿದು ಬೀಳುವ ಸ್ಥಿತಿಯಲ್ಲಿದೆ. ಮುಖ್ಯ ರಸ್ತೆಯ ಪಕ್ಕದಲ್ಲಿರುವ ಈ ವಿದ್ಯುತ್ ಕಂಬ ಒಂದು ವೇಳೆ ಮುರಿದು ಬಿದ್ದರೆ ಘೋರ ಅನಾಹುತ ಎದುರಾಗುವುದು ಖಂಡಿತ. ಸುಳ್ಯ ತಾಲೂಕಿನಲ್ಲಿ ಸುಳ್ಯ ಪೇಟೆಯ ನಂತರ ಅತಿದೊಡ್ಡ ಪೇಟೆಯಾಗಿರುವ ಬೆಳ್ಳಾರೆಯ ಈ ರಸ್ತೆಯಲ್ಲಿ ಹಲವು ವಾಹನಗಳು ದಿನನಿತ್ಯ...
ಮಾಡಾವು ಸಬ್ ಸ್ಟೇಷನ್ ನಿಂದ ಬೆಳ್ಳಾರೆ, ನಿಂತಿಕಲ್ಲು, ಪಂಜದ ಮೂಲಕ ಗುತ್ತಿಗಾರಿಗೆ ಹಾದುಹೋಗಿರುವ ಎಚ್.ಟಿ ವಿದ್ಯುತ್ ಲೈನ್ ಕಂಬಗಳಲ್ಲಿ ಅಳವಡಿಸಲಾಗಿದ್ದ 'ಅಪಾಯ'(DANGER) ಸೂಚನಾ ಬೋರ್ಡ್ ಗಳು ಬರಿದಾಗಿದ್ದು, ಖಾಲಿ ಖಾಲಿ ಬೋರ್ಡ್ ಗಳು ಕಾಣಸಿಗುತ್ತಿವೆ. ಜನರಿಗೆ ಅಪಾಯ ಎಂಬುದನ್ನು ಮನವರಿಕೆ ಮಾಡುವ ಮೂಲಕ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಾಕಲಾಗಿರುವ ಈ ಸೂಚನಾ ಫಲಕಗಳು ಅಗತ್ಯವಿದ್ದು, ಅಕ್ಷರಗಳು...
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಇದರ ಕಾರ್ಯಕ್ರಮದಡಿಯಲ್ಲಿ ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಘಟಕವು ರಾಜ್ಯದ 34 ತಾಲೂಕುಗಳಲ್ಲಿ ಕಾರ್ಯನಿರ್ವಾಹಹಿಸುತ್ತಿದೆ. ಇದರ ಸುಳ್ಯ ತಾಲೂಕು ಸಮಿತಿಯು ನವೆಂಬರ್ 25 ರ ಗುರುವಾರದಂದು ಸುಳ್ಯ ತಾಲ್ಲೂಕಿನ ಯೋಜನಾ ಕಚೇರಿ ಸುಳ್ಯದಲ್ಲಿ ರಚನೆಗೊಂಡಿದ್ದು, ಸುಳ್ಯ ಘಟಕದ ಜಯರಾಮ್.ಪಿ.ಜಿ. ಅವರು ತಾಲೂಕು ಕ್ಯಾಪ್ಟನ್ ಆಗಿ ಹಾಗೂ ಸಹ ಕ್ಯಾಪ್ಟನ್...
ದಿ. 30/10/2021 ರಂದು ಭಾನುವಾರ ಸುಳ್ಯದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ಪವಿತ್ರಾ- ಗುಣಪಾಲ ಇವರ ವಿವಾಹ ಸಮಾರಂಭದಲ್ಲಿ ಚೈನೊಂದು ಬಿದ್ದುಸಿಕ್ಕಿರುತ್ತದೆ. ಕಳೆದುಕೊಂಡವರು ಸರಿಯಾದ ವಿವರವನ್ನು ತಿಳಿಸಿ ಪಡೆದುಕೊಳ್ಳಲು ವಿನಂತಿಸಲಾಗಿದೆ. ಸಂಪರ್ಕಿಸಬೇಕಾದ ಸಂಖ್ಯೆ 8971308355, 6362414844, 9482384692
ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ವತಿಯಿಂದ ನಡೆಯುವ ಒಂಭತ್ತನೇ ವರ್ಷದ ಶ್ರೀಕೃಷ್ಣಜನ್ಮಾಷ್ಠಮಿ ಕಾರ್ಯಕ್ರಮವು ಆ.30 ರಂದು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ನಡೆಯಲಿದೆ. ಶ್ರೀಕೃಷ್ಣನಿಗೆ ವಿಶೇಷ ಪೂಜೆ ಹಾಗೂ ಒಂದು ವರ್ಷದಿಂದ ಆರು ವರ್ಷದ ಒಳಗಿನ ಮಕ್ಕಳಿಗಾಗಿ ಮುದ್ದುಕೃಷ್ಣನ ವೇಷದ ಸ್ಪರ್ಧೆ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಸುಳ್ಯ: ದ.ಕ ಜಿಲ್ಲೆ ಹಲವು ಗಡಿ ಪ್ರದೇಶಗಳನ್ನು ಹೊಂದಿದ್ದು ಇದು ಕೋವಿಡ್ ನ ಕುರಿತು ಮತ್ತಷ್ಟು ಜಾಗೃತರಾಗಿ ಇರಬೇಕಾದ ಸನ್ನಿವೇಶವನ್ನು ಉಂಟು ಮಾಡಿದೆ. ಹಾಗಾಗಿ ಇಲ್ಲಿನ ಅಧಿಕಾರಿ ವರ್ಗ ಮತ್ತಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಕೋವಿಡ್ ಪಾಸಿಟಿವಿಟಿ ದರ ಏರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು.ಆ.೧೮ ರಂದು ಕೆವಿಜಿ ಆಯರ್ವೇದ...
ಸುಬ್ರಹ್ಮಣ್ಯ: ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದ ದ.ಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30ರ ತನಕ ಯಾವುದೇ ಸೇವೆಗಳು ನಡೆಯುವುದಿಲ್ಲ. ಕೇವಲ ಶ್ರೀ ದೇವರ ದರುಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುವುದಿಲ್ಲ. ಶನಿವಾರ ಮತ್ತು...
Loading posts...
All posts loaded
No more posts
