ಗೃಹರಕ್ಷಕ ಸೇವೆ ಮುಂದುವರಿಕೆಗೆ ಮುಖ್ಯಮಂತ್ರಿ ತೀರ್ಮಾನ


ಕಳೆದ ಕೆಲವು ದಿನಗಳ ಹಿಂದೆ ಪೊಲೀಸರೊಂದಿಗೆ ಭುಜಕ್ಕೆ ಭುಜ ಜೋಡಿಸಿ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದ ಗೃಹರಕ್ಷಕ ದಳದವರು ರಸ್ತೆಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಯಲ್ಲಿ ಕಾಣದೆ ಅವರ ಕೊರತೆಯು ಎದ್ದು ಕಾಣುತ್ತಿತ್ತು. ಕಳೆದ ಹಲವು ತಿಂಗಳುಗಳಿಂದ ಕೋವಿಡ್ 19 ರ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸೇವೆಯಲ್ಲಿ ತೊಡಗಿಕೊಂಡಿದ್ದ ಗೃಹರಕ್ಷಕ ದಳದವರು ಪ್ರತಿಯೊಂದು ಕ್ಷೇತ್ರಗಳಲ್ಲಿ ಕರ್ತವ್ಯ ನಿಷ್ಠೆಯಿಂದ ನಡೆದು ಸಮಾಜಕ್ಕೆ ಕೊಡುಗೆಯಾಗಿ ಕಾಣುತ್ತಿದ್ದರು.
ದಿಢೀರನೆ ಬಂದ ಆದೇಶವು ಗೃಹರಕ್ಷಕದಳದ ಸಿಬ್ಬಂದಿಗಳನ್ನು ಕಕ್ಕಾಬಿಕ್ಕಿಯಾಗಿ ಮಾಡಿದವು. ಈ ವೃತ್ತಿಯನ್ನು ನಂಬಿ ಹಲವಾರು ಜೀವಗಳು ತಮ್ಮ ಕುಟುಂಬವನ್ನು ಸಾಗಿಸುತ್ತಿದ್ದ ವು. ಇವರ ಕೆಲಸಕ್ಕೆ ಕಂಟಕ ಬಂದಾಗ ವಿವಿಧ ಸಂಘಟನೆಗಳು ವಿವಿಧ ರಾಜಕೀಯ ಮುಖಂಡರುಗಳು ಅವರ ಪರವಾಗಿ ಧ್ವನಿಯೆತ್ತಲು ಆರಂಭಿಸಿದರು. ಇದಕ್ಕೆ ಪೂರಕವಾಗಿ ಸುಳ್ಯ ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ ರವರು ಇವರನ್ನು ಕರ್ತವ್ಯದಿಂದ ತೆಗೆಯುವ ಮಾತುಗಳು ಆರಂಭಗೊಂಡಾಗ ಕೂಡಲೇ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ಕರೆದು ಉನ್ನತ ಮಟ್ಟದ ಅಧಿಕಾರಿಗಳಿಗೆ ಅವರನ್ನು ಸೇವೆಯಲ್ಲಿ ಇರಿಸುವಂತೆ ಒತ್ತಾಯಿಸಿದರು. ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ವರದಿಗಳು ಪ್ರಕಟ ಗೊಳ್ಳುವಂತೆ ಪ್ರಯತ್ನಿಸಿದರು.
ಎಲ್ಲಾ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಯಡಿಯೂರಪ್ಪ ರವರು ಜೂನ್ ಐದರಂದು ಗೃಹ ಇಲಾಖೆಯ ವಿವಿಧ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಿ ಗೃಹ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹರಕ್ಷಕದಳದವರನ್ನು ಯಥಾಸ್ಥಿತಿ ಸೇವೆಯಲ್ಲಿ ತೊಡಗಿಸಿ ಕೊಳ್ಳುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ರವರು ಕೋವಿಡ್ 19ರ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅತ್ಯುತ್ತಮ ಕಾರ್ಯ ನಿರ್ವಹಿಸಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇಲಾಖೆಯ ಸುಧಾರಣೆಗಾಗಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಉದ್ಯೋಗವನ್ನು ಕಳೆದುಕೊಳ್ಳುವ ಭಯದಲ್ಲಿ ಇದ್ದ ಗೃಹರಕ್ಷಕ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಂತಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading