ಕರ್ನಾಟಕ ರಾಜ್ಯ ಅಂಡರ್-೧೬ ಕ್ರಿಕೆಟ್ ತಂಡಕ್ಕೆ ಬೆಳ್ಳಾರೆಯ ಅವನೀಶ ಶಾಮ್ ಆಯ್ಕೆ – ಮಂಗಳೂರು ವಲಯದಿಂದ ರಾಜ್ಯ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ

ಬೆಳ್ಳಾರೆ: ಕರ್ನಾಟಕ ರಾಜ್ಯ ಅಂಡರ್ 16 ಕ್ರಿಕೆಟ್ ತಂಡಕ್ಕೆ ಬೆಳ್ಳಾರೆಯ ಯುವ ಕ್ರಿಕೆಟ್ ಪ್ರತಿಭೆ ಅವನೀಶ ಶಾಮ್ ಆಯ್ಕೆಯಾಗಿದ್ದು, ಈ ಮೂಲಕ ತಮ್ಮ ಊರು ಹಾಗೂ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಮಂಗಳೂರು ವಲಯದಿಂದ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಅವನೀಶ್ ಶ್ಯಾಮ್ ಪಾತ್ರರಾಗಿದ್ದಾರೆ. ಸತತ ಪರಿಶ್ರಮ, ಕಠಿಣ ಅಭ್ಯಾಸ ಹಾಗೂ...

ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಮೃತಾ ಸಿ – ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕುಮಾರಸ್ವಾಮಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರ ಸಾಧನೆ

ಸುಬ್ರಹ್ಮಣ್ಯ: ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಉತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನವನ್ನು ಗಳಿಸಿದೆ. ತಂಡದ ಸದಸ್ಯರಾದ ಅಮೃತಾ ಸಿ., ತನ್ವಿ, ನಂದಿತಾ ಕೆ.ವಿ. ಹಾಗೂ ಸಮೀಕ್ಷಾ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ....
Ad Widget

ಶ್ರೀಮತಿ ವನಿತಾ ಸಚಿತ್ ಕಲ್ಮಡ್ಕ ಕಬಡ್ಡಿ ರಾಷ್ಟ್ರೀಯ ತೀರ್ಪುಗಾರರಾಗಿ ಆಯ್ಕೆ

ಅಮೆಚೂರ್ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಇದರ ವತಿಯಿಂದ ನಡೆದ ತೀರ್ಪುಗಾರರ ಪರೀಕ್ಷೆಯಲ್ಲಿ ಶ್ರೀಮತಿ ವನಿತಾ ಸಚಿತ್ ಕಲ್ಮಡ್ಕ ಇವರು ತೇರ್ಗಡೆಗೊಂಡು ಕಬಡ್ಡಿ ರಾಷ್ಟ್ರೀಯ ತೀರ್ಪುಗಾರರಾಗಿ ಆಯ್ಕೆ ಆಗಿದ್ದಾರೆ. ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ನೆಲೆಸಿರುವ ಇವರು ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಎಂ ಎಚ್ ಆರ್ ಡಿ ಸ್ನಾತಕೋತ್ತರ ಪದವಿ ಮತ್ತು ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಬಿಪಿಏಡ್ ಪದವಿಯನ್ನು...

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಪ್ರಸ್ತುತ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವು ಅ.31 ಶನಿವಾರದಂದು ನಡೆಯಿತು. ಕ್ರೀಡಾಕೂಟದ ಧ್ವಜಾರೋಹಣವನ್ನು ಶ್ರೀಮತಿ ಪ್ರವೀಣ ರೈ ಮರ್ವಂಜ ಸದಸ್ಯರು ಆಡಳಿತ ಮಂಡಳಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ ನೆರವೇರಿಸಿದರು. ಕ್ರೀಡಾಕೂಟದ ಜ್ಯೋತಿಯನ್ನು ಕುಮಾರಿ ಭಾನವಿ ರಾಷ್ಟ್ರಮಟ್ಟದ ಕ್ರೀಡಾಪಟು ಬೆಳಗಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಪೂರ್ತಿದಾಯಕವಾದ ಮಾತುಗಳಾಡಿದರು. ಹಾಗೂ ಅವರ...

ಜ್ಯೋತಿ ಪ್ರೌಢಶಾಲೆ ಪೆರಾಜೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಅ.27 ರಂದು ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ 14 ಮತ್ತು 17 ವರ್ಷ ವಯೋಮಾನದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಜ್ಯೋತಿ ಪ್ರೌಶಾಲೆ ಪೆರಾಜೆಯ ಆರು ವಿದ್ಯಾರ್ಥಿಗಳು ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.14 ವರ್ಷ ವಯೋಮಾನದ ಕ್ರೀಡಾಕೂಟದಲ್ಲಿ 8ನೇ ತರಗತಿಯ ಮುಕೇಶ್ 4X100 ಮೀಟರ್ ರಿಲೇ ಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 17ವರ್ಷ ವಯೋಮಾನದ ಕ್ರೀಡಾ...

ಅಥ್ಲೆಟಿಕ್ಸ್‌ನಲ್ಲಿ ಸಾಧನೆ : ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಕುಮಾರಸ್ವಾಮಿ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳ ಆಯ್ಕೆ

ಸುಬ್ರಹ್ಮಣ್ಯ : ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯದ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ನಂದಿತಾ ಕೆ.ವಿ. ಅವರು ಚಕ್ರ ಎಸೆತ (Discus Throw),...

ಕುಕ್ಕೆಯಲ್ಲಿ ಜಿಲ್ಲಾಮಟ್ಟದ ನೆಟ್ ಬಾಲ್ ಪಂದ್ಯಾಟ ಉದ್ಘಾಟನೆ ; “ಕ್ರೀಡಾ ಚಟುವಟಿಕೆಗಳು ಉತ್ತಮ ಭವಿಷ್ಯಕ್ಕೆ ದಾರಿದೀಪ” : ಹರೀಶ್.ಎಸ್.ಇಂಜಾಡಿ ಅಭಿಮತ

ಸುಬ್ರಹ್ಮಣ್ಯ: “ಚಟುವಟಿಕೆಗಳು ಬದುಕನ್ನು ಅಭಿವೃದ್ಧಿಗೊಳಿಸಲು ಸಹಕಾರಿಯಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಳುಗಳಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಸರಕಾರವು ನೀಡುವ ಮೂಲಕ ಪ್ರೋತ್ಸಾಹ ಮಾಡುತ್ತಿದೆ. ಅನೇಕ ಕ್ರೀಡಾಳುಗಳಿಗೆ ಕ್ರೀಡೆಯ ಮೂಲಕ ಸರಕಾರಿ ಉದ್ಯೋಗ ದೊರಕಿರುವುದನ್ನು ನಾವು ಕಾಣುತ್ತೇವೆ. ಆದುದರಿಂದ ಕ್ರೀಡೆಯು ಜೀವನದ ಪ್ರಗತಿಗೆ ಕೂಡಾ ಮೈಲುಗಲ್ಲಾಗಿದೆ. ಕ್ರೀಡೆಗಳಿಗೆ ಮತ್ತು ಕ್ರೀಡಾಳುಗಳುಗಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು. ಅದಕ್ಕೆ ಆವಶ್ಯಕವಾದ...

ನೆಟ್ಟಾರು ಶಾಲೆಯಲ್ಲಿ ಅ. 25ರಂದು ಸ್ನೇಹ ಸಂಗಮ ಕ್ರೀಡಾ ಸಂಭ್ರಮ

ನೆಟ್ಟಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಟ್ಟಾರು ಇದರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಕ್ಟೋಬರ್ 25ರ ಭಾನುವಾರ ಶಾಲಾ ವಠಾರದಲ್ಲಿ ಸ್ನೇಹ ಸಂಗಮ ಕ್ರೀಡಾ ಸಂಭ್ರಮ–2026 ಆಯೋಜಿಸಲಾಗಿದೆ.ಹಳೆ ವಿದ್ಯಾರ್ಥಿಗಳ ಸ್ನೇಹ-ಸೌಹಾರ್ದವನ್ನು ಗಟ್ಟಿಗೊಳಿಸುವುದು, ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದು ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕಾರ ಒಗ್ಗೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಕ್ರಿಕೆಟ್, ವಾಲಿಬಾಲ್,...

ಎನ್ನೆಂಸಿ : ವಾರ್ಷಿಕ ಕ್ರೀಡೋತ್ಸವ 2026 ; ಸುವರ್ಣ ಸಂಭ್ರಮದ ವರ್ಷಕ್ಕೆ ವಿಶೇಷ ಮೆರುಗು

ಸುಳ್ಯ ಅ.13: ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಅಕ್ಟೋಬರ್ 13 ಮಂಗಳವಾರದಂದು ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಎನ್.ಎಂ.ಸಿ.ಯ ಹಿರಿಯ ವಿದ್ಯಾರ್ಥಿ ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ ಉದ್ಘಾಟಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಕ್ರೀಡೋತ್ಸವಕ್ಕೆ ಶುಭಹಾರೈಸಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಸಂಭ್ರಮ...

ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಅ.1ರಂದು ಸವಣೂರಿನಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ತಾಲೂಕು ಮಟ್ಟಕ್ಕೆ ಅರ್ಹತೆ ಗಳಿಸಿದ್ದಾರೆ. ಮಹಮ್ಮದ್ ಸಾಬಿತ್ 10ನೇ ತರಗತಿ ವಿದ್ಯಾರ್ಥಿ ಗುಂಡೆಸೆತದಲ್ಲಿ ಪ್ರಥಮ ಸ್ಥಾನ, ಹೃತೇಶ್ ಬಿ.ಎಸ್ ಹತ್ತನೇ ತರಗತಿ ಉದ್ದ ಜಿಗಿತ ದ್ವಿತೀಯ ಸ್ಥಾನ ಮತ್ತು ಆಯುಷ್ ಪಿ. ಗೌಡ 8ನೇ ತರಗತಿ ಇವರು 400...
Loading posts...

All posts loaded

No more posts

error: Content is protected !!