ಜಟ್ಟಿಪಳ್ಳ : ಕುಡಿಯುವ ನೀರು ಮಾಲಿನ್ಯ – ಬಾವಿ ಸ್ವಚ್ಚಗೊಳಿಸಲು ನಾಗರಿಕರ ಮನವಿ

ಜಟ್ಟಿಪ್ಪಳ್ಳದ ಭಾಗದ ನಾಗರಿಕರು ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ಸರಕಾರಿ ಬಾವಿಯನ್ನು ಉಪಯೋಗಿಸುತ್ತಿದ್ದು, ಇದೀಗ ಕಲುಷಿತಗೊಂಡು ಕುಡಿಯಲು ಆಯೋಗ್ಯವಾಗಿದೆ. ಮರದ ಎಲೆಗಳು ಬಿದ್ದು, ಹಲವು ವರ್ಷಗಳಿಂದ ಹೂಳು ತೆಗೆಯದೇ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.  ಇನ್ನಾದರೂ ಜನರಿಗೆ ಶುದ್ಧ...

ಲಕ್ಷ್ಮೀ ಮುಳ್ಳುಬಾಗಿಲು ನಿಧನ

ಕೊಲ್ಲಮೊಗ್ರ ಗ್ರಾಮದ ಮುಳ್ಳುಗಾಗಿಲು ಕುಕ್ಕುಜೆ ಪೈಲೂರು ಲಕ್ಷ್ಮೀ ಎಂಬವರು ನ.11 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಯೋಗೀಶ್, ಸೊಸೆಯಂದಿರಾದ ರೋಹಿಣಿ ಯೋಗೀಶ್, ಮೀನಾಕ್ಷಿ ಪದ್ಮಯ್ಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
Ad Widget

ಬಾಳುಗೋಡು : ಯುವ ಪತ್ರಕರ್ತ ಉಲ್ಲಾಸ್ ಕಜ್ಜೋಡಿ ಅವರನ್ನು ಸನ್ಮಾನಿಸಿದ ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಸಲುವಾಗಿ ಇಂದು(ನ.20) ಬಾಳುಗೋಡು ಗ್ರಾಮಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಯುವ ಪತ್ರಕರ್ತ, ಬರಹಗಾರ ಹಾಗೂ ಅಮರ ಸುದ್ದಿ ವಾರಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಅವರನ್ನು ಸಂಸದರು ಶಾಲು ಹೊದಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸುಳ್ಯ...

ಶಾಸಕ ಕೂಜುಗೋಡು ಕಟ್ಟೆಮನೆ ವೆಂಕಟ್ರಮಣ ಗೌಡರ ಪ್ರತಿಮೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಮಾಲಾರ್ಪಣೆ

ದಕ್ಷಿಣ ಕನ್ನಡ ಜಿಲ್ಲಾ ಸಂಸದ ಬ್ರಿಜೇಶ್ಚೌಟ ಅವರು ನ.20 ಬಾಳುಗೋಡು ಗ್ರಾಮಕ್ಕೆ ಭೇಟಿ ನೀಡಿದರು. ಈ  ಸಂದರ್ಭದಲ್ಲಿ ಸ್ವತಂತ್ರ ಭಾರತದ ಮೊದಲ ಚುನಾವಣೆಗಳಲ್ಲಿ ಅವಿಭಜಿತ ಪುತ್ತೂರು ಕ್ಷೇತ್ರದಿಂದ ಮದ್ರಾಸ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಶಾಸಕರು ಕೂಜುಗೋಡು ಕಟ್ಟೆಮನೆ ವೆಂಕಟ್ರಮಣ ಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿಯ  ಪ್ರಮುಖರು, ಕಾರ್ಯಕರ್ತರು...

ಬಾಳುಗೋಡು : “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ; ಸಾರ್ವಜನಿಕರೊಂದಿಗೆ ಸಂವಾದ-ಅಹವಾಲು ಸ್ವೀಕಾರ ; ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಕೆ ; ಇಬ್ಬರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಸಲುವಾಗಿ ಇಂದು(ನ.20) ಬಾಳುಗೋಡು ಗ್ರಾಮಕ್ಕೆ ಭೇಟಿ ನೀಡಿದರು. ಮುಚ್ಚಾರ ಬೆಟ್ಟುಮಕ್ಕಿ ದಿ| ತಮ್ಮಯ್ಯ ಗೌಡ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಭಾರತೀಯ...

ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಮಹಿಳಾ ಕಾಂಗ್ರೆಸ್ ನೇತ್ರತ್ವದಲ್ಲಿ ದೇಶದ ಪ್ರಥಮ ಮಹಿಳಾ ಪ್ರದಾನಿ ದಿವಂಗತ  ಇಂದಿರಾಗಾಂಧಿಯವರ 109 ಜನ್ಮದಿನಾಚರಣೆ

ನ.19 ಸಂಪಾಜೆ ವಲಯ ‌ಕಾಗ್ರೆಸ್ ವತಿಯಿಂದ ದೇಶದ ಪ್ರಥಮ ಮಹಿಳಾ ಪ್ರದಾನಿಗಳು ಸ್ವಾತಂತ್ರ್ಯ ಹೋರಾಟಗಾರರು ಮತ್ತು ವಿವಿಧ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿರುದ್ದ ಸೆಟೆದು ನಿಂತು ದೇಶವನ್ನು ಪ್ರಥವಾಗಿ ಅಣ್ವಾಯುಧ ರಾಷ್ಟ್ರವನ್ನಾಗಿಸಿ ಉಕ್ಕಿನ ಮಹಿಳೆಯೆಂದೇ ಖ್ಯಾತಿ ಪಡೆದ ದೇಶವಿಭಜಕ ಉಗ್ರವಾದಿಗಳಿಂದ ಹತ್ಯೆಗೈಲ್ಪಟ್ಟ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ 109ನೇ ವರ್ಷದ ಹುಟ್ಟು ಹಬ್ಬವನ್ನು ಮಹಿಳಾ ಕಾಂಗ್ರೆಸ್...

ನಾಳೆ(ನ.20) ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಾಳುಗೋಡು, ಕಲ್ಮಕಾರು ಹಾಗೂ ಕೊಲ್ಲಮೊಗ್ರು ಗ್ರಾಮಗಳಿಗೆ ಭೇಟಿ

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಸಲುವಾಗಿ ನಾಳೆ(ನ.20) ಬಾಳುಗೋಡು, ಕಲ್ಮಕಾರು ಹಾಗೂ ಕೊಲ್ಲಮೊಗ್ರು ಗ್ರಾಮಗಳಿಗೆ ಭೇಟಿ ನೀಡಲಿದ್ದು, ಬೆಳಿಗ್ಗೆ 11:30ಕ್ಕೆ ಬಾಳುಗೋಡು, ಮದ್ಯಾಹ್ನ 3:00 ಗಂಟೆಗೆ ಕಲ್ಮಕಾರು ಹಾಗೂ ಸಂಜೆ 4:50ಕ್ಕೆ ಕೊಲ್ಲಮೊಗ್ರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು...

ಸುಬ್ರಹ್ಮಣ್ಯದಲ್ಲಿ ಕಸ ಎಸೆದ ಭಕ್ತಾಧಿಯಿಂದ ಕಸ ಹೆಕ್ಕಿಸಿದ ಸ್ಥಳೀಯರು

ಸುಬ್ರಹ್ಮಣ್ಯದಲ್ಲಿಂದ ವಿವಿಧ ಸಂಘಟನೆ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು ಈ ಮಧ್ಯೆಯೆ ಭಕ್ತಾಧಿಯೋರ್ವ ಕಾರಿನಿಂದ ನದಿಗೆ ಕಸ ಎಸೆದ ಘಟನೆ ನಡೆಯಿತು. ಈ ಸ್ಥಳೀಯರು ಗಮನಿಸಿ,ವಾಹನ ತಡೆದ ಭಕ್ತಾದಿಗಳಿಂದಲೇ ಕಸ ಹೆಕ್ಕಿಸಿದ ಘಟನೆ ನ.19 ರಂದು ನಡೆದಿದೆ. ಸುಬ್ರಹ್ಮಣ್ಯದ ಸಾರ್ವಜನಿಕರು, ವಾಹನ‌ ಚಾಲಕರು, ಸಂಘಸಂಸ್ಥೆಗಳು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಪ್ರವಾಸಿಗರು, ದೂರದೂರಿನ ಭಕ್ತಾಧಿಗಳು ಕಸ ಎಸೆಯುವುದು...

ಸುಬ್ರಹ್ಮಣ್ಯ : ವೀರ ಮಾರುತಿ ಸ್ಪೋಟ್ಸ್ ಕ್ಲಬ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಯುವ ಜನ ಸಂಯುಕ್ತ ಮಂಡಳಿಯ ಪಂಚ ಸಪ್ತತಿ ಕಾರ್ಯಕ್ರಮದ ಅಂಗವಾಗಿ ಗುತ್ತಿಗಾರು ವೀರ ಮಾರುತಿ ಸ್ಪೋಟ್ಸ್ ಕ್ಲಬ್ ವತಿಯಿಂದ 41 ನೇ ದಿನದ ಕಾರ್ಯಕ್ರಮ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸ್ವಚ್ಛತೆ ನ.19 ರಂದು ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ,ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ : ಶ್ರೀ ಕ್ಷೇ.ಧ.ಗ್ರಾ.ಯೋಜನೆ ಹಾಗೂ ವೀರ ಮಾರುತಿ ಸ್ಪೋಟ್ಸ್ ಕ್ಲಬ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ  ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಶೌರ್ಯ ವಿಪತ್ತು ತಂಡ ಹಾಗೂ ವೀರ ಮಾರುತಿ ಸ್ಪೋಟ್ಸ್ ಕ್ಲಬ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರಾದ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನರಿಯ ಲೋಲಾಕ್ಷ ಕೈಕಂಬ, ಸತೀಶ್ ಕೂಜಗೋಡು, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಆರೋಗ್ಯಾಧಿಕಾರಿ...
Loading posts...

All posts loaded

No more posts

error: Content is protected !!