ಅರೆಭಾಷೆ ಕವನ : ಬೊದ್ಕ್‌ನ ಬೇರ್ ಈ ನಮ್ಮ ಹಳ್ಳಿ…

ನಮ್ಮ ಬೊದ್ಕ್‌ನ ಬೇರ್ ಈ ನಮ್ಮ ಹಳ್ಳಿ, ಇದರ ಬುಟ್ಟು ಎಂತಕೆ ಪೇಟೆ-ಗೀಟೆ ಹುಡ್ಕ್ಯಂಡ್ ದೂರ ಹೋದರೆ ನೀವು ಹೇಳಿ, ಇಲ್ಲಿ ಇಲ್ಲಾದ್ ಅಲ್ಲಿ ಎಂತ ಉಟ್ಟು ಒಮ್ಮೆ ನೀವು ಹೇಳಿ, ಇಂದ್ ನೀವು ಹೊರ್ಟು ನಿತ್ತಿರುವ ಆ ಪೇಟೆ ಬೊದ್ಕ್‌ನ ಮೂಲನೇ ಈ ನಮ್ಮ ಹಳ್ಳಿ...ಅವರ ಬೊದ್ಕ್‌ಲಿ ಅದೆಷ್ಟೇ ಬೇನೆಗ ಇದ್ದರೂ ನಮ್ಮ ಬೊದ್ಕ್‌ಗೆ...

ಕೊಲ್ಲಮೊಗ್ರು: ವಿದ್ಯಾರ್ಥಿಗಳ ಹಾಗೂ ಪೋಷಕರ ಸಮನ್ವಯ ಕಾರ್ಯಾಗಾರ “ಅನುಬಂಧ” ; “ಮಕ್ಕಳನ್ನು ಕೇವಲ ಪರೀಕ್ಷೆಗೆ ಸಿದ್ಧಪಡಿಸಬೇಡಿ, ಜೀವನಕ್ಕೆ ಸಿದ್ಧಪಡಿಸಿ” : ಲೋಕೇಶ್ ಪೀರನಮನೆ

“ಮಕ್ಕಳಿಗೆ ಅಂಕಗಳಿಗಿಂತ ಬದುಕುವ ವಿವೇಕ ಹಾಗೂ ಆತ್ಮವಿಶ್ವಾಸ ಮುಖ್ಯವಾಗಿದ್ದು, ಪೋಷಕರು ಮಕ್ಕಳನ್ನು ಕೇವಲ ಪರೀಕ್ಷೆಗೆ ಸಿದ್ಧಪಡಿಸದೆ ಜೀವನಕ್ಕೆ ಸಿದ್ಧಪಡಿಸಬೇಕು” ಎಂದು ತರಬೇತುದಾರ ಲೋಕೇಶ್ ಪೀರನಮನೆ ಹೇಳಿದರು. ಬಂಗ್ಲೆಗುಡ್ಡೆ ಸ.ಹಿ‌.ಪ್ರಾ ಶಾಲಾ ವಠಾರದಲ್ಲಿ ಆ.09ರಂದು ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲೆಯ 9ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಆಯೋಜಿಸಲಾಗಿದ್ದ “ಅನುಬಂಧ” ಎಂಬ ವಿಶೇಷ ಸಮನ್ವಯ...
Ad Widget

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಗೌರವಾರ್ಪಣೆ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅದ್ಯಕ್ಷರಾದ ಎಸ್.ಸಂಶುದ್ದೀನ್ ಅವರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ(ಬಿ) ಇದರ ಅದ್ಯಕ್ಷರಾದ ಡಾ। ರೇಣುಕಾ ಪ್ರಸಾದ್ ಮತ್ತು ಡಾ। ಜ್ಯೊತಿ ಆರ್ ಪ್ರಸಾದ್ ದಂಪತಿಗಳನ್ನು ಭೇಟಿಯಾಗಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಿತ್ಯಾನಂದ ಮುಂಡೋಡಿ, ಜ್ಞಾನೇಶ್, ಚಂದ್ರಶೇಖರ ನಂಜೆ, ಹರೀಶ್ ಬಂಟ್ವಾಳ್, ಕೆ.ಟಿ ವಿಶ್ವನಾಥ, ಶಾಫಿ ಕುತ್ತಮೊಟ್ಟೆ ಸೇರಿದಂತೆ...

ಮನ್ವಿತ್ ಎಂ.ಪಿ ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆ

ದೇವಚಳ್ಳ ಗ್ರಾಮದ ಮೆದು ನಿವಾಸಿಯಾದ ಮನ್ವಿತ್ ಎಂ.ಪಿ ಇವರು 2025-26 ನೇ ಸಾಲಿನ ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಯಲ್ಲಿ ಕಮ್ಮಾಜೆ ಶಾಲೆಗೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಪಿ.ಎಮ್.ಶ್ರೀ ಕೆ.ಪಿ.ಎಸ್ ಗುತ್ತಿಗಾರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪುರುಷೋತ್ತಮ.ಎಮ್ ಹಾಗೂ ಶ್ಯಾಮಲಾ ದಂಪತಿಗಳ ಪುತ್ರ.

ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆರ್‌.ಎಂ.ಎಸ್ ಪ್ರೌಢಶಾಲೆ ಸಂಪಾಜೆ ನಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ ಎ.ಜೆ 9ನೇ ಚತುರ್ಥ ಸ್ಥಾನ, ಪ್ರೀತನ್ ವಿನ್ಸ್ ಡಿ'ಸೋಜಾ 9ನೇ ಪಂಚಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  ಶಾಲಾ ಜೊತೆ ಕಾರ್ಯದರ್ಶಿ ರೆ.ಫಾ. ಆಲ್ವಿನ್...

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಂಪೆನಿಗೆ ಆಯ್ಕೆ

ಆ.08ರಂದು ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ವತಿಯಿಂದ ನಡೆಸಿದ Codeyoung ಕಂಪೆನಿಯ ಸಂದರ್ಶನದಲ್ಲಿ 2027ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಚಂದನ.ಪಿ, ದೃತಿಕ.ಬಿ, ಖುಷಿ ಕೆ.ಟಿ, ಕುಸುಮ.ಆರ್, ಮಾನ್ಯ ಪಿ.ವಿ, ಮನಸ್ವಿ ಕೊಚ್ಚಿ, ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸಫ ಫಾಥಿಮ ಒ.ಎಮ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ...

ಕುಮಾರಸ್ವಾಮಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಿವೇದ್ಯ ಗಣೇಶ್ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯಕ್ಕೆ ಆಯ್ಕೆ

ಸುಬ್ರಹ್ಮಣ್ಯ : ಕಡಬ ತಾಲೂಕಿನ ಕುಮಾರಸ್ವಾಮಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಿವೇದ್ಯಾ ಗಣೇಶ್ ಅವರು CUET ಪರೀಕ್ಷೆಯಲ್ಲಿ ಅರ್ಹತೆ ಪಡೆದು, ನವದೆಹಲಿಯಲ್ಲಿರುವ South Asian University(SAU)ಯ ಐದು ವರ್ಷದ Integrated BS-MS(Interdisciplinary Sciences) ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಈ ಕೋರ್ಸ್‌ನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಹಾಗೂ ಇತರೆ ವಿಜ್ಞಾನ ವಿಭಾಗಗಳ ಸಮಗ್ರ ಅಧ್ಯಯನದೊಂದಿಗೆ ಸಂಶೋಧನಾ...

ಭಾರೀ ಮಳೆ ಹಿನ್ನಲೆ ನಾಳೆ(ಆ.08) ಪುತ್ತೂರು ಉಪವಿಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ – ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಹೊರಡಿಸಿರುವ ಹವಾಮಾನ ಮುನ್ಸೂಚನೆಯಂತೆ ಪುತ್ತೂರು ಉಪವಿಭಾಗದಾಧ್ಯಂತ ಮಳೆಯಾಗುತ್ತಿದ್ದು, ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸೂಚನೆಯಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದ ತಹಶೀಲ್ದಾರರ ಮನವಿಯ ಪ್ರಕಾರವಾಗಿ ಪುತ್ತೂರು ತಾಲೂಕು, ಬೆಳ್ತಂಗಡಿ ತಾಲೂಕು, ಸುಳ್ಯ ತಾಲೂಕು, ಕಡಬ ತಾಲೂಕುಗಳ ಎಲ್ಲಾ ಅಂಗನವಾಡಿ...

ಆ.9ರಂದು ಜೈ ತುಲುನಾಡ್ ಬೆಂಗಳೂರು ವತಿಯಿಂದ ತುಳುನಾಡ ಆಟಿ ಸಂಭ್ರಮ

ಬೆಂಗಳೂರು:2021 ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ "ವಿಶೇಷ ಸಂಘಟನಾ ಪುರಸ್ಕಾರ" ಪ್ರಶಸ್ತಿ ಪುರಸ್ಕೃತ ಜೈ ತುಲುನಾಡ್ ಬೆಂಗಳೂರು (ರಿ.) ವತಿಯಿಂದ ಆಗಸ್ಟ್ 9, 2026 (ಭಾನುವಾರ) ರಂದು ತುಳುನಾಡ ಆಟಿ ಸಂಭ್ರಮ ಬೆಂಗಳೂರಿನ ಬಿಳೇಕಹಳ್ಳಿಯ ವಿಜಯ ಬ್ಯಾಂಕ್ ಲೇಔಟ್‌ನ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 7.15ಕ್ಕೆ ಅಯ್ಯಪ್ಪ...

ಎನ್ಎಂಸಿ ಯುವ ರೆಡ್ ಕ್ರಾಸ್ ಘಟಕದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವು ಐಕ್ಯೂಎಸಿ(IQAC) ಸಹಯೋಗದಲ್ಲಿ ಕೆ.ವಿ.ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು “ರಕ್ತ ನೀಡಿ ಜೀವ ಉಳಿಸಿ” ಎನ್ನುವ ಶೀರ್ಷಿಕೆಯಡಿಯಲ್ಲಿ ಆಯೋಜಿಸಿತ್ತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ...
Loading posts...

All posts loaded

No more posts

error: Content is protected !!