ಮುರುಳ್ಯ – ಎಣ್ಮೂರು ಸಹಕಾರಿ ಸಂಘದ ಹೊಸ ಕಟ್ಟಡಕ್ಕಾಗಿ ತಂದಿಟ್ಟಿದ್ದ ರೂ1.52 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ಸ್ ಸಾಧನ ಕಳವು

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮುರುಳ್ಯ – ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಕಟ್ಟಡದಲ್ಲಿ ಸಂಘದ ವ್ಯವಹಾರಗಳನ್ನು ಲೆಕ್ಕ ಇರಿಸಿಕೊಳ್ಳಲು ತಂದಿಟ್ಟಿದ್ದ ಅಪಾರ ಮೌಲ್ಯದ ವಸ್ತುವನ್ನು ಕಳವು ಮಾಡಿರುವ ಘಟನೆ ಸುಳ್ಯದ ಮುರುಳ್ಯ ಗ್ರಾಮದಲ್ಲಿ ನಡೆದಿದೆ. ಮುರುಳ್ಯ ಗ್ರಾಮದ ಮುರುಳ್ಯ -ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಅಲೆಕ್ಕಾಡಿ ಕಟ್ಟಡದಲ್ಲಿ...

ಪರ್ಸ್ ಕಳೆದುಹೋಗಿದೆ

ಕಂದ್ರಪ್ಪಾಡಿ ಮಾವಿನಕಟ್ಟೆ ರಸ್ತೆ ಮಧ್ಯೆ ಒಂದು ಪರ್ಸ್ ಕಳೆದು ಹೋಗಿದೆ. ಅದರಲ್ಲಿ ಆಧಾರ್ ಕಾರ್ಡ್, ಎಟಿಎಂ, ಹಣ ಇದ್ದು ಕಳೆದುಕೊಂಡವರ ಫೋಟೋ ಹಾಗೂ ಇತರ ದಾಖಲೆ ಇದೆ. ದಯವಿಟ್ಟು ಸಿಕ್ಕಿದವರು ಹಿಂದಿರುಗಿಸಬೇಕಾಗಿ ವಿನಂತಿ.87626766516364659441
Ad Widget

ಕಳಂಜ ಬಾಳಿಲ ಸಹಕಾರಿ ಸಂಘದಲ್ಲಿ ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜನವರಿ 18ರಂದು ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಕೂಸಪ್ಪ ಗೌಡ,ಅಧ್ಯಕ್ಷರು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೃಷ್ಣ ಕುಂಪದವು, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು....

ಪ್ರಾಮಾಣಿಕತೆ ಮೆರೆದ ಬೆಳ್ಳಾರೆ ಲಕ್ಷ್ಮೀನಾರಾಯಣ ಭಟ್ – ಹಣ ಹಾಗೂ ಅಮೂಲ್ಯ ದಾಖಲೆಗಳನ್ನು ಒಳಗೊಂಡ ಪರ್ಸ್ ವಾರಸುದಾರರಿಗೆ ಹಸ್ತಾಂತರ

ಹಣ ಹಾಗೂ ಅಮೂಲ್ಯ ದಾಖಲೆಗಳನ್ನು ಒಳಗೊಂಡ ಪರ್ಸ್ ಒಂದು ಪೆರುವಾಜೆಯಲ್ಲಿ ಲಕ್ಷ್ಮೀನಾರಾಯಣ ಭಟ್ ರವರಿಗೆ ಬಿದ್ದು ಸಿಕ್ಕಿತ್ತು. ತಕ್ಷಣ ಅವರು ವಾರಸುದಾರರನ್ನು ಪತ್ತೆ ಮಾಡಿ ಅವರಿಗೆ ಪರ್ಸ್ ಅನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಇಂದು(ಜ.01) ತಂಟೆಪ್ಪಾಡಿ ನಿನಾದದಲ್ಲಿ ಸಾಂಸ್ಕೃತಿಕ ನೆನಪು: ತಂಟೆಪ್ಪಾಡಿ ಶಂಭಟ್ಟರು ಹಾಗೂ ಯಕ್ಷಗಾನ ಶ್ರೀದೇವಿ ಮಹಾತ್ಮೆ

ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು(ಜ.01) 'ತಂಟೆಪ್ಪಾಡಿ ಶಂಭಟ್ಟರು' ಒಂದು ಸಾಂಸ್ಕೃತಿಕ ನೆನಪು ಹಾಗೂ ಪಾವಂಜೆ ಮೇಳದಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಲಿದೆ. ಸಂಜೆ 4.45ರಿಂದ ನಡೆಯಲಿರುವ 'ತಂಟೆಪ್ಪಾಡಿ ಶಂಭಟ್ಟರು' ಒಂದು ಸಾಂಸ್ಕೃತಿಕ ನೆನಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶ್ರೀಕೃಷ್ಣ ಚೊಕ್ಕಾಡಿ ವಹಿಸಲಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವರಾಮ ಭಟ್ ನಾಕೂರು 'ಶಂಭಟ್ಟರ...

ಐವರ್ನಾಡು: ಪಾಲೆಪ್ಪಾಡಿ- ಅಮಲ ರಸ್ತೆ ದುರಸ್ತಿಗೆ ಆಗ್ರಹಿಸಿ ಜ.3ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ

ಐವರ್ನಾಡು, ಪಾಂಬಾರು, ಅಮಲ, ರಸ್ತೆಯ ದುರಸ್ತಿಯಾಗಿರದೇ ಇರುವುದನ್ನು ವಿರೋಧಿಸಿ ಜ.3 ರಂದು ಐವರ್ನಾಡು ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೋರಾಟದ ಕುರಿತು ಡಿ. 25 ರಂದು ಪಾಲೆಪ್ಪಾಡಿ ಮಂಜುಶ್ರೀ ಕ್ರೀಡಾಂಗಣದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು. ಹೋರಾಟ ಸಮಿತಿಯ ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಹಾಗೂ ಉಪಾಧ್ಯಕ್ಷರನ್ನಾಗಿ ಅಶೋಕ್ ಎಡಮಲೆ ಅವರನ್ನು ಆರಿಸಲಾಯಿತು.ಈ ಸಂದರ್ಭದಲ್ಲಿ...

ವಿವಾಹ ಮುಂದೂಡಲಾಗಿದೆ: ಪ್ರವೀಣ ಪಿಲಿಕಜೆ-ಚೈತ್ರ ಬೊಳ್ಳಾಜೆ

ಡಿ.26ರಂದು ನಡೆಯಬೇಕಿದ್ದ ಅಮರಮುಡ್ನೂರು ಗ್ರಾಮದ ಪಿಲಿಕಜೆ ಶ್ರೀ ಸೀತಾರಾಮ ಗೌಡರ ಪುತ್ರ ಪ್ರವೀಣ ಪಿಲಿಕಜೆ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ(ಮಡ್ತಿಲ) ಶ್ರೀ ಗಣೇಶರವರ ಪುತ್ರಿ ಚೈತ್ರ ಬೊಳ್ಳಾಜೆ ರವರ ವಿವಾಹವು ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದು, ಜ.20 ಗುರುವಾರದಂದು ಪೂರ್ವಾಹ್ನ ಗಂಟೆ 10.22ರ ಮೀನಾ ಲಗ್ನದ ಶುಭಮುಹೂರ್ತದಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಲಿದೆ.

ಶರತ್ ಮೆತ್ತಡ್ಕ ಮತ್ತು ಹರ್ಷಿತಾ ಕಾನಡ್ಕ ವಿವಾಹ ಮುಂದೂಡಲಾಗಿದೆ

ದಿನಾಂಕ : 26-12-2021ರಂದು ನಡೆಯಬೇಕಾಗಿದ್ದ ದೇವಚಳ್ಳಗ್ರಾಮದ ಮೆತ್ತಡ್ಕ ಶ್ರೀಮತಿ ಪದ್ಮಾವತಿ ಮತ್ತು ಹೊನ್ನಪ್ಪ ಗೌಡರ ಪುತ್ರ ಶರತ್ ಮತ್ತು ಅಮರಮುಡ್ನೂರು ಗ್ರಾಮದ ಕಾನಡ್ಕ ಶ್ರೀಮತಿ ಪುಷ್ಪವೇಣಿ ಮತ್ತು ಯಶವಂತ ಗೌಡರ ಪುತ್ರ ಹರ್ಷಿತಾರವರ ವಿವಾಹ ಕಾರ್ಯಕ್ರಮ ವು ಕಾರಣಾಂತರಗಳಿಂದ ಮುಂದೂಡಲಾಗಿದೆ. ಇವರ ವಿವಾಹ ಕಾರ್ಯಕ್ರಮವು ಇದೇ ಬರುವ ದಿನಾಂಕ 23-01-2022ರಂದು ವಿಷ್ಣು ಕಲಾ ಮಂದಿರ ಮಾವಿನಕಟ್ಟೆಯಲ್ಲಿ...

ಡಿ.19: ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19 ಆದಿತ್ಯವಾರದಂದು ಪೂರ್ವಾಹ್ನ 10.30ಕ್ಕೆ ಸರಿಯಾಗಿ ನಾಯರ್ ವಾಣಿಜ್ಯ ಸಂಕೀರ್ಣದ ವಠಾರ ಗಾಂಧಿನಗರ, ಸುಳ್ಯದಲ್ಲಿ ಸಂಘದ ಅಧ್ಯಕ್ಷರಾದ ಐ.ಕೆ.ಮಹಮ್ಮದ್ ಇಕ್ಬಾಲ್ ಎಲಿಮಲೆ ರವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಈ ಸಭೆಗೆ ಸಂಘದ ಎಲ್ಲಾ ಸದಸ್ಯರು ಸಕಾಲಕ್ಕೆ ಹಾಜರಾಗಿ ಸಭಾ ಕಲಾಪಗಳನ್ನು...

ಡಿ.18: ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ.ಪಿ.ಕೆ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಪೂರ್ವಾಹ್ನ ಗಂಟೆ 10.30ಕ್ಕೆ ಸರಿಯಾಗಿ ಸಂಘದ ಸಭಾಭವನ 'ಅಮರ ಸಹಕಾರ ಸೌಧ' ಕುಕ್ಕುಜಡ್ಕದಲ್ಲಿ ಜರುಗಲಿದೆ. ಈ ಸಭೆಗೆ ಸಂಘದ ಎಲ್ಲಾ ಸದಸ್ಯರು ಸಕಾಲಕ್ಕೆ ಹಾಜರಾಗುವಂತೆ ಸಂಘದ ಮುಖ್ಯ...
Loading posts...

All posts loaded

No more posts

error: Content is protected !!