ಬೆಳ್ಳಾರೆ ಫಿದಾ ಫಾತಿಮಳಿಗೆ ಡಿಸ್ಟಿಂಕ್ಷನ್

ಪುತ್ತೂರು: ಮರ್ಕಝುಲ್ ಹುದಾ ವುಮೆನ್ಸ್ ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಾಡ್ನೂರು ನಿವಾಸಿ ಫಿದಾ ಫಾತಿಮಾ 518 ಅಂಕ ಪಡೆದು ಡಿಸ್ಟಿಂಕ್ಷನ್ ಆಗಿ ಹೊರ ಹೊಮ್ಮಿದ್ದಾಳೆ..ಈಕೆ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಬೆಳ್ಳಾರೆ ಇವರ ಅಕ್ಕನ ಮಗಳು ಹಾಗೂ ಮಾಡ್ನೂರು ಕೊಳಂಬೆ ಖಾದರ್ ಮತ್ತು ನಸೀಮಾ ಬೆಳ್ಳಾರೆ ದಂಪತಿಗಳ ಪುತ್ರಿ

ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ವಿಷ್ಣುಪ್ರಕಾಶ್ ಟಿ.ಜಿ. 600 ರಲ್ಲಿ 600 ಅಂಕ

ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ಸಿ .ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ತುದಿಯಡ್ಕ ವಿಷ್ಣುಪ್ರಕಾಶ್ ಟಿ.ಜಿ ರವರು 600 ರಲ್ಲಿ 600 ಅಂಕ ಗಳಿಸಿದ್ದಾರೆ. ಆಲೆಟ್ಟಿ ಗ್ರಾಮದ ತುದಿಯಡ್ಕ ಪ್ರಗತಿಪರ ಕೃಷಿಕ, ರೋಟರಿ ಚಾರಿಟೇಬಲ್ ಟ್ರಸ್ಟಿನ ಕೋಶಾಧಿಕಾರಿ ಗಿರಿಜಾಶಂಕರ.ಟಿ ಮತ್ತು ಶ್ರೀಮತಿ ಜಯಶ್ರೀ ದಂಪತಿಗಳ ಪುತ್ರ.
Ad Widget

ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಸುಳ್ಯದ ಅನುಷಾ ಪ್ರಭು 600 ರಲ್ಲಿ 600 ಅಂಕ

ಸುಳ್ಯ ಕೆ.ವಿ.ಜಿ. ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಕೆ.ಅನುಷಾ ಪ್ರಭು ರವರು 600 ರಲ್ಲಿ 600 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.ಇವರು ಸುಳ್ಯದ ಉದ್ಯಮಿ ಪ್ರಗತಿಪರ ಕೃಷಿಕ ಅಶೋಕ ಪ್ರಭು ಮತ್ತು ಶ್ರೀಮತಿ ವಿಜಯಲಕ್ಷ್ಮಿ ಪ್ರಭು ದಂಪತಿಯ ಪುತ್ರಿ.

ಎನ್ನೆಂಸಿ : ಯುವ ರೆಡ್ ಕ್ರಾಸ್ ಘಟಕದಿಂದ “ಹಸಿರು-ಉಸಿರು” ವನಮಹೋತ್ಸವ ಕಾರ್ಯಕ್ರಮ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಮತ್ತು ಗ್ರಾಮ ಪಂಚಾಯತ್, ಅಜ್ಜಾವರಇವುಗಳ ಜಂಟಿ ಆಶ್ರಯದಲ್ಲಿ ಅರಣ್ಯ ಇಲಾಖೆ ಸುಳ್ಯ ಇವರ ಸಹಯೋಗದೊಂದಿಗೆ ಸಮುದಾಯ ಕಾರ್ಯಕ್ರಮದ ಅಂಗವಾಗಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ "ಹಸಿರು-ಉಸಿರು" ವನಮಹೋತ್ಸವ ಕಾರ್ಯಕ್ರಮವನ್ನು ಅಜ್ಜಾವರದ ತುದಿಯಡ್ಕ ಎಂಬಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಅಜ್ಜಾವರ...

ಒಬ್ಬಂಟಿ

ನೀನು ನನ್ನವನಲ್ಲ, ನಾನು ನಿನ್ನವನಲ್ಲ…ಎಲ್ಲರೂ ಒಬ್ಬಂಟಿಗಳೇ ಈ ಜಗದಲ್ಲಿ…ಹುಟ್ಟಿನಲ್ಲೂ ಒಬ್ಬಂಟಿ, ಸಾವಿನಲ್ಲೂ ಒಬ್ಬಂಟಿ…ನೀನು ನೋವಿನಲ್ಲೂ ಒಬ್ಬಂಟಿ,ಕಷ್ಟದಲ್ಲೂ ಒಬ್ಬಂಟಿ…ಹೇಗಿದ್ದರೂ ಬದುಕಲೆಬೇಕು ಈ ಬದುಕಿನಲಿ…ನೀನು ಎದ್ದು ನಿಲ್ಲಲೆಬೇಕು ಈ ಬದುಕಿನಲಿ… ಗೆದ್ದಾಗ ಬರುವರು ನೀನು ನಮ್ಮವನು ಎಂದು…ಸೋತಾಗ ಹೋಗುವರು ತಿರುಗಿಯು ನೋಡದೇ…ನಿನ್ನ ಕನಸಿಗೆ ಕೊಳ್ಳಿ ಇಟ್ಟು, ಮನಸ್ಸಿಗೆ ಬೆಂಕಿ ಇಟ್ಟು ನೋಡುವರು ಇಲ್ಲಿ ಹಲವರು,ನಿಂತು ನೋಡುವರು ಇಲ್ಲಿ ಹಲವರು…ಯೋಚಿಸು...

ಆಳ್ವಾಸ್ ವಿದ್ಯಾರ್ಥಿನಿ ಸುಳ್ಯದ ಹೆಮ್ಮೆಯ ಕುವರಿ ವೃದ್ಧಿ ಹೆಚ್ ರೈ ಪಿಯುಸಿಯಲ್ಲಿ 600 ರಲ್ಲಿ 600 ಅಂಕ

ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವೃದ್ಧಿ ಹೆಚ್ ರೈ 600 ರಲ್ಲಿ 600 ಅಂಕ ಪಡೆದು ಸುಳ್ಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾಳೆ. ಇವರು ಉಬರಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಹರೀಶ್ ರೈ ಉಬರಡ್ಕ ಮತ್ತು ರಾಜೀವಿ ಹೆಚ್ ರೈ ದಂಪತಿಗಳ ಪುತ್ರಿ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎನ್ ಎಂ ಸಿ ಯ ಸಾಧನೆ – ವಿಜ್ಞಾನ ವಿಭಾಗದ ಕೃತಿಕಾಳಿಗೆ 600ರಲ್ಲಿ 600

ಸುಳ್ಯದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯು ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 25 ಮಂದಿ ಡಿಸ್ಟಿಂಕ್ಷನ್, 24 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಕೃತಿಕಾ.ವೈ.ಸಿ 600ರಲ್ಲಿ 600 ಪೂರ್ಣ ಅಂಕಗಳು, ಮಹಮ್ಮದ್ ಮುಯೀಫ್ 599 ಹಾಗೂ ಯಶವಂತ್.ವೈ.ಪಿ 596 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 5 ಡಿಸ್ಟಿಂಕ್ಷನ್,...

ಮರ್ಕಂಜ : ದೂರವಾಣಿ ಕೇಂದ್ರದ ಸುತ್ತ ಸ್ವಚ್ಚತಾ ಕಾರ್ಯ

ಮರ್ಕಂಜದ ಬಿಎಸ್ಎನ್ಎಲ್ ಕೇಂದ್ರವು ಕಳೆದ ಕೆಲವು ವರ್ಷಗಳಿಂದ ಸ್ವಚ್ಚಗೊಳಿಸದೆ ಅರಣ್ಯ ಪ್ರದೇಶದ ಮಧ್ಯೆ ಇದ್ದಂತ್ತಿತ್ತು. ಇದನ್ನು ಮರ್ಕಂಜ ಗ್ರಾ.ಪಂ. ಸದಸ್ಯರಾದ ರಾಜೇಂದ್ರ ಕೊಚ್ಚಿ ನೇತೃತ್ವದಲ್ಲಿ ಸ್ವಚ್ಚಗೊಳಿಸಲಾಯಿತು. ಈ ಸಂದರ್ಭದಲ್ಲಿ ಡಿಲ್ಲಿಕುಮಾರ ಕಾಯರ,ಪುಂಡರೀಕ ನಾಯಕ್ ಗೂಡಂಬೆ,ಚೆನ್ನಕೇಶವ ದೋಳ,ಯತೀಶ್ ಕಂಜಿಪಿಲಿ,ಹರೀಶ್ ಕಾಯಿಪಳ್ಳ,ಗಗನ್ ಅಲ್ಪೆ,ಸೋಮಶೇಖರ್ ಅಡಿಗೈ ದೋಳ ಮೊದಲಾದವರು ಬೆಳೆದಿದ್ದ ಗಿಡ ಗಂಟೆ ಕಡಿದು ಸ್ವಚ್ಚ ಮಾಡಿದರು. ಗಿರಿಜಾ ಅಡಿಗೈ...

ಲೀಲಾಕುಮಾರಿ ತೊಡಿಕಾನ ನಿರ್ದೇಶನದ ಪ್ರೇಮಯಾನ ಆಲ್ಬಂ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ

ಇಬ್ಬನಿ ಕ್ರಿಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ "ಪ್ರೇಮಯಾನ" ಆಲ್ಬಂ ಹಾಡು ಇಂದು ಬಿಡುಗಡೆಯಾಗಿದೆ. ಲೀಲಾಕುಮಾರಿ ತೊಡಿಕಾನರವರ ಸಾಹಿತ್ಯವನ್ನು ಮಹಾಲಿಂಗ ಮೈಸೂರುರವರು ಹಾಡಿದ್ದಾರೆ‌. ಸುಳ್ಯದ ಪ್ರತಿಭೆಗಳಾದ ಶರತ್ ಮಾಸ್ತಿ ಮತ್ತು ಸಾಯಿಶೃತಿ ನಟಿಸಿದ್ದಾರೆ.ಹಾಡನ್ನು ಕೇಳಲು ಈ ಕೆಳಗಿನ ಲಿಂಕ್ ಬಳಸಿ.https://youtu.be/JNfyOzLZZM0 https://youtu.be/JNfyOzLZZM0

ಸುಳ್ಯದ ಕ್ರೀಡಾ ಸಾಧಕಿ ಗೀತಾ ಕಂದಡ್ಕ ದಾವಣಗೆರೆ ವಿ.ವಿ. ಸಿಂಡಿಕೇಟ್ ಸದಸ್ಯರಾಗಿ ನೇಮಕ

ಕಿರಿಯ ವಯಸ್ಸಿನಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಮತ್ತು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ದಾವಣಗೆರೆ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ, ಸುಳ್ಯದ ಗೀತಾ ಕಂದಡ್ಕ ಅವರನ್ನು ವಿ.ವಿ. ಕುಲಪತಿಗಳೂ ಆಗಿರುವ ರಾಜ್ಯಪಾಲರು ಮುಂದಿನ ಮೂರು ವರ್ಷಗಳ ಅವಧಿಗೆ ಈ ನೇಮಕ ಮಾಡಿದ್ದಾರೆ. ಕಾಲೇಜು ಜೀವನದಲ್ಲಿಯೇ...
Loading posts...

All posts loaded

No more posts

error: Content is protected !!