- Sunday
- September 13th, 2026
ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಬಿ. ಯಎಂ. ಕಾಂಪ್ಲೆಕ್ಸ್‌ನಲ್ಲಿ ಉಮರ್ ಮಣಿಮಜಲು ಹಾಗೂ ಜಮಾಲ್ ಬೆಳ್ಳಾರೆಯವರ ಪಾಲುದಾರಿಕೆಯ ಹೋಟೆಲ್ ವೆಲ್ಕಂ ಎ.13ರಂದು ಶುಭಾರಂಭಗೊಂಡಿತು.ಈ ಅತ್ಯಾಪ್ತ ತಾಣದಲ್ಲಿ ಚಹಾ, ಕಾಫಿ, ತಿಂಡಿ,ಚಿಕನ್ ಬಿರಿಯಾನಿ, ಚಿಕನ್ ಮಂದಿ ಹಾಗೂ ತಾಜಾ ಜ್ಯೂಸ್ ಐಟಂಗಳು ದೊರೆಯುತ್ತವೆ ಎಂದು ಪಾಲುದಾರರು ತಿಳಿಸಿದ್ದಾರೆ. (ವರದಿ : ಎಂ.ಎ. ಮುಸ್ತಫಾ ಬೆಳ್ಳಾರೆ)
ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏ.15ರಂದು ಪೂರ್ವಾಹ್ನ “ವಿಷುಕಣಿ ಪೂಜೆ” ನೆರವೇರಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ವಿಷುಕಣಿ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)
ದಿನಾಂಕ : 15 ಏಪ್ರಿಲ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 15) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-460-482/485ಹಳೆ ಅಡಿಕೆ...
ಅಸಾಧಾರಣ ಸಾಂಸ್ಕೃತಿಕ ಪ್ರತಿಭೆ ಸುಳ್ಯದ ಮನುಜ ನೇಹಿಗನಿಗೆ ದ್ವಿತೀಯ ಪಿ.ಯು ಪರೀಕ್ಷೆಯ ಕಲಾ ವಿಭಾಗದಲ್ಲಿ ಶೇ.93.50 ಅಂಕ ಬಂದಿರುತ್ತದೆ. ಆಳ್ವಾಸ್ ಪ.ಪೂ.ಕಾಲೇಜಿನ ವಿದ್ಯಾರ್ಥಿಯಾಗಿರುವ ಮನುಜ ನೇಹಿಗ ವರ್ಷವಿಡೀ ತನ್ನ ತಂದೆ ಸುಳ್ಯ ರಂಗಮನೆಯ ರೂವಾರಿ ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ಚಾರುವಸಂತ, ನಾಯಿಮರಿ ನಾಟಕ, ದೇವವೃದ್ಧರು , ಕರ್ಣಾಸ್ತಮಾನ ಮುಂತಾದ ನಾಟಕಗಳ ಪ್ರದರ್ಶನ, ಅಭಿನಯ,...
ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ, ಸಾಮಾಜಿಕ ಸಮಾನತೆಯ ಹರಿಕಾರ ಡಾ. ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆಯನ್ನು ಇಂದು ಸುಳ್ಯದಲ್ಲಿ ಸುಮಾರು 15 ವರ್ಷಗಳಿಂದ ನಿರ್ಮಾಣ ಕಾರ್ಯ ಕುಂಠಿತ ಗೊಂಡು ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಇಂದು ಆಯೋಜಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರು ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ...
ಸುಳ್ಯದ ಶ್ರೀ ಗುರುರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕೋತ್ಸವವು ಎ.21 ಮತ್ತು 22ರಂದು ನಡೆಯಲಿದ್ದು, ಈ ಬಾರಿ “ಶ್ರೀ ಗುರುರಾಘವೇಂದ್ರಾನುಗ್ರಹ ಪ್ರಶಸ್ತಿ”ಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರಿಗೆ ಪ್ರದಾನ ಮಾಡಲಾಗುವುದು. ಎಂದು ಶ್ರೀ ಗುರುರಾಘವೇಂದ್ರ ಮಠದ ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ....
ಬೆಳ್ಳಾರೆ ಸಮೀಪದ ಕೊಡಿಯಾಲ ಕಲ್ಪಣೆ ಎಂಬಲ್ಲಿ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿದ್ದ ಪಂಚಾಯತ್ ಸಿಬ್ಬಂದಿ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸುಬ್ರಹ್ಮಣ್ಯ ಏಪ್ರಿಲ್ 14 : ಕುಕ್ಕೆ ಸುಬ್ರಹ್ಮಣ್ಯದ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಏ.12 ರವಿವಾರದಂದು 530ನೇ ವಾರದ ಸ್ವಚ್ಚತಾ ಅಭಿಯಾನವು ಕುಲ್ಕುಂದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಕುಮಾರಧಾರ ಸೇತುವೆ ಯವರೆಗೆ ಇದ್ದಂತಹ ಪ್ಲಾಸ್ಟಿಕ್ ತ್ಯಾಜ್ಯಗಳು, ಪ್ಲಾಸ್ಟಿಕ್ ಬಾಟಲ್‌ಗಳು, ಕಸ-ಕಡ್ಡಿ, ಪ್ಲಾಸ್ಟಿಕ್ ಚೀಲ ಹಾಗೂ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.ರವಿ...
ಅಜ್ಜಾವರ ಗ್ರಾಮದ ಮೆದಿನಡ್ಕ ಮುತ್ತುಮಾರಿಯಮ್ಮ ದೇವಾಲಯದಲ್ಲಿ ರೂ 3.50ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ನೆಲಹಾಸು(ಇಂಟರ್ ಲಾಕ್) ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಭೋದ್ ಶೆಟ್ಟಿ ಮೇನಾಲ, ರಾಜೇಶ್ ರೈ ಮೇನಾಲ, ವಿಕ್ರಂ ಅಡ್ಪಂಗಾಯ, ವಸಂತ ನಡುಬೈಲು, ಕಿಟ್ಟಣ್ಣ ರೈ ಮೇನಾಲ, ನಯನ ರೈ ಮೇನಾಲ, ಚಂದ್ರಶೇಖರ ಕೇರ್ಪಳ, ಚಂದ್ರಶೇಖರ ನೆಡಿಲು, ದೇವಸ್ಥಾನದ ಅಧ್ಯಕ್ಷರಾದ...
ಕುಲ್ಕುಂದ ಶ್ರೀ ಕ್ಷೇತ್ರ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏ.19 ಆದಿತ್ಯವಾರದಿಂದ ಏ.20 ಸೋಮವಾರದವರೆಗೆ “ವಾರ್ಷಿಕ ಜಾತ್ರಾ ಮಹೋತ್ಸವ”ವು ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಏ.13ರಂದು ಗೊನೆ ಮುಹೂರ್ತ ನೆರವೇರಿತು.ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು, ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿ, ಜಾತ್ರೋತ್ಸವ ಸಮಿತಿ ಹಾಗೂ ಎಲ್ಲಾ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,...
Loading posts...
All posts loaded
No more posts
