ಪಂಜ ಗ್ರಾಮ ಪಂಚಾಯತ್ ಅವ್ಯವಹಾರ ; ದ.ಸಂ.ಸ ವತಿಯಿಂದ ತನಿಖಾ ತಂಡದ ಮೂಲಕ ಜಿ.ಪಂ ಸಿ.ಇ.ಒ ಗೆ ಮನವಿ

ಸುಳ್ಯ ತಾಲೂಕು ಪಂಜ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರದ ಬಗ್ಗೆ ತಾಲೂಕು ಪಂಚಾಯತ್ ನಿಂದ ನೇಮಕಗೊಂಡಿರುವ ತನಿಖಾ ತಂಡದ ನೇತೃತ್ವ ವಹಿಸಿರುವ ದೇವರಾಜ್ ಮುತ್ಲಾಜೆಯವರ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ದ.ಸಂ.ಸ ವತಿಯಿಂದ ಲಿಖಿತ ರೂಪದ ಮನವಿಯನ್ನು ನೀಡಲಾಯಿತು.ಇದರ ಪ್ರತಿಯನ್ನು ತಾ.ಪಂ  ಕಾರ್ಯನಿರ್ವಹಣಾಧಿಕಾರಿಯವರಿಗೂ ಇವರ ಮೂಲಕ ಕೊಡಲಾಗಿದೆ. ದಲಿತ ನೌಕರರಾದ...

ರೆಂಜಾಳ ಶಾಸ್ತಾವು ಯುವಕ ಮಂಡಲದ ನೇತೃತ್ವದಲ್ಲಿ ಬಸ್ ನಿಲ್ದಾಣ ದುರಸ್ತಿ ಹಾಗೂ ಪೈಂಟಿಂಗ್

ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ  ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ಆಶ್ರಯದಲ್ಲಿ ಮರ್ಕಂಜ ಗ್ರಾಮದ ಮಿತ್ತಡ್ಕ ಕಾಲೊನಿ ಸಮೀಪದ ಬಸ್ ಪ್ರಯಾಣಿಕರ ತಂಗುದಾಣವನ್ನು ದುರಸ್ತಿಪಡಿಸಿ, ಪೈಂಟ್ ಬಳಿದು ಪ್ರಯಾಣಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Ad Widget

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಕಂದಡ್ಕ ನೇಮಕ

ಡಿ.9 ಮಂಗಳವಾರದಂದು ಜಿಲ್ಲಾ ಕಾಂಗ್ರೆಸ್ ಭವನ ಮಲ್ಲಿಕಟ್ಟೆಯಲ್ಲಿ ಜಿಲ್ಲಾ ಅಸಂಘಟಿತ ಘಟಕದ ಅಧ್ಯಕ್ಷರಾದ ಅಬ್ಬಾಸ್ ಅಲಿ ಅವರ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕ ಘಟಕದ ಮಾಸಿಕ ಸಭೆ ನಡೆಯಿತು. ಸುಳ್ಯ ತಾಲೂಕು ಅಸಂಘಟಿತ ಅಧ್ಯಕ್ಷರಾದ ದಿವಂಗತ ಎ.ಎಸ್ ಚಂದ್ರಲಿಂಗಂ ರವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ್ ರವರ ಶಿಪಾರಸ್ಸಿನ ಮೇರೆಗೆ...

ಪ್ರತಿಭಾ ಕಾರಂಜಿಯಲ್ಲಿ ಆದ್ಯಾ ಬಾಬ್ಲುಬೆಟ್ಟು ಹಾಗೂ ಕುಶಿತ್ ಮಲ್ಲಾರ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಹಾಗೂ ಕೆ.ಪಿ.ಎಸ್ ಬೆಳ್ಳಾರೆ ಇವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ವಿದ್ಯಾರ್ಥಿಗಳಾದ ಆದ್ಯಾ ಬಾಬ್ಲುಬೆಟ್ಟು ಭಾಗವಹಿಸಿ ಗಝಲ್ ಮತ್ತು ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು....

ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ 10 ದಿನದ ಸಂಸ್ಕೃತ ಸಂಭಾಷಣಾ ಶಿಬಿರದ ಉದ್ಘಾಟನೆಯು ಡಿ.08 ರಂದು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ ಯವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಈ ಶಿಬಿರವನ್ನು ಸಂಸ್ಕೃತ ಭಾರತಿ ಕಾಸರಗೋಡು ಮಂಗಳೂರು ಗ್ರಾಮಾಂತರ ವಿಭಾಗದ ಪ್ರಶಿಕ್ಷಕಿ...

ಮಂಡೆಕೋಲು : ದಾಸ ಸಂಕೀರ್ತನೆ ಹಾಗೂ
ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಅಜ್ಜಾವರ ವಲಯ ಹಾಗೂ ತತ್ವಮಸಿ ಗುಂಪು ಮಂಡೆಕೋಲು ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ,ಶಶ್ರೀ ಶಬರಿಗಿರಿ ಸೇವಾ ಪ್ರತಿಷ್ಠಾನ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಮಂಡೆಕೋಲು ಇವುಗಳ ಸಹಕಾರದೊಂದಿಗೆ ಅಂತರ್ ಜಿಲ್ಲಾ ಮಟ್ಟದ ದಾಸ ಸಂಕೀರ್ತನಾ ಕುಣಿತ ಭಜನಾ ಸ್ಪರ್ಧೆ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ...

ಆಶ್ಲೇಷ ನಕ್ಷತ್ರದಂದು ಕುಕ್ಕೆಯಲ್ಲಿ ಅಧಿಕ ಸಂಖ್ಯೆಯಲ್ಲಿ  ಜಮಾವಣೆಗೊಂಡ ಭಕ್ತಾದಿಗಳು

ಸುಬ್ರಹ್ಮಣ್ಯ ಡಿಸೆಂಬರ್ 9 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನಕ್ಷತ್ರವಾದ ತಿಂಗಳಿಗೊಮ್ಮೆ ಬರುವ ಆಶ್ಲೇಷ ನಕ್ಷತ್ರದಂದು ಕುಕ್ಕೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಜಮಾವನೆಗೊಂಡಿದ್ದರು. ಬೆಳಗ್ಗೆ 6:00 ಯಿಂದ ಆರಂಭವಾದ ಆಶ್ಲೇಷ ಬಲಿ ಸೇವೆಯು ನಿರಂತರವಾಗಿ ಮೂರು ಹಂತಗಳಲ್ಲಿ( ಬ್ಯಾಚ್) 11 ಗಂಟೆ ತನಕ ಭಕ್ತರು ಸೇವೆಗಾಗಿ ಸರತಿ ಸಾಲಿನಲ್ಲಿ ಇದ್ದದು ಕಂಡು ಬಂತು. ಇತ್ತ...

ಸುಳ್ಯದ ಓಡಬಾಯಿಯಲ್ಲಿ ಬಿ.ಎಂ.ಎ ಫ್ರೆಶ್ ಮಾರ್ಟ್ ಶುಭಾರಂಭ

ಸುಳ್ಯದ ಓಡಬಾಯಿಯಲ್ಲಿ ಕುಂಭಕ್ಕೋಡು ಕಸ್ತೂರಿ ಸಭಾಭವನದ ಮುಂಭಾಗ ಬಿಎಂಎ ವೆಜ್ ಗ್ರೂಪ್ಸ್ ನವರ ನೂತನ ಹೋಲ್ಸೇಲ್ ಮಳಿಗೆ ಬಿ.ಎಂ.ಎ ಫ್ರೆಶ್ ಮಾರ್ಟ್ ಡಿ.8ರಂದು ಶುಭಾರಂಭಗೊಂಡಿತು.ಇಲ್ಲಿ ತರಕಾರಿ, ಹಣ್ಣುಹಂಪಲು, ಜ್ಯೂಸ್, ಐಸ್ ಕ್ರೀಂ, ಸಲಾಡ್, ಡ್ರೈ ಫ್ರುಟ್ಸ್, ಟೀ, ಕಾಫಿ ಎಲ್ಲವೂ ಒಂದೇ ಮಳಿಗೆಯಲ್ಲಿ ದೊರೆಯುತ್ತದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಮ್ಹಾಲಕರು ತಿಳಿಸಿದ್ದಾರೆ.ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

ಉಬರಡ್ಕದಲ್ಲಿ ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ – “ಮಾಸ್ ಸಂಸ್ಥೆಯೂ ರೈತರಿಂದ ಉತ್ತಮ ಬೆಲೆಗೆ ಅಡಿಕೆ ಖರೀದಿಸುತ್ತಿದೆ” : ಸವಣೂರು ಸೀತಾರಾಮ ರೈ

“ಉಬರಡ್ಕದಲ್ಲಿಯೇ ಅಡಿಕೆ ಖರೀದಿ ಕೇಂದ್ರ ಆಗಿರುವುದರಿಂದ ರೈತರಿಗೆ ಸಹಕಾರಿಯಾಗಲಿದೆ ಎಲ್ಲರೂ ಸದುಪಯೋಗ ಮಾಡಿಕೊಳ್ಳಿ, ಮಾಸ್ ನಲ್ಲಿಯೂ ಉತ್ತಮ ಬೆಲೆ ನೀಡಿ ಅಡಿಕೆ ಖರೀದಿ ಮಾಡುತ್ತೇವೆ” ಎಂದು ಮಾಸ್ ಲಿಮಿಟೆಡ್ ನ ಅಧ್ಯಕ್ಷರಾದ ಸಹಕಾರ ರತ್ನ  ಕೆ.ಸೀತಾರಾಮ ರೈ ಸವಣೂರು ಹೇಳಿದರು. ಅವರು ಉಬರಡ್ಕದಲ್ಲಿ ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಂಗಳೂರು, ಮಾಸ್ ಲಿಮಿಟೆಡ್ ಇವರಿಂದ...

ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ “ಅರೆಭಾಷೆ ದಿನಾಚರಣೆ”

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವುಗಳ ಸಹಯೋಗದೊಂದಿಗೆ  ಆಂತರಿಕ ಗುಣಮಟ್ಟ ಭರವಸಾಕೋಶದ ಅಡಿಯಲ್ಲಿ ಅರೆಭಾಷೆ ಸಂಘದ ವತಿಯಿಂದ ಡಿ.08ರಂದು “ಅರೆಭಾಷೆ ದಿನಾಚರಣೆ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ವಹಿಸಿದ್ದರು. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಹಾಗೂ ಕೊಡಗು ಗೌಡ...
Loading posts...

All posts loaded

No more posts

error: Content is protected !!