- Sunday
- August 16th, 2026
ಸುಳ್ಯ: ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಜಿ.ಪಂ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು . ಸಭೆಯ ಪ್ರಾರಂಭದಲ್ಲಿಯೇ ಅಧಿಕಾರಿಗಳು ಕಾಮಗಾರಿಗಳ ಪ್ರಗತಿಗಳ ಬಗ್ಗೆ ವಿವರಣೆ ಪಡೆದಾಗ ಅಧಿಕಾರಿಗಳು ಅಸಮರ್ಪಕ ಉತ್ತರ ನೀಡಿದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಅನುದಾನ ಉಳಿಕೆ ಮತ್ತು ಶೇಕಾಡವಾರು ಕಡಿಮೆ ಇರುವುದನ್ನು ಗಮನಿಸಿ ಗರಂ ಆದ ಜಿ.ಪಂ ಉಪಕಾರ್ಯದರ್ಶಿ...
2025ನೇ ಇಸವಿಯ ರಸ್ತೆ ಸುರಕ್ಷಾ ಮಾಸಿಕ ಆಚರಣೆಯ ಘೋಷ ವಾಕ್ಯ “ಸಡಕ್ ಸುರಕ್ಷಾ- ಜೀವನ್ ರಕ್ಷಾ” ಆಗಿರುತ್ತದೆ. ಇದರ ಆಶಯ “ರಸ್ತೆ ಸುರಕ್ಷಾ” ನಿಯಮಗಳನ್ನು ಪಾಲಿಸಿ, ಜೀವವನ್ನು ರಕ್ಷಿಸಿಕೊಳ್ಳಿ ಎಂಬುದಾಗಿದೆ. ಏನಿದು ರಸ್ತೆ ಸುರಕ್ಷಾ ನಿಯಮಗಳು? ರಸ್ತೆ ಸುರಕ್ಷಾ ನಿಯಮಗಳನ್ನು ವಾಹನ ಚಾಲಕರು ಮತ್ತು ಪಾದಾಚಾರಿಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ. ರಸ್ತೆ ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ...
ಸುಳ್ಯ: ಅಜ್ಜಾವರ ಗ್ರಾಮದ ಶಾಂತಿಮಜಲು ಎಂಬಲ್ಲಿನ ಅಡ್ಪಂಗಾಯ ಶಾಲೆಯ 7ನೇ ತರಗತಿ ವಿಧ್ಯಾರ್ಥಿಅನ್ವಿತ್ ಜ .22 ಮಧ್ಯಾಹ್ನ ನಂತರ ಕಾಣೆಯಾಗಿರುತ್ತಾನೆ ಎಂದು ತಿಳಿದುಬಂದಿದ್ದು ಮೇಲೆ ಕಾಣಿಸಿದ ಬಾಲಕನನ್ನು ಎಲ್ಲಿಯಾದರೂ ಕಂಡುಬಂದಲ್ಲಿ 7259338289 ,7483136835 ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ವಿನಂತಿಸಲಾಗಿದೆ.
ಹರಿಹರ ಪಳ್ಳತ್ತಡ್ಕ ಗ್ರಾಮದ ಕುಕ್ಕುಂದ್ರಡ್ಕ ನಿವಾಸಿ ಕೃಷ್ಣ ಗೌಡ ವಾಡ್ಯಪ್ಪನ ಮನೆ ರವರು ಇಂದು(ಜ.22) ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ 75 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಹೊನ್ನಮ್ಮ, ಪುತ್ರ ನವೀನ್, ಪುತ್ರಿಯರಾದ ಯಶೋಮತಿ, ಧನ್ಯ ಹಾಗೂ ಅಳಿಯಂದಿರು, ಸೊಸೆ, ಮೊಮ್ಮಕ್ಕಳು, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಸುಳ್ಯ: ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರು ನೇಮಕಗೊಂಡ ಮೂಲ ಹುದ್ದೆಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಆದೇಶ ನೀಡಲಾಗಿದೆ . ಆದೇಶದಲ್ಲೇನಿದೆ ಗೊತ್ತಾ. ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರು ನೇಮಕಗೊಂಡ ಮೂಲ ಹುದ್ದೆಯಲ್ಲಿಯೇ ಕರ್ತವ್ಯಕ್ಕೆ ನಿಯೋಜಿಸುವಂತೆ ಸರ್ಕಾರದಿಂದ ಈಗಾಗಲೇ ಹಲವಾರು ಬಾರಿ ನಿರ್ದೇಶನ ,ಸೂಚನೆಗಳನ್ನು ನೀಡಲಾಗಿದ್ದರೂ ಸಹ ಗ್ರಾಮ ಆಡಳಿತ ಅಧಿಕಾರಿಗಳು ಮೂಲ ಹುದ್ದೆಯಲ್ಲಿ ಕರ್ತವ್ಯ...
ಸುಳ್ಯ ಜ್ಯೋತಿ ಸರ್ಕಲ್ ಬಳಿ ಇರುವ ಸ. ಮಾ. ಹಿ. ಪ್ರಾ. ಶಾಲೆ ಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿದೂಷಿ ಶ್ಯಾಮಲ ಕೇಶವ್ ಸುಳ್ಯ ಇವರು ಸಂಗೀತ ತರಗತಿ ನಡೆಸಲಿದ್ದು ಇದರ ಉದ್ಘಾಟನಾ ಸಮಾರಂಭ 21.01.24 ರಂದು ನಡೆಯಿತು. ವೇದಿಕೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ, ಸಂಗೀತ ಶಿಕ್ಷಕಿ ಶ್ರೀಮತಿ ಶ್ಯಾಮಲಾ ಕೇಶವ್, ಮುಖ್ಯ ಶಿಕ್ಷಕಿ...
ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದ ವಿಶೇಷ ಚಾಪನ್ನು ಮೂಡಿಸಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್‌ನ ಎಂ.ಬಿ. ಸದಾಶಿವ ಸಹಯೋಗದಲ್ಲಿ 'ಅರೆಭಾಷೆ ಕಾಮಿಡಿ' ರಿಯಾಲಿಟಿ ಶೋ ನಡೆಯಲಿದ್ದು ರಿಯಾಲಿಟಿ ಶೋಗೆ ತಂಡಗಳ ಆಯ್ಕೆಗೆ ಫೆ.16ರಂದು ಸುಳ್ಯದ ಲಯನ್ಸ್ ಸಭಾಭವನದಲ್ಲಿ ಆಡಿಷನ್ ನಡೆಯಲಿದೆ...
ಕಳೆದೊಂದು ವಾರದಿಂದ ಬೆಳ್ಳಾರೆ - ನಿಂತಿಕಲ್ಲು ರಸ್ತೆಯ ಬೆಳ್ಳಾರೆ ಅಜಪಿಲ ದೇವಸ್ಥಾನದ ಬಳಿ ರಸ್ತೆ ಮಧ್ಯೆ ಜೆಸಿಬಿಯೊಂದು ನಿಂತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಅನಾಹುತ ಸಂಭವಿಸುವ ಮೊದಲು ತೆರವು ಮಾಡಲು ಸಂಬಂಧಪಟ್ಟವರು ಗಮನಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗುತ್ತಿಗಾರು ಪೇಟೆಯಲ್ಲಿ ಸರಣಿ ಕಳ್ಳತನಗಳನ್ನು ಮಾಡಿದ ವ್ಯಕ್ತಿಯನ್ನು ಸುಬ್ರಹ್ಮಣ್ಯ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.ಕೊಲ್ಲಮೊಗ್ರು ಗ್ರಾಮದ ನಿವಾಸಿ ಕರುಣಾಕರ ಈ ಸರಣಿ ಕೃತ್ಯಗಳನ್ನು ನಡೆಸಿದ್ದ ಎಂದು ತಿಳಿದುಬಂದಿದ್ದು, ಪೋಲೀಸರು ಮಹಜರು ಕಾರ್ಯ ಪ್ರಾರಂಭಿಸಿದ್ದಾರೆ.ಸಿಸಿಟಿವಿ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ಅವಭೃತ ಸ್ನಾನದ ಮೆರವಣಿಗೆಯ ಸಂದರ್ಭದಲ್ಲಿ ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮದರ್ಜೆ ಕಾಲೇಜಿನ ಬಳಿ ಶ್ರೀ ದೇವರಿಗೆ ಪೂಜೆ ಸಲ್ಲಿಸಲಾಯಿತು. ಹಾಗೂ ಭಕ್ತಾದಿಗಳಿಗೆ ತಂಪುಪಾನೀಯ ವ್ಯವಸ್ಥೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಬಾಲಸುಬ್ರಮಣ್ಯ ಪಿ ಎಸ್ ಹಾಗೂ ಉಪನ್ಯಾಸಕರಾದ ಯಶೋದ ಹಾಗೂ ಪೊನ್ನಪ್ಪ ಹಾಗೂ ಕಚೇರಿ ಸಿಬ್ಬಂದಿಗಳಾದ ಗೀತಾ ಮತ್ತು ಮೋಹನದಾಸ್ಹಾಗೂ...
Loading posts...
All posts loaded
No more posts
