ಸೆ.23 : ಆಯುರ್ವೇದ ದಿನಾಚರಣೆ ಅಂಗವಾಗಿ ಸಾರ್ವಜನಿಕ ಜಾಥಾ

"ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಸೆಪ್ಟೆಂಬರ್ 23, 2025 ರಂದು 10ನೇ ಆಯುರ್ವೇದ ದಿನಾಚರಣೆ ಅಂಗವಾಗಿ "ಆಯುರ್ವೇದದ ಕಡೆಗೆ ನಮ್ಮ ನಡೆ" ಎಂಬ ಧ್ಯೇಯದೊಂದಿಗೆ ಸಾರ್ವಜನಿಕ ಜಾಥಾ ಕಾರ್ಯಕ್ರಮವನ್ನು  ಆಯುಷ್ ಇಲಾಖೆ ಹಾಗೂ ಎನ್.ಸಿ.ಐ.ಎಸ್.ಎಂ ನವದೆಹಲಿಯ ನೇತೃತ್ವದಲ್ಲಿ  ಆಯೋಜಿಸಲಾಗಿದೆ. ಜಾಥವು ಪೂರ್ವಾಹ್ನ 9.30 ಕ್ಕೆ ಕೆವಿಜಿ ಆಯುರ್ವೇದ ಕಾಲೇಜಿನ ಮುಂಭಾಗದಿಂದ ಆರಂಭಗೊಂಡು...

ಯುವಜನ ಸಂಯುಕ್ತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಪವನ್ ಪಲ್ಲತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮುರಳಿ ನಳಿಯಾರು, ಕೋಶಾಧಿಕಾರಿಯಾಗಿ ಲೋಹಿತ್ ಬಾಳಿಕಳ

ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಮಹಾಸಭೆ ಸೆ.20 ರಂದು ನಡೆಯಿತು.  ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಪವನ್ ಪಲ್ಲತಡ್ಕ, ಮಂಡಳಿಯ ಗೌರವಾಧ್ಯಕ್ಷರಾಗಿ ವಿಜಯ ಕುಮಾ‌ರ್ ಉಬರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮುರಳಿ ನಳಿಯಾರು, ಕೋಶಾಧಿಕಾರಿಯಾಗಿ ಲೋಹಿತ್ ಬಾಳಿಕಳ, ಉಪಾಧ್ಯಕ್ಷರಾಗಿ ದಯಾನಂದ ಪಾತಿಕಲ್ಲು, ವಿನುತಾ ಪಾತಿಕಲ್ಲು, ಜತೆ ಕಾರ್ಯದರ್ಶಿಯಾಗಿ ನಿತೀಶ್ ಎರ್ಮೆಟ್ಟಿ, ಸಾಂಸ್ಕೃತಿಕ...
Ad Widget

ದೇವ ಗೆಳೆಯರ ಬಳಗಕ್ಕೆ 2024-25ನೇ ಸಾಲಿನ “ಗಮನಾರ್ಹ ಸಾಧನೆ” ಪ್ರಶಸ್ತಿ

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಇದರ ಮಹಾಸಭೆಯಲ್ಲಿ ಅತ್ಯುತಮ ಯುವಕ & ಯುವತಿ ಮಂಡಳಿಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ನಡೆಯಿತು.‌ 2024 - 2025 ನೇ ಸಾಲಿನಲ್ಲಿ  ಗಮನಾರ್ಹ ಸಾಧನೆ ಮಾಡಿದ ಯುವಕ ಮಂಡಲ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಗೆಳೆಯರ ಬಳಗ ದೇವ ಪಡೆದುಕೊಂಡಿತು.‌ ಈ ಪ್ರಶಸ್ತಿಯನ್ನು ಮಂಡಳಿಯ ಪೂರ್ವಾಧ್ಯಕ್ಷ ದಿನೇಶ್...

ಕುಲ್ಕುಂದ : ಸೆ.25 ರಂದು ಬಸವನ ಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ “ತೆನೆ ಮುಹೂರ್ತ, ಸಾಮೂಹಿಕ ಚಂಡಿಕಾ ದುರ್ಗಾ ಹವನ ಹಾಗೂ ಶ್ರೀ ದುರ್ಗಾ ಪೂಜೆ”

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಶ್ರೀ ಕ್ಷೇತ್ರ ಬಸವನ ಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೆ.25 ಗುರುವಾರದಂದು ಬೆಳಿಗ್ಗೆ 8:00 ಗಂಟೆಯಿಂದ “ತೆನೆ ಮುಹೂರ್ತ(ನವಾನ್ನ)” ಹಾಗೂ “ಸಾಮೂಹಿಕ ಚಂಡಿಕಾ ದುರ್ಗಾ ಹವನ” ನಡೆಯಲಿದ್ದು, ರಾತ್ರಿ 6:00 ಗಂಟೆಯಿಂದ “ಶ್ರೀ ದುರ್ಗಾ ಪೂಜೆ ನಡೆಯಲಿದ್ದು, ಆ ಪ್ರಯುಕ್ತ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು...

ಐನೆಕಿದು : ಸ.ಹಿ.ಪ್ರಾ ಶಾಲೆಯಲ್ಲಿ “ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ”ದ ಬಗ್ಗೆ ಮಾಹಿತಿ ಕಾರ್ಯಾಗಾರ

ಐನೆಕಿದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.13 ರಂದು “ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ”ದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಂಶುಪಾಲರಾದ ಅಶೋಕ್ ಕುಮಾರ್ ಮೂಲೆಮಜಲು ಆಗಮಿಸಿದ್ದರು.ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಿದ್ಯಾಕುಮಾರಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಐನೆಕಿದು ಆರೋಗ್ಯ ಇಲಾಖೆ...

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಶನ್ ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ಸೆ.19 ರಂದು ನಡೆಯಿತು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ರಾಘವೇಂದ್ರ.ಬಿ ಕಾಮತ್  ಉಪನ್ಯಾಸ ನೀಡಿದರು. ಕಾಲೇಜಿನ ಸಿ.ಇ.ಒ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ. ಉಜ್ವಲ್ ಯು.ಜೆ. ಗೌರವ ಅತಿಥಿ ನೆಲೆಯಲ್ಲಿ ಮಾತನಾಡುತ್ತಾ...

ಸುಳ್ಯ : ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದಿ ದಿವಸ್

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಹಿಂದಿ ವಿಭಾಗದ ವತಿಯಿಂದ  2025-26 ನೇ ಸಾಲಿನ "ಹಿಂದಿ ದಿವಸ್ ಸಮಾರೋಹ್" ಕಾರ್ಯಕ್ರಮವು ಸೆ.18 ರಂದು ನಡೆಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಎನ್.ಪಿ ರವರು ವಹಿಸಿಕೊಂಡಿದ್ದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ದುರ್ಗಾರತ್ನ.ಸಿ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಹಿಂದಿವಿಭಾಗದ...

ಸುಳ್ಯ : ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಧನಸಹಾಯ ಹಸ್ತಾಂತರ

ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದ ವತಿಯಿಂದ ನಿಧನರಾದ ವಲಯದ ಸದಸ್ಯ ಶ್ರೀ ನಾರಾಯಣ ಕಾಯರ್ತೋಡಿ(Naaksಸ್ಟುಡಿಯೋ) ಇವರಿಗೆ ವಲಯದ ಸದಸ್ಯರಿಂದ ಸಂಗ್ರಹಿಸಿದ ಧನಸಹಾಯ ಮೊತ್ತ ರೂ. 19,050/-ಅನ್ನು ಅವರ ಮನೆಗೆ ತೆರಳಿ ವಲಯದ ಅಧ್ಯಕ್ಷರಾದ ಶಶಿ ಗೌಡ ಇವರ ಉಪಸ್ಥಿತಿಯಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್ ರಾವ್, ಪರಮ್, ಪ್ರಶಾಂತ್ ಶೇಣಿ, ವಸಂತಿ...

ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಲೇಖಕಿ, ಕವಯತ್ರಿ ಡಾ. ಅನುರಾಧಾ ಕುರುಂಜಿಯವರು 2025 ರ ಮಡಿಕೇರಿ ದಸರ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ.  ಸೆಪ್ಟೆಂಬರ್  25 ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಇವರು ಕವನ ವಾಚಿಸಲಿದ್ದು, ಈ...

ಸುಬ್ರಹ್ಮಣ್ಯ : ಸವಾರಿ ಮಂಟಪದ ಪಾರ್ಕಿಂಗ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ ಸೆ.19 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿ ವರ್ಗದವರು ಸ್ಥಳೀಯ ದೇವರಗದ್ದೆ ಮಿತ್ರ ಬಳಗ, ಸಂಜೀವಿನಿ ಸ್ವ-ಸಹಾಯ ಒಕ್ಕೂಟ ಜಂಟಿಯಾಗಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಇಂದು ಸುಬ್ರಹ್ಮಣ್ಯ ಸವಾರಿ ಮಂಟಪದ ಬಳಿಯ ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು "ಕುಕ್ಕೆ ಸುಬ್ರಹ್ಮಣ್ಯ ಪುಣ್ಯಕ್ಷೇತ್ರವು ದಿನದಿಂದ...
Loading posts...

All posts loaded

No more posts

error: Content is protected !!