ಮಂಡೆಕೋಲು : “ಪಂಚಸಪ್ತತಿ-2025” 75 ದಿನಗಳ ಸ್ವಚ್ಚತಾ ಅಭಿಯಾನಕ್ಕೆ ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದಿಂದ ಚಾಲನೆ

ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ವತಿಯಿಂದ ಅಕ್ಟೋಬರ್ 10 ರಿಂದ ಡಿಸೆಂಬರ್ 25 ರವರೆಗೆ 75 ದಿನಗಳ ಕಾಲ ನಡೆಯಲಿರುವ ಸ್ವಚ್ಚತಾ ಅಭಿಯಾನಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ ರವರು ಚಾಲನೆ ನೀಡಿ “ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಯುವಜನ ಸಂಯುಕ್ತ ಮಂಡಳಿಯು ಕೈಗೊಂಡ ಈ ಕಾರ್ಯಕ್ರಮ ಶ್ಲಾಘನೀಯ” ಎಂದರು.
ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ರವರು ಮಾತನಾಡಿ “ಕಸ ಹಾಕುವುದಕ್ಕಿಂತ ಕಸ ಹಾಕದಂತೆ ಜಾಗೃತಿ ಮೂಡಿಸಬೇಕು. ಪಂಚಸಪ್ತತಿ ಎನ್ನುವ ವಿಶೇಷ ಹೆಸರಿನೊಂದಿಗೆ ನಿರಂತರ 75 ದಿನಗಳ ಕಾಲ ಸ್ವಚ್ಛತಾ ಅಭಿಯಾನವನ್ನು ಕೈಗೊಂಡು ಅದಕ್ಕೆ ಬಹುಮಾನ ಇಟ್ಟು ಯುವಕ ಮಂಡಲಗಳಿಗೆ ಪ್ರೋತ್ಸಾಹ ನೀಡುತ್ತಿರುವ ಯುವಜನ ಸಂಯುಕ್ತ ಮಂಡಳಿಯ ಈ ಕಾರ್ಯ ಮೆಚ್ಚತಕ್ಕದ್ದು.  ಈ ಗ್ರಾಮದಲ್ಲಿ ಕೂಡ ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದವರು ಇದನ್ನು ಕಾರ್ಯಗತ ಮಾಡಿ ಒಳ್ಳೆಯ ರೀತಿಯಲ್ಲಿ ಇವತ್ತು ಬಸ್ ಸ್ಟ್ಯಾಂಡ್ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಎಲ್ಲರಿಗೂ ಶುಭ ವಂದನೆಗಳನ್ನು ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಕರ ಬಾಲ ಮಂದಿರ ಮಡಿಕೇರಿ ಇದರ ನಿವೃತ್ತ ಅಧೀಕ್ಷಕರಾದ ಶಾರದಾ ರಾಮನ್ ಮಾತನಾಡಿ ಮಹಿಳೆಯರ ಈ ಕೆಲಸಕ್ಕೆ ಶುಭ ಹಾರೈಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಲಕ್ಷ್ಮಣ ಉಗ್ರಾಣಿಮನೆ ಮತ್ತು ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್.ಜಿ ಇತರರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪೆರಾಜೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಶಿವಪ್ರಸಾದ್ ಉಗ್ರಾಣಿಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಉಷಾ ಗಂಗಾಧರನ್, ಗೀತಾ ಮಾವಂಜಿ, ಪ್ರಮುಖರಾದ ಗಂಗಾಧರನ್ ಮಾವಂಜಿ, ರಾಮಚಂದ್ರ ಮಣಿಯಾಣಿ, ಹರಿಶ್ಚಂದ್ರ ಪಾತಿಕಲ್ಲು, ಬಾಬು ಮಾರ್ಗ, ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟದ ಚಂದ್ರಾವತಿ, ಮಂಜುಳಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂತೆ ಮಾರುಕಟ್ಟೆ, ಗ್ರಾಮ ಪಂಚಾಯತ್ ಬಸ್ ನಿಲ್ದಾಣ, ಸರ್ಕಾರಿ ಬಾವಿ, ರಸ್ತೆ ಬದಿ ಕಾಡು ಕಡಿದು ಕಸ ಹೆಕ್ಕಿ ಸ್ವಚ್ಛತೆ ಮಾಡಲಾಯಿತು.
ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷರಾದ ವಿನುತಾ ಪಾತಿಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಸಂಘದ ಅಧ್ಯಕ್ಷರಾದ ವಾಸಂತಿ ಉಗ್ರಾಣಿಮನೆ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading