ರಾಜ್ಯದಲ್ಲಿ ಪ್ರಬಲ ಗೋ ಹತ್ಯಾ ನಿಷೇಧ ಮಸೂದೆ ಶೀಘ್ರ

ಗೋ ರಕ್ಷಕರಿಗೆ ಮತ್ತು ಗೋಹತ್ಯೆಯನ್ನು ವಿರೋಧಿಸುತ್ತಾ ಬಂದ ವಿವಿಧ ಹಿಂದೂ ವೇದಿಕೆಗಳಿಗೆ ತಾವು ಇಷ್ಟು ದಿನ ಮಾಡಿದ ಹೋರಾಟ ಸಾರ್ಥಕವಾಗುವ ಕ್ಷಣ ಸನ್ನಿಹಿತವಾಗಿದೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲೇ ಗುಜರಾತ್ ಮಾದರಿಯಲ್ಲಿ ಪ್ರಬಲವಾದ ಹೊಸ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಹಿಂದೆ...

ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಸರ್ಕಾರದ ನಿರ್ದೇಶನ ಕಡ್ಡಾಯವಾಗಿ ಪಾಲಿಸಿ-ಎಸ್ ಎಂ ಎ ಸುಳ್ಯ

ಕೋವಿಡ್ 19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸಂಪೂರ್ಣ ಲಾಕ್ ಡೌನ್ ಗೊಂಡು ಮಸೀದಿಗಳು ಒಳಗೊಂಡಂತೆ ಎಲ್ಲಾ ಧಾರ್ಮಿಕ ಕ್ಷೇತ್ರಗಳು ಮುಚ್ಚಿದ್ದವು. ಇದೀಗ ಲಾಕ್ ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಜೂ. 08 ರಿಂದ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಕೂಲ ಸಾಧ್ಯತೆ ಇರುವುದರಿಂದ ಅತ್ಯಂತ ಜಾಗರೂಕತೆಯಿಂದ ಅದನ್ನು ಸದುಪಯೋಗ ಪಡಿಸಬೇಕಾಗಿದೆ.ಈ ನಿಟ್ಟಿನಲ್ಲಿ ಮಸೀದಿಗಳ ಪ್ರಾರ್ಥನೆಯ ಪುನರಾರಂಭಕ್ಕೆ ಸರಕಾರ...
Ad Widget

ಲತೀಫ್ ಹತ್ಯೆಯ ಸಂಚಿನ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲಿ- ರಿಫಾಯಿ ಜುಮಾಃ ಮಸ್ಜಿದ್ ಸಮಹಾದಿ

ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ಬಣಗಳ ಕಾದಾಟದಲ್ಲಿನಮ್ಮ ಜಮಾಅತ್ ಗೆ ಒಳಪಟ್ಟ ಅಮಾಯಕ ಅಬ್ದುಲ್ ಲತೀಫ್ ಎಂಬ ಯುವಕನನ್ನು ಹಾಡಹಗಲೇ ದುಷ್ಕರ್ಮಿಗಳು ಕೊಲೆಗೈದು ವಿಕ್ರತಿ ಮೆರೆದದ್ದು ಖಂಡನೀಯವಾಗಿದೆ.ಸಾದು ಸ್ವಭಾವ ಮತ್ತು ಪರೋಪಕಾರಿ ಯಾಗಿ ನಮ್ಮ ಜಮಾಅತ್ ನ ಎಲ್ಲಾ ಆಗು ಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಈ ಯುವಕನ ಅಕಾಲಿಕ ಮರಣವು ಇಡೀ ಊರನ್ನೆ ಶೋಕ ಸಾಗರದಲ್ಲಿ...

ಜೂನ್ 14 ಡಿಕೆಶಿ ಪದಗ್ರಹಣ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜೂನ್ 7ರಂದು ನಿಗದಿಯಾಗಿದ್ದ ಡಿಕೆಶಿ ಪದಗ್ರಹಣ ಮುಂದೂಡಿಕೆ ಯಾಗಿತ್ತು. ಇದೀಗ ಜೂನ್ 14ರಂದು ಪದಗ್ರಹಣಕ್ಕೆ ಮುಹೂರ್ತ ಪಿಕ್ಸ್ ಆಗಿದೆ ಎಂದು ತಿಳಿದುಬಂದಿದೆ

ಬೆಳ್ತಂಗಡಿ:ಗ್ರಾಹಕರಿಗೆ ಪಂಗನಾಮ ಹಾಕಿದ ಅಡಿಕೆ ವ್ಯಾಪಾರಿ

ಬೆಳ್ತಂಗಡಿ ಮುಂಗಡ ಅಡಕೆ ಖರೀದಿಸಿ ನೂರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ಹಣ ಕೊಡಲು ಬಾಕಿ ಮಾಡಿದ್ದ ಅಡಕೆ ವ್ಯಾಪಾರಿಯೋರ್ವರು ಮನೆಗೆ ಬೀಗ ಹಾಕಿ ಒಂದು ವಾರದಿಂದ ನಿಗೂಢವಾಗಿ ನಾಪತ್ತೆಯಾದ ಘಟನೆ ಬಂದಾರು ಗ್ರಾಮದಿಂದ ವರದಿಯಾಗಿದ್ದು ಹಣ ಕಳೆದುಕೊಳ್ಳುವ ಭೀತಿಯಲ್ಲಿರುವ ಗ್ರಾಹಕರು ದಾರಿ ತೋಚದ ತೀವ್ರ ಆತಂಕ ಪಡುವಂತಾಗಿದೆ . ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಟ್ಲಡ್ಕ...

ಗೃಹರಕ್ಷಕ ಸೇವೆ ಮುಂದುವರಿಕೆಗೆ ಮುಖ್ಯಮಂತ್ರಿ ತೀರ್ಮಾನ

ಕಳೆದ ಕೆಲವು ದಿನಗಳ ಹಿಂದೆ ಪೊಲೀಸರೊಂದಿಗೆ ಭುಜಕ್ಕೆ ಭುಜ ಜೋಡಿಸಿ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದ ಗೃಹರಕ್ಷಕ ದಳದವರು ರಸ್ತೆಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಯಲ್ಲಿ ಕಾಣದೆ ಅವರ ಕೊರತೆಯು ಎದ್ದು ಕಾಣುತ್ತಿತ್ತು. ಕಳೆದ ಹಲವು ತಿಂಗಳುಗಳಿಂದ ಕೋವಿಡ್ 19 ರ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸೇವೆಯಲ್ಲಿ ತೊಡಗಿಕೊಂಡಿದ್ದ ಗೃಹರಕ್ಷಕ ದಳದವರು ಪ್ರತಿಯೊಂದು ಕ್ಷೇತ್ರಗಳಲ್ಲಿ ಕರ್ತವ್ಯ ನಿಷ್ಠೆಯಿಂದ ನಡೆದು...

ಇಂದು ರಾಜ್ಯದಲ್ಲಿ 378 ಪಾಸಿಟೀವ್ ಕೇಸ್ – ಉಡುಪಿ 121 ಕೇಸ್

ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದ್ದು ಇಂದು ಒಂದೇ ದಿನ 378ಕ್ಕೇರಿಕೆಯಾಗಿದೆ. ಒಟ್ಟು 5213ಕ್ಕೇರಿಕೆಯಾಗಿದೆ. ಅದರಲ್ಲಿ ಉಡುಪಿ 121, ಕಲಬುರಗಿ 69, ಯಾದಗಿರಿ 103, ಬೆಂಗಳೂರು 18, ರಾಯಚೂರು 2, ಮಂಡ್ಯ 3, ಬೆಳಗಾವಿ 5, ಬೀದರ್ 1, ಹಾಸನ 3, ವಿಜಯಪುರ 6, ದಕ್ಷಿಣ ಕನ್ನಡ 24, ಚಿಕ್ಕಬಳ್ಲಾಪುರ 2, ಉತ್ತರ ಕನ್ನಡ...

ಕಡಬ ಸಿಎ ಬ್ಯಾಂಕ್ ಒಂದು ವಾರ ಸೀಲ್ ಡೌನ್

ಕಡಬದ ಕೊರೋನಾ ಸೋಂಕಿತ ವ್ಯಕ್ತಿ ಇಲ್ಲಿನ ಸಿಎ ಬ್ಯಾಂಕ್ ಗೆ ಆಗಮಿಸಿದ್ದ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮೇ .6 ರಿಂದ ಒಂದು ವಾರಗಳ ಕಾಲ ಸಿ.ಎ ಬ್ಯಾಂಕ್ ಹಾಗೂ ಅದರ ಶಾಖೆಗಳನ್ನು ಸೀಲ್‌ ಡೌನ್ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ತಿಳಿಸಿದ್ದಾರೆ . ಈಗಾಗಲೇ ಕಡಬ ಕೊರೋನಾ ಸೋಂಕಿತ ವ್ಯಕ್ತಿಯ ವರದಿ ಪಾಸಿಟಿವ್...

ಸುಬ್ರಹ್ಮಣ್ಯ: ಅಕ್ರಮವಾಗಿ ನೀರು ತರುತ್ತಿದ್ದಾರೆಂದು ಅರಣ್ಯಾಧಿಕಾರಿಗೆ ದೂರು- ಸ್ಪಷ್ಟನೆ

ಸುಬ್ರಹ್ಮಣ್ಯ ವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಪೈಪು ಅಳವಡಿಸಿ ನೀರನ್ನು ಅಕ್ರಮವಾಗಿ ತರುತ್ತಿರುವ ಬಗ್ಗೆ ಸುಬ್ರಹ್ಮಣ್ಯ ವಲಯದ ವಲಯ ಅರಣ್ಯಾಧಿಕಾರಿ ಗಳಿಗೆ ಸುಬ್ರಹ್ಮಣ್ಯದ ಗ್ರಾಮಸ್ಥರು ದೂರು ನೀಡಿದ್ದಾರೆ. ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತ ಅರಣ್ಯದಿಂದ ಅಕ್ರಮವಾಗಿ ನೀರನ್ನು ತರುತ್ತಿದೆ ಎಂದು ಶಿವರಾಮ ರೈ, ಶ್ರೀನಾಥ್ ಟಿ ಎಸ್, ಪ್ರಶಾಂತ್...

ಎಸ್.ಎಸ್.ಎಲ್.ಸಿ ಪರೀಕ್ಷೆ- ನೋಡಲ್ ಅಧಿಕಾರಿ ನಿಯೋಜನೆ

2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ತಾಲೂಕು ಸಹಾಯವಾಣಿ ನೋಡಲ್ ಆಗಿ ನಿಯೋಜಿಸಿರುವ ಬಗ್ಗೆಜೂ 4 ರಂದು ಮಾನ್ಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಸೂಚಿಸಿದ್ದಾರೆ. ಅದರಂತೆ ಈ ವಿಷಯಕ್ಕೆ ಸಂಬಂಧಿಸಿದಂತೆ 2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುರಿತು ಯಾವುದೇ ಸಂದೇಹಗಳು ಅಗತ್ಯ ಮಾಹಿತಿಗಳನ್ನು ಪರೀಕ್ಷೆ ಬರೆಯುವ ಮಕ್ಕಳಿಗೆ ಅಥವಾ ಪೋಷಕರಿಗೆ...
Loading posts...

All posts loaded

No more posts

error: Content is protected !!