- Saturday
- September 12th, 2026
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಾಗಿದ್ದ ಶ್ರೀಮತಿ ಸ್ವರ್ಣ ಲತಾ ಅವರು ಪತ್ರಾಂಕಿತ ಸಹಾಯಕರಾಗಿ ಪದೋನ್ನತಿ ಹೊಂದಿದ್ದು ಉಪನಿರ್ದೇಶಕರ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರಿಗೆ ವರ್ಗಾವಣೆ ಆಗಿದ್ದಾರೆ.ಸ್ವರ್ಣ ಲತಾ ಅವರು 2014 ರಲ್ಲಿ ಸುಳ್ಯ ಬಿಇಒ ಕಛೇರಿಗೆ ಪತ್ರಾಂಕಿತ ವ್ಯವಸ್ಥಾಪಕರಾಗಿ ಬಂದಿದ್ದರು. ಇವರು ಪುತ್ತೂರು ತಾಲೂಕಿನ ಪರ್ಲಡ್ಕ ನಿವಾಸಿ ಯಕ್ಷಗಾನ ಕಲಾವಿದ ಭಾಸ್ಕರ...
ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರಿಗೆ ನೀಡಲಾಗುವ ರೈತರಿಗೆ ಶೂನ್ಯ ಬಡ್ಡಿದರ ಸಾಲದ ಮೇಲೆ ಸರಕಾರ ಜಾರಿಗೆ ತಂದ ಷರತ್ತನ್ನು ಸರಕಾರ ಸಡಿಲಿಕೆ ಮಾಡಿದೆ ಇದರಿಂದ ರೈತರಿಗೆ ಅನುಕೂಲವಾಗಿದೆ. ಷರತ್ತನ್ನು ಸಡಿಸಲು ದ.ಕ.ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಮಿತಿ,ರಾಜ್ಯ ರೈತ ಮೋರ್ಚಾ ಸಮಿತಿ, ಕರಾವಳಿ ಭಾಗದ ಸಚಿವರು ಹಾಗೂ ಶಾಸಕರು ನಡೆಸಿದ ಪ್ರಯತ್ನ ಫಲ ನೀಡಿದೆ...
ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧವಾಗಿ ಆಯ್ಕೆಯಾದರು.ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯ ಪ್ರಕ್ರೀಯೆಯನ್ನು ಸಹಕಾರ ಸಂಘದ ಹಿರಿಯ ನಿರೀಕ್ಷಕರಾದ ಶಿವಲಿಂಗಯ್ಯ.ಎಂ ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟರು.ಸಂಘದ ನಿರ್ದೇಶಕರಾದ ಕೇಶವ ಕುಂದರ್ ,ಪುಷ್ಪರಾಜ್ ಬಿ.ಎನ್,ಇಬ್ರಾಹಿಂ...
ಶ್ರೀ ಜಲದುರ್ಗಾದೇವೀ ದೇವಸ್ಥಾನ ಪೆರುವಾಜೆಯಲ್ಲಿ ಗಣಪತಿ ಹೋಮ ಮತ್ತು ದುರ್ಗಾ ಪೂಜೆ ಜು.17 ರಿಂದ ಆರಂಭಗೊಂಡಿದೆ. ಶ್ರೀ ಕ್ಷೇತ್ರದಲ್ಲಿ 48 ದಿನಗಳ ಪೂಜೆ ನಡೆಯಲಿದೆ
ಭಾರಿ ಮಳೆಯಿಂದಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಹಲವೆಡೆ ನೀರು ತುಂಬಿ ವಾಹನ ಸಂಚಾರ ಹಾಗೂ ನಡೆದುಕೊಂಡು ಹೋಗುವವರಿಗೆ ಸಮಸ್ಯೆಯಾಗಿತ್ತು. ಇದನ್ನು ಗಮನಿಸಿದ ಯುವ ಬ್ರಿಗೇಡ್ ಸುಳ್ಯದಿಂದ ಅರಂತೋಡು ವರೆಗೆ ನೀರು ನಿಂತ ಕಡೆಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ಚರಂಡಿ ವ್ಯವಸ್ಥೆ ಮಾಡಿಕೊಡಲಾಯಿತು.
ನವಚೇತನ ಯುವಕ ಮಂಡಲ ಮತ್ತು ಜಾಲ್ಸುರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬೊಳುಬೈಲು, ಬೈತಡ್ಕ, ಕೋನಡ್ಕಪದವು, ವಿನೋಬನಗರ, ಮಾವಿನಕಟ್ಟೆ, ಅಡ್ಕಾರು, ಜಾಲ್ಸುರು, ಸೋಣoಗೇರಿ, ಪೈಚಾರು ಬಸ್ಸು ಪ್ರಯಾಣಿಕರ ತಂಗುದಾಣ ಮತ್ತು ರಸ್ತೆ ಸೂಚನಾ ಫಲಕಗಳ ಸ್ವಚ್ಛತೆ ನಡೆಸಿ ಸ್ಯಾನಿಟೈಸ್ ಮಾಡಿ ಸುತ್ತಮುತ್ತ ಕಸಕಡ್ಡಿಗಳನ್ನು ತೆಗೆದು ಸ್ವಚ್ಛತೆ ಕಾರ್ಯಕ್ರಮವನ್ನು ನಡೆಸಲಾಯಿತು.ಬೊಳುಬೈಲು ಕಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಛತೆ ನಡೆಸಲಾಯಿತು....
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ತಿಂಗಳ ಬೆಳಿಗ್ಗೆ ಗಣಪತಿ ಹೋಮ ಮತ್ತು ರಾತ್ರಿ ದುರ್ಗಾ ಪೂಜೆ ಪ್ರಾರಂಭಗೊಂಡಿದ್ದು ಸೆ.2 ರ ತನಕ ಪೂಜೆ ನಡೆಯಲಿದೆ.ಸೇವೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಛೇರಿಯಲ್ಲಿ (ಮೊಬೈಲ್: 9902050424) ವಿಚಾರಿಸಬೇಕಾಗಿದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಪದ್ಮನಾಭಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.
ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಾಪು ಕೃಷಿ ಕ್ಷೇತ್ರದ ಸಹಯೋಗದಲ್ಲಿ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಅಭಿಯಾನ ಕಾರ್ಯಕ್ರಮವು ಜು.24 ರಂದು ನಡೆಯಿತು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಮಾತನಾಡಿ, ಪಹಣಿ ಪತ್ರದಲ್ಲಿ ಬೆಳೆ ವಿವರ ದಾಖಲಾತಿಯಾಗಿದ್ದರೆ ಮಾತ್ರ ಸರಕಾರದ ಸವಲತ್ತು ಪಡೆಯಲು ಸಾಧ್ಯವಿದೆ. ಈ...
ಸುಳ್ಯ ತಾಲೂಕಿನಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು 42 ಪಾಸಿಟಿವ್ ಬಂದಿದೆ. ಮರ್ಕಂಜ ಗ್ರಾಮದ ದಾಸರಬೈಲಿನಲ್ಲಿ 7 ಪ್ರಕರಣ ಕಂಡುಬಂದಿದೆ. ತಾಲೂಕಿನಲ್ಲಿ ಒಟ್ಟು 199 ಸಕ್ರೀಯ ಸೋಂಕಿತ ಪ್ರಕರಣಗಳಿವೆ.
Loading posts...
All posts loaded
No more posts
