- Sunday
- September 13th, 2026
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೇಮಿರಾಜ ಪಲ್ಲೋಡಿ ಅವರಿಗೆ ಮೇ.09 ರಂದು ದೇಗುಲದ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ನೇಮಿರಾಜ...
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಸೋಸಿಯೇಟ್ ಸೆಕ್ರೆಟರಿ ಯಾಗಿರುವ ಸುಳ್ಯದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರ ದಲ್ಲಿ ಕಳೆದ ಹಲವು ದಶಕಗಳಿಂದ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಎನ್. ಜಯಪ್ರಕಾಶ್ ರೈ ಯವರಿಗೆ 70ರ ಹುಟ್ಟು ಹಬ್ಬದ ಸಂಭ್ರಮ. ಇದೇ ಸಂದರ್ಭದಲ್ಲಿ ಜೆ.ಪಿ ಯವರ ನೇತೃತ್ವದಲ್ಲಿ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಸುಳ್ಯದಲ್ಲಿ...
ಸುಬ್ರಹ್ಮಣ್ಯ ಮೇ 10 : ರಾಜ್ಯದ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜಾ ಹಿನ್ನೆಲೆಯಲ್ಲಿ ರವಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಹನ ದಟ್ಟನೆಯೊಂದಿಗೆ ಭಕ್ತ ಸಮೂಹವೇ ಕ್ಷೇತ್ರಕ್ಕೆ ಆಗಮಿಸಿತ್ತು. ರಾಜ್ಯದ ವಿವಿಧ ಮೂಲಗಳಿಂದ ಆಗಮಿಸಿದ ಭಕ್ತಾದಿಗಳನ್ನು ಹೊತ್ತ ವಾಹನಗಳು ಕಾಶಿ ಕಟ್ಟೆಯಿಂದಲೇ ನಿಧಾನವಾಗಿ ಚಲಿಸಿ ಕುಕ್ಕೆ ರಥಬೀದಿಯ ಸರ್ಕಲ್ ನಿಂದ ಅಲ್ಲಲ್ಲಿ ಪಾರ್ಕಿಂಗ್ ಪ್ರದೇಶಗಳಿಗೆ ತೆರಳಿದವು. ಕ್ಷೇತ್ರದಲ್ಲಿರುವ ಎಲ್ಲಾ ಪಾರ್ಕಿಂಗ್...
ಸುಬ್ರಹ್ಮಣ್ಯ ಮೇ 10 : ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗೌಡ ಸಮುದಾಯ ಭವನದ ನಿರ್ಮಾಣಕ್ಕಾಗಿ ಮಾಹಿತಿ ನೀಡಿ ಧನ ಸಂಗ್ರಹಿಸುವ ಎರಡನೆಯ ಹಂತದ ಬೃಹತ್ ಅಭಿಯಾನ ಸುಬ್ರಹ್ಮಣ್ಯದಲ್ಲಿ ಶನಿವಾರ ಜರಗಿತು. ಕಡಬ ತಾಲೂಕಿನ 42 ಗ್ರಾಮಗಳಲ್ಲಿ ಈಗಾಗಲೇ ಮೊದಲ ಹಂತದ ಅಭಿಯಾನ ಪೂರ್ತಿಗೊಂಡು ಎರಡನೇ ಹಂತದ...
ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದು, ಈ ವಾರ ಮೇ.04 ಸೋಮವಾರದಿಂದ ಮೇ.09 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ...
ಸುಬ್ರಹ್ಮಣ್ಯ ಮೇ 09 : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲೆಯಲ್ಲಿ ವಾಸವಿರುವ ದಿ. ವೀರಪ್ಪಗೌಡ ನಡುತೋಟ ಅವರ ಪತ್ನಿ ಹೊನ್ನಮ್ಮ(73) ಇಂದು ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರು ಪುತ್ರ ವಿಜಯ್, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ರೆಡ್ ಕ್ರಾಸ್ ದಿನಾಚರಣೆಯನ್ನು ಮೇ 08ರಂದು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಯಿತು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು "ಸ್ವಚ್ಛತೆ-ಆರೋಗ್ಯ-ರಕ್ಷಣೆ-ಬದುಕು" ಎಂಬ ಶೀರ್ಷಿಕೆಯಡಿಯಲ್ಲಿ ಮಾಹಿತಿ ಹಾಗೂ ಗೌರವಾರ್ಪಣೆ...
ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇವರು ಮಾರ್ಚ್ 2026ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ/ಎಂ.ಎಸ್ಸ್ ಆಯುರ್ವೇದ ಪರೀಕ್ಷೆಯಲ್ಲಿ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂತಿಮ ಸ್ನಾತಕೋತ್ತರ ವಿಭಾಗದ 05 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರ‍್ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದು, ಪಂಚಕರ್ಮ ವಿಭಾಗ ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ.ಜಿ ರವರ ಮಾರ್ಗದರ್ಶನದಲ್ಲಿ...
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಹಾಗೂ ಅರಿವು ಕೇಂದ್ರ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಮೇ.04 ರಿಂದ ಮೇ.09 ರವರೆಗೆ ಗುತ್ತಿಗಾರು ಗ್ರಾಮ ಪಂಚಾಯತ್ ನ ಪ.ವರ್ಗದ ಸಭಾಭವನದಲ್ಲಿ ನಡೆಯಿತು.ಈ ಕಾರ್ಯಾಗಾರವನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಜಿತ್.ಜಿ.ಕೆ, ಮಾಜಿ ಯೋಧರಾದ ಯಶವಂತ ಕಲ್ಮಕಾರು, ಟ್ರಸ್ಟ್ ಉಪಾಧ್ಯಕ್ಷರಾದ ಮೋಹನ್...
ಸುಳ್ಯದಿಂದ ಎಂಗೇಜ್ಮೆಂಟ್ ಮುಗಿಸಿ ನಡುಗಲ್ಲು ಕಡೆಗೆ ಬರುತಿದ್ದ ಪಾನಾತ್ತಿಲದ ವ್ಯಕ್ತಿಗೆ ಸೇರಿದ ಮಾರುತಿ 800 ಕಾರೊಂದು ನಡುಗಲ್ಲು ಬಳಿ ನಿಯಂತ್ರಣ ತಪ್ಪಿ ಮೈಲುಗಲ್ಲಿಗೆ ಹೊಡೆದ ಪರಿಣಾಮವಾಗಿ ಕಾರು ಮಗುಚಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ತಾಯಿ ವಿಮಲ(55) ಮಕ್ಕಳಾದ ಚೈತ್ರ(30) ಶ್ರುತಿ(27) ಹಾಗೂ ಕಾರು ಚಾಲಕ ಉಮೇಶ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ...
Loading posts...
All posts loaded
No more posts
