ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ ನ. 21 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ  ಜಾತ್ರಾ  ಮಹೋತ್ಸವದ ಅಂಗವಾಗಿ ಬಿಳಿನೆಲೆ ಕೈಕಂಬದಿಂದ ಕುಲ್ಕುಂದದವರೆಗೆ ರಸ್ತೆಯ ಎರಡು ಬದಿಗಳಲ್ಲಿ ಇದ್ದಂತಹ ಪ್ಲಾಸ್ಟಿಕ್ ತ್ಯಾಜ್ಯಗಳು, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಚೀಲ ಹಾಗೂ ಕಸಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಕುಕ್ಕೆ ಕ್ಷೇತ್ರಕ್ಕೆ ಬಂದಂತಹ ಭಕ್ತಾದಿಗಳು ದೇವರ...

ಆಲೆಟ್ಟಿ ಮಿತಡ್ಕ ರೋಟರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಸುಳ್ಯ ವಲಯ ಗಾಂಧಿನಗರ ಕಾರ್ಯಕ್ಷೇತ್ರದ ಆಲೆಟ್ಟಿ ಮಿತಡ್ಕ ರೋಟರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಭಾಗದ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತುಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ| ಅನುರಾಧಾ ಕುರಂಜಿಯವರು ದುಶ್ಚಟಕ್ಕೆ ಬಲಿಯಾಗಿ ಅನುಭವಿಸುವ ಕಷ್ಟ ನಷ್ಟಗಳು ಮತ್ತು ಕೌಟುಂಬಿಕ ಹಾಗು...
Ad Widget

ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ದಿ ಸೇವೆಗಳ ಸುವರ್ಣ ಸಂಭ್ರಮಾಚರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ದಿ ಸೇವೆಗಳು ಸುವರ್ಣ ಸಂಭ್ರಮಾಚಾರಣೆ ಅಂಗವಾಗಿ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಯ ಅನುಷ್ಠಾನದಲ್ಲಿ ಇಲಾಖೆ ಮತ್ತು ಸದುಪಯೋಗ ಪಡೆಯುವಲ್ಲಿ ಸಾರ್ವಜನಿಕರು ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮವು ಮತ್ತು ಶಾಲಾ ಪೂರ್ವಾಶಿಕ್ಷಣ ಕಿಟ್ ವಿತರಣೆ ನ. 14 ರಂದು ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಸಮಗ್ರ ಶಿಶು ಅಭಿವೃದ್ಧಿ...

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಿ.ಸಿ ಜಯರಾಂ ರವರಿಗೆ ಸೂಡ ಅಧ್ಯಕ್ಷರಿಂದ ಅಭಿನಂದನೆ – “ಸುಳ್ಯದ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರಗಳಿಗೆ ಪಿ.ಸಿ ಯವರ ಸೇವೆ ಶ್ಲಾಘನೀಯ” : ಕೆ.ಎಂ ಮುಸ್ತಫ

ಕರ್ನಾಟಕ ಸರ್ಕಾರ ಅತ್ಯುತ್ತಮ ಸಹಕಾರಿಗಳಿಗೆ ನೀಡುವ ಸಹಕಾರ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಗೆ ಭಾಜಾನರಾದ ಸುಳ್ಯದ ಹಿರಿಯ ಸಹಕಾರಿ ಧುರೀಣ ಪಿ.ಸಿ ಜಯರಾಂ ರವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಸನ್ಮಾನಿಸಿದರು.ಅಭಿನಂದಿಸಿದ ಕೆ.ಎಂ. ಮುಸ್ತಫ ರವರು ಮಾತನಾಡಿ “32 ವರ್ಷಗಳ ಸುಧೀರ್ಘ ಅವಧಿಗೆ ಮಡಪ್ಪಾಡಿ ವ್ಯವಸಾಯ ಸೇವಾ ಸಹಕಾರಿ...

ಬೆಳ್ಳಾರೆ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025 ಉದ್ಘಾಟನೆ – “ಮನೆ ಮನೆಯಲ್ಲಿಯೂ ಗ್ರಂಥಾಲಯ ನಿರ್ಮಾಣವಾಗಲಿ” – ಡಾ. ಬಿ ಪ್ರಭಾಕರ ಶಿಶಿಲ

“ಓದುವಿಕೆಯಿಂದ ಮಾತ್ರ ಜ್ಞಾನ ವೃದ್ಧಿಸಿಕೊಳ್ಳಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲೂ ಗ್ರಂಥಾಲಯ ನಿರ್ಮಿಸುವ ಮೂಲಕ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕನಿಷ್ಠ ಒಂದು ಪುಸ್ತಕವಾದರೂ ಓದುವ ಕೆಲಸವಾಗಬೇಕು” ಎಂದು ಹಿರಿಯ ಸಾಹಿತಿ,ನಿವೃತ್ತ ಪ್ರಾಂಶುಪಾಲ ಡಾ| ಪ್ರಭಾಕರ ಶಿಶಿಲ ಹೇಳಿದರು. ಅವರು ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್...

ಕೊಲ್ಲಮೊಗ್ರು : ಜಾಗದ ವಿವಾದ – ಕತ್ತಿಯಿಂದ ಹಲ್ಲೆ – ದೂರು ದಾಖಲು

ಕೊಲ್ಲಮೊಗ್ರ ಗ್ರಾಮದ ಶಿವಾಲ ಎಂಬಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನ.19 ರಂದು ವರದಿಯಾಗಿದೆ. ಕೊಲ್ಲಮೊಗ್ರ ಗ್ರಾಮದ ಶಿವಾಲ ವಿಶ್ವನಾಥ ರೈ ಹಾಗೂ ಭರತ್ ಶಿವಾಲ ಎಂಬವರಿಗೆ ಹಲವು ಸಮಯಗಳಿಂದ ಜಾಗದ ತಕರಾರು ನಡೆಯುತ್ತಿತ್ತು.‌ ನ.17 ರಂದು ಭರತ್ ಶಿವಾಲ ರಸ್ತೆಯನ್ನು ಅಗಲೀಕರಣಗೊಳಿಸಿದ್ದರು. ನ.19 ರಂದು ವಿಶ್ವನಾಥ ರೈ ಅವರು...

ಕಲ್ಮಕಾರು ಭಾಗಕ್ಕೆ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡ ಬಸ್ ಸಂಚಾರ ಮತ್ತೆ ಪ್ರಾರಂಭ ; ಗ್ರಾಮಸ್ಥರ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಅವರು “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಹಾಗೂ ಅಹವಾಲು ಸ್ವೀಕರಿಸುವ ಸಲುವಾಗಿ ನ.20 ರಂದು ಬಾಳುಗೋಡು, ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ನಡೆದ...

ಕುಕ್ಕೆ ಸುಬ್ರಹ್ಮಣ್ಯ : ಸಾಲು ಸಾಲು ಹಣತೆ ದೀಪಗಳ ನಡುವೆ ಭಕ್ತಿ-ವೈಭವದ ಲಕ್ಷದೀಪೋತ್ಸವ ಹಾಗೂ ದೇವರ ಉತ್ಸವ

ಸುಬ್ರಹ್ಮಣ್ಯ ನ.19 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ವೈಭವದ ಲಕ್ಷದೀಪೋತ್ಸವ ನೆರವೇರಿತು. ಸಾಲು ಸಾಲು ಹಣತೆ ದೀಪಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ನಡೆಯಿತು.  ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ಶ್ರೀ ದೇವಳದ ಅರ್ಚಕರು ಉತ್ಸವದ ವಿದಿ...

ಬೆಳ್ಳಾರೆ : ಶತಾಯುಷಿ ಶ್ರೀಮತಿ ಕುಂಞಿ ನಿಧನ

ಬೆಳ್ಳಾರೆ ಗ್ರಾಮದ ಗೌರಿಹೊಳೆಯ ಹತ್ತಿರ ನಿವಾಸಿಯಾದ ಶ್ರೀಮತಿ ಕುಂಞಿಯವರು ನ 21ರಂದು ಬೆಳಿಗ್ಗೆ ನಿಧನರಾದರು.ಇವರಿಗೆ 100 ವರುಷ ಪ್ರಾಯವಾಗಿತ್ತು.ಇವರ ಪುತ್ರ ಬ್ಯಾಂಕ್ ಆಫ್ ಬರೋಡ ದೊಡ್ಡತೋಟ ಶಾಖೆಯಲ್ಲಿ ಉದ್ಯೋಗಿಯಾಗಿರುವ ಕುಶಲ ಸೇರಿದಂತೆ ಮೂರು ಗಂಡು, ಎರಡು ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.

ಸುಳ್ಯ ರೋಟರಿ ವಿದ್ಯಾರ್ಥಿನಿ ಕು.ಕ್ಷಮಾ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ

ನವೆಂಬರ್ 20 ರಂದು ಹಾವೇರಿಯಲ್ಲಿ ನಡೆದ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಪದವಿಪೂರ್ವ  ಇಲಾಖೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿಪೂರ್ವ ಬಾಲಕ–ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಕ್ಷಮಾ ತೃತೀಯ ಸ್ಥಾನ ಗಳಿಸಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.ಅಜ್ಜಾವರ ಗ್ರಾಮದ ಶ್ರೀ ತೀರ್ಥರಾಮ ಮುಡೂರು ಮತ್ತು ಶ್ರೀಮತಿ ಪೂರ್ಣಿಮಾ ಎ.ಜೆ...
Loading posts...

All posts loaded

No more posts

error: Content is protected !!