ಅಡ್ಕಾರು ಅಂಜನಾದ್ರಿ ಜಾತ್ರೋತ್ಸವದ ಪ್ರಯುಕ್ತ 48 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮ ಆರಂಭ

ಜಾಲ್ಸೂರಿನ ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಜಾತ್ರೋತ್ಸವದ ಅಂಗವಾಗಿ 48 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮವು ಮಾ.07ರಂದು ಪ್ರಾತ:ಕಾಲ ಆರಂಭಗೊಂಡಿದೆ. 48 ಗಂಟೆಗಳ ಅಖಂಡ ಭಜನಾ ಸೇವೆಯು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯದ ನಿರ್ದೇಶನದಲ್ಲಿ ಜರುಗುತ್ತಿದ್ದು, ಅಖಂಡ ಭಜನಾ ಸಮಿತಿ ಗೌರವಾಧ್ಯಕ್ಷರಾದ ಜಯರಾಮ ರೈ ಜಾಲ್ಸೂರು ಅವರು...

ಅಡ್ಕಾರು ಅಂಜನಾದ್ರಿ ಪ್ರಸನ್ನಾಂಜನೇಯ ಕ್ಷೇತ್ರದಲ್ಲಿ ಜಾತ್ರೋತ್ಸವ ಸಡಗರ ; ದೇವರ ಬಲಿ – ದರ್ಶನ ಬಲಿ – ದೈವ -ದೇವರ ಭೇಟಿ ; ಗುಳಿಗರಾಜ ದೈವದ ಕೋಲ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಚೈತನ್ಯ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರ ಉತ್ಸವ ಬಲಿ - ದರ್ಶನಬಲಿ, ದೈವ - ದೇವರ ಭೇಟಿ, ಬಟ್ಟಲುಕಾಣಿಕೆ, ಶ್ರೀಮುಡಿ ಗಂಧ ಪ್ರಸಾದವು ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ...
Ad Widget

ಅಡ್ಕಾರು ಅಂಜನಾದ್ರಿ ಶ್ರೀ ಆಂಜನೇಯನ ಕ್ಷೇತ್ರದಲ್ಲಿ ಚೈತನ್ಯ ಬ್ರಹ್ಮಕಲಶೋತ್ಸವ ಸಂಭ್ರಮ ; ಶ್ರೀ ಕರಿಚಾಮುಂಡಿ ದೈವದ ಪ್ರತಿಷ್ಠೆ – ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಬ್ರಹ್ಮಕಲಶಾಭಿಷೇಕ ; ಇಂದು ರಾತ್ರಿ ದೇವರ ಉತ್ಸವ ಬಲಿ – ದರ್ಶನಬಲಿ – ದೈವ -ದೇವರ ಭೇಟಿ – ಗುಳಿಗದೈವದ ಕೋಲ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಕ್ಷೇತ್ರದಲ್ಲಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಚೈತನ್ಯ ಬ್ರಹ್ಮಕಲಶೋತ್ಸವ ಹಾಗೂ ಕರಿಚಾಮುಂಡಿ ದೈವದ ಪ್ರತಿಷ್ಠೆಯು ಮಾ.06ರಂದು ಬೆಳಿಗ್ಗೆ ನಡೆಯಿತು.ಮಾ.05ರಂದು ಬೆಳಿಗ್ಗೆ ತಿಲಹವನ, 12 ತೆಂಗಿನಕಾಯಿಗಳ ಗಣಪತಿ ಹವನ, ಭಾಗ್ಯಸೂಕ್ತ ಹವನ, ಪವಮಾನ ಹವನ, ಐಕ್ಯಮತ್ಯ ಹವನ, ನವಗ್ರಹ ಶಾಂತಿ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು.ರಾತ್ರಿ...

ಕುಲ್ಕುಂದ : ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ “ಶ್ರೀ ಮಹಾವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ” ಹಾಗೂ “ಶ್ರೀ ಕೊರತಿಯಮ್ಮ ದೈವದ 11ನೇ ವರ್ಷದ ನೇಮೋತ್ಸವ” ಸಂಪನ್ನ

ಇತಿಹಾಸ ಪ್ರಸಿದ್ಧ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.02 ರಿಂದ ಮಾ.04 ರವರೆಗೆ “ಶ್ರೀ ಮಹಾವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ” ಹಾಗೂ “ಶ್ರೀ ಕೊರತಿಯಮ್ಮ ದೈವದ 11ನೇ ವರ್ಷದ ನೇಮೋತ್ಸವ”ವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ಮಾ.02ರಂದು ಬೆಳಿಗ್ಗೆ ಗಣಪತಿ ಹೋಮ, ಸಂಜೆ ಕೊರತಿಯಮ್ಮ ದೈವದ ನಡಾವಳಿ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು.ಮಾ.03ರಂದು...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ಆಶ್ಲೇಷ ಬಲಿ ಹಾಗೂ ತುಲಾಭಾರ ಸೇವೆ

ಸುಬ್ರಹ್ಮಣ್ಯ : ಭಾರತ ಸರ್ಕಾರದ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ ದೇವೆಗೌಡರು ಸೋಮವಾರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಮತ್ತು ತುಲಾಭಾರ ಸೇವೆ ನೆರವೇರಿಸಿದರು. ಮುಂಜಾನೆ ಶ್ರೀ ದೇವಳಕ್ಕೆ ಆಗಮಿಸಿದ ಅವರು ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ದೇವರ ದರುಶನ ಮಾಡಿದರು. ನಂತರ ಹೊರಾಂಗಣದಲ್ಲಿ ಶ್ರೀ...

ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇಂದಿನಿಂದ(ಮಾ.02) ಮಾ.04ರವರೆಗೆ “ಶ್ರೀ ಮಹಾವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ” ಹಾಗೂ “ಶ್ರೀ ಕೊರತಿಯಮ್ಮ ದೈವದ 11ನೇ ವರ್ಷದ ನೇಮೋತ್ಸವ”

ಇತಿಹಾಸ ಪ್ರಸಿದ್ಧ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇಂದಿನಿಂದ(ಮಾ.02) ಮಾ.04 ರವರೆಗೆ “ಶ್ರೀ ಮಹಾವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ” ಹಾಗೂ “ಶ್ರೀ ಕೊರತಿಯಮ್ಮ ದೈವದ 11ನೇ ವರ್ಷದ ನೇಮೋತ್ಸವ”ವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಇಂದು(ಮಾ.02) ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಸಂಜೆ 7:30ರಿಂದ ಶ್ರೀ ಕೊರತಿಯಮ್ಮ ದೈವದ ನಡಾವಳಿ ನಡೆಯಲಿದ್ದು,...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು

ಭಾರತ ಸರಕಾರದ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೆಗೌಡರು ಮಾ.01 ರವಿವಾರದಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದರು. ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಸಂಜೆ 4:00 ಗಂಟೆಗೆ ಹೇಳಿಕಾಫ್ಟರ್ ಮೂಲಕ ಹೊರಟು 5.30ಕ್ಕೆ ಕಡಬ ತಾಲೂಕಿನ ಬಿಳಿನೆಲೆ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ ರಸ್ತೆಮೂಲಕ ಕಾರಿನಲ್ಲಿ ಬಿಗಿಭದ್ರತೆಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ವಿ.ವಿ.ಐ.ಪಿ ಅತಿಥಿಗೃಹಕ್ಕೆ ಬಂದರು. ಈ ಸಂಧರ್ಭದಲ್ಲಿ ಶ್ರೀ ದೇವಳದ...

ಮಾವಿನಕಟ್ಟೆ : ಒತ್ತೆಕೋಲ ಮಹೋತ್ಸವದ ಆಮಂತ್ರಣ ಬಿಡುಗಡೆ

ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.18 ಮತ್ರು 19 ರಂದು ನಡೆಯಲಿರುವ ಶ್ರೀ ದೈವದ ಒತ್ತೆಕೋಲ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಶ್ರೀ ಕಟೀಲ್ ಮಾವಿನಕಟ್ಟೆ, ಚಂದ್ರಶೇಖರ ಭಟ್ ತಳೂರು, ಕೃಷ್ಣಯ್ಯ ಮೂಲೆತೋಟ, ಕೋಶಾಧಿಕಾರಿ ಗೋಪಿನಾಥ್ ಮೆತ್ತಡ್ಕ, ವೆಂಕಟ್ರಮಣ ಮೆದು, ನಿತ್ಯಾನಂದ ಪಾರೆಪ್ಪಾಡಿ, ಲೋಕೇಶ್ ಪೂಜಾರಿ ತಳೂರು...

ಏಪ್ರಿಲ್ 10 ರಿಂದ 12ರ ತನಕ ಮೇದಿನಡ್ಕ ಮುತ್ತುಮಾರಿಯಮ್ಮ ದೇವಿಗೆ ಜಾತ್ರಾ ಸಂಭ್ರಮ

ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತುಮಾರಿಯಮ್ಮ ದೇವಿ ದೇವಸ್ಥಾನದ ವರ್ಷಾವಧಿ ಜಾತ್ರೆಯು ಏಪ್ರಿಲ್ 10 ರಿಂದ 12ರ ತನಕ ವಿವಿಧ ಧಾರ್ಮಿಕ ವೈದಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಫೆ.22 ರಂದು ದೇವಸ್ಥಾನದ ವಠಾರದಲ್ಲಿ ನಡೆದ ಭಕ್ತಾದಿಗಳ ಸಭೆಯಲ್ಲಿ ದಿನಾಂಕ ನಿಗದಿ ಪಡಿಸಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸ್ಥಳೀಯ ಭಕ್ತಾಧಿಗಳು...

ಕೊಲ್ಲಮೊಗ್ರು : ನಿಲ್ಕೂರು ಶ್ರೀ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಕೊಲ್ಲಮೊಗ್ರು ಗ್ರಾಮದ ನಿಲ್ಕೂರು ಶ್ರೀ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಫೆ.22ರಂದು ಭಕ್ತಿ ಸಡಗರದಿಂದ ನಡೆಯಿತು. ನಂತರ ಅನ್ನಸಂತರ್ಪಣೆ ನಡೆದು ಬಳಿಕ ಮಾರಿಕಳ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು.
Loading posts...

All posts loaded

No more posts

error: Content is protected !!