ಪಂಜ : ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಪಾರದರ್ಶಕತೆಯ ಕುರಿತು ಆ.15ರಂದು ಸಾರ್ವಜನಿಕ ಸಭೆ ನಡೆಸುವಂತೆ ಭಕ್ತರಿಂದ ಮನವಿ

ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ, ಆರ್ಥಿಕ ಪಾರದರ್ಶಕತೆ ಹಾಗೂ ಗುತ್ತಿಗೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಲು ಆಗಸ್ಟ್ 15ರಂದು ಸಾರ್ವಜನಿಕ ಸಭೆ ಕರೆಯುವಂತೆ ಆಗ್ರಹಿಸಿ ಭಕ್ತರು ಸೋಮವಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ಅವರಿಗೆ ಮನವಿ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯವೈಖರಿ, ಹಣಕಾಸಿನ...

ಕುಕ್ಕೆ ಸುಬ್ರಹ್ಮಣ್ಯ : ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೂ ಭಕ್ತಸಾಗರ

ಸುಬ್ರಹ್ಮಣ್ಯ ಆಗಸ್ಟ್ 02 : ದಕ್ಷಿಣ ಭಾರತದ ಹೆಸರಾಂತ ಹಾಗೂ ಪವಿತ್ರ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಇಂದು ರವಿವಾರ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರಿಗೆ ಸೇವೆ ಸಲ್ಲಿಸಿದ್ದಾರೆ. ಭಕ್ತರಿಗೆ ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನಕ್ಕಾಗಿ ಸ್ನಾನ...
Ad Widget

ಸುಳ್ಯ: ಅರಂತೋಡಿನಲ್ಲಿ ಆ. 4ರಂದು ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್‌ನ ಸಂಯುಕ್ತ ಖಾಝಿ ಅಧಿಕಾರ ಸ್ವೀಕಾರ ಸಮಾರಂಭ

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ (ರಿ.) ಅಧೀನದಲ್ಲಿರುವ ಸುಮಾರು 14 ಜಮಾಅತ್‌ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಅಧ್ಯಕ್ಷ ಬಹು. ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಘಳ್ ಅವರನ್ನು ನೇಮಕ ಮಾಡಲಾಗಿದ್ದು, ಅವರ ಖಾಝಿ ಅಧಿಕಾರ ಸ್ವೀಕಾರ ಸಮಾರಂಭವು ಆ. 4ರಂದು ಅರಂತೋಡು ತೆಕ್ಕಿಲ್ ಎನ್.ಪಿ.ಎಂ. ಝೈನುಲ್ ಅಬಿದೀನ್ ತಂಘಳ್ ದುಗ್ಗಲಡ್ಕದಲ್ಲಿ...

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಮರದ ಕೆತ್ತನೆಯ ಬಾಳೆಗೊನೆ ಕೊಡುಗೆ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ದೇವಚಳ್ಳ ಗ್ರಾಮದ ಧರ್ಮಪಾಲ ಕರಂಗಲಡ್ಕ ಅವರು ಮರದ ಕೆತ್ತನೆಯ ಮೂಲಕ ರಚಿಸಿದ ಬಾಳೆಗೊನೆಯನ್ನು ಆ.01 ರಂದು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ಹಾಗೂ ಸದಸ್ಯರಾದ ಬೆಳ್ಯಪ್ಪ ಗೌಡ ಖಂಡಿಗೆ ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

ಆ 4-ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್  ಸಂಯುಕ್ತ ಖಾಝಿ ಅಸ್ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಲ್ ಖಾಝಿ ಸ್ವೀಕಾರ ಕಾರ್ಯಕ್ರಮ

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಸಂಯುಕ್ತ  ಖಾಝಿಯಾಗಿ ಸ್ವೀಕರಿಸಲಾಗಿರುವ ಬಹು-ಸಯ್ಯಿದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಲ್ ರವರ ಖಾಝಿ ಸ್ವೀಕಾರ  ಕಾರ್ಯಕ್ರಮವು ಆ. 4ರಂದು ಸಂಜೆ 4 ಘಂಟೆಗೆ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ಅಧ್ಯಕ್ಷತೆ...

ಪಂಜ : ಗಣೇಶೋತ್ಸವ ಸಮಿತಿ ರಚನೆ ; ಅಧ್ಯಕ್ಷರಾಗಿ ತೀರ್ಥಾನಂದ ಕೊಡೆಂಕಿರಿ – ಕಾರ್ಯದರ್ಶಿ : ಹೇಮಂತ್ ರೈ.ಕೆ – ಖಜಾಂಜಿ : ಪುನೀತ್ ಮೂಲೆಮನೆ

ಆರಾಧನಾ ಸಮಿತಿ ಪಂಜ, ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ. 14,15 ಹಾಗೂ 16ರಂದು ವಿಜೃಂಭಣೆಯಿಂದ ಜರುಗಲಿದ್ದು, ಇದರ ಸಮಿತಿ ರಚನೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ತೀರ್ಥಾನಂದ ಕೊಡೆಂಕಿರಿ, ನೂತನ ಕಾರ್ಯದರ್ಶಿಯಾಗಿ ಹೇಮಂತ್ ರೈ.ಕೆ, ಖಜಾಂಜಿಯಾಗಿ ಪುನೀತ್ ಮೂಲೆಮನೆ, ಜೊತೆಕಾರ್ಯದರ್ಶಿಯಾಗಿ ಲೋಕನಾಥ...

ಸುಬ್ರಹ್ಮಣ್ಯ ಸ್ವಾಮೀಜಿಯವರಿಂದ ತಪ್ತ ಮುದ್ರಾ ಧಾರಣೆ

ಸುಬ್ರಹ್ಮಣ್ಯ ಜುಲೈ 26 : ಶನಿವಾರ ಶಯನಿ ಏಕಾದಶಿ ಪ್ರಯುಕ್ತ ಪ್ರತೀವರ್ಷದಂತೆ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ಡಾ. ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ತಪ್ತ ಮುದ್ರಾಧಾರಣೆ ಜನಾರ್ದನ ದೇವಸ್ಥಾನ ಉಜಿರೆ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನ ಕೆಮ್ಮಿಂಜೆ, ಉಮಾಮಹೇಶ್ವರ ದೇವಸ್ಥಾನ ಮಜಲುಮಾರು ದೇವಸ್ಥಾನ, ಶ್ರೀಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ ಹಾಗೂ ರಾಯರ ಮಠ ಸುಳ್ಯ...

ಮಳೆಯಲ್ಲೂ ಅಧಿಕ ಸಂಖ್ಯೆಯಲ್ಲಿ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು

ಸುಬ್ರಹ್ಮಣ್ಯ ಜುಲೈ 26 : ದಕ್ಷಿಣ ಭಾರತದ ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ಜಿನಿಗುಟ್ಟುತ್ತಿರುವ ಮಳೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾದಿಗಳು ಆಗಮಿಸಿರುತ್ತಾರೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿಲ್ಲ. ಅತ್ಯಧಿಕ ಸಂಖ್ಯೆಯ ಭಕ್ತಾದಿಗಳು ಪ್ರಮುಖ ಸೇವೆಗಳಾದ ಸರ್ಪ ಸಂಸ್ಕಾರ,...

ಶುದ್ಧ ಷಷ್ಟಿ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಜನ ದಟ್ಟಣೆ

ಸುಬ್ರಹ್ಮಣ್ಯ ಜುಲೈ 19 : ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನೆಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಬರುವ ಶುದ್ಧ ಷಷ್ಟಿ ಈ ದಿನ ರವಿವಾರದೊಂದಿಗೆ ಬಂದುದರಿಂದ ಅತ್ಯಧಿಕ ಭಕ್ತ ಜನರು ಕುಕ್ಕೆಗೆ ಆಗಮಿಸಿ ಶ್ರೀ ದೇವರ ದರ್ಶನ ಪ್ರಸಾದ ಸ್ವೀಕರಿಸಿದರು. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಇಂದು ಕೂಡ ಇದ್ದು...

ಕುಕ್ಕೆ ಸುಬ್ರಹ್ಮಣ್ಯ : ಆಶ್ಲೇಷ ನಕ್ಷತ್ರ ಹಿನ್ನೆಲೆ ಭಕ್ತರ ಸಾಲು

ಸುಬ್ರಹ್ಮಣ್ಯ ಜುಲೈ 16 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಬರುವ ಆಶ್ಲೇಷ ನಕ್ಷತ್ರದಂದು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಬಂದು ಆಶ್ಲೇಷ ಬಲಿ ಸೇವೆ ಸಲ್ಲಿಸುವುದಾಗಿದೆ. ಅದೇ ರೀತಿ ಈ ಬಾರಿ ಮಳೆಗಾಲವಾದರೂ ಮಳೆ ಇಲ್ಲದ ಕಾರಣ ಹೆಚ್ಚಿನ ಭಕ್ತರು ಆಶ್ಲೇಷ ಸೇವೆಗೆಂದೆ ಬಂದು ನಿನ್ನೆ ಬುಧವಾರದಂದು ಕುಕ್ಕೆ ಕ್ಷೇತ್ರದ ದೇವಳದ ವಸತಿ...
Loading posts...

All posts loaded

No more posts

error: Content is protected !!