ನಾಳೆ (ಫೆ.04) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

33 ಕಾವು - ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.04ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್ ಗಳಲ್ಲಿ...

ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ವತಿಯಿಂದ ಕುಕ್ಕುಜಡ್ಕದಲ್ಲಿ ಬ್ರಹತ್ ರಕ್ತದಾನ ಶಿಬಿರ

ಅಮರ ಸಂಘಟನಾ ಸಮಿತಿ (ರಿ.)ಸುಳ್ಯ ಇದರ ವತಿಯಿಂದ ದಿವಂಗತ ಮುರಾರಿ ಕಡಪಳ ಮತ್ತು ದಿವಂಗತ ನವೀನ್ ಸಂಕೇಶ ಸ್ಮರಣಾರ್ಥ 2ನೇ ವರುಷದ ಬ್ರಹತ್ ರಕ್ತದಾನ ಶಿಬಿರ ಫೆಬ್ರವರಿ 02ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕದಲ್ಲಿ ನಡೆಯಿತು.ಅಮರ ಸಂಘಟನಾ ಸಮಿತಿ (ರಿ.)ಸುಳ್ಯ ಇದರ ಅಧ್ಯಕ್ಷರಾದ ಕುಸುಮಾಧರ ಮುಕ್ಕೂರು ಇವರು ಅಧ್ಯಕ್ಷತೆ ವಹಿಸಿದ್ದರು. ಮಿತ್ರವ್ರಂದ ಪೈಲಾರು ಇದರ...
Ad Widget

ಐವರ್ನಾಡು : ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ ಪ್ರಯುಕ್ತ ಗೊನೆ ಮುಹೂರ್ತ

ಐವರ್ನಾಡಿನ ಹಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿ ಪಂಚಲಿಂಗಗಳಿಂದ ಪ್ರತಿಷ್ಟಾಪನೆಗೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಫೆ. 8, 9, 10 ರಂದು ನಡೆಯುವ ಪ್ರತಿಷ್ಟಾ ವಾರ್ಷಿಕೋತ್ಸವ ಪ್ರಯುಕ್ತ ಫೆ.2 ರಂದು ಬೆಳಿಗ್ಗೆ ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿಯ ಬಳಿಕ ಅರ್ಚಕರಾದ ರಾಮಚಂದ್ರ ಪಿ.ಜಿ. ಯವರಿಂದ ಗೊನೆ ಕಡಿಯುವ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ...

ಹರಿಹರ ಪಳ್ಳತ್ತಡ್ಕ : ಸ.ಹಿ.ಪ್ರಾ ಶಾಲೆಯಲ್ಲಿ ಕ್ರೀಡೋತ್ಸವ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಳ್ಳತ್ತಡ್ಕ ಇಲ್ಲಿ ಫೆ.01 ರಂದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕ್ರೀಡೋತ್ಸವ ನಡೆಯಿತು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಕಲ್ಕುದಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಕ್ರೀಡೋತ್ಸವವು ಪ್ರಾರಂಭಗೊಂಡು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.ನಂತರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು....

ದೆಹಲಿ ವಿಧಾನಸಭಾ ಚುನಾವಣೆ – ಪ್ರಚಾರಕಾರ್ಯದಲ್ಲಿ ಭಾಗಿಯಾದ ದ.ಕ.ಸಂಸದ ಬ್ರಿಜೇಶ್ ಚೌಟ

ಫೆ.05 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗಿಯಾದರು. ಕಸ್ತೂರ್ಬಾ ನಗರದ ಬಿಜೆಪಿ ಅಭ್ಯರ್ಥಿ ನೀರಜ್ ಬಸೋಯಾ ಅವರ ಪರವಾಗಿ ದೆಹಲಿಯ ಸತ್ಯ ಜೀವನ ಲೆಪ್ರಸಿ ಸೊಸೈಟಿಯಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು.‌

ಸುಬ್ರಹ್ಮಣ್ಯ : ರೋವರ‍್ ಮತ್ತು ರೇಂಜರ‍್ ಬೀಳ್ಕೊಡುಗೆ ಸಮಾರಂಭ ; ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನತ್ಯ – ಪ್ರಾಚಾರ್ಯ ಸೋಮಶೇಖರ್ ನಾಯಕ್ ಅಭಿಮತ

ಸುಬ್ರಹ್ಮಣ್ಯ: ಸಮಾಜಮುಖಿಯಾದ ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನತ್ಯ ಉಂಟಾಗುತ್ತದೆ.ಯುವ ಮನಸುಗಳು ಸದಾ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಾಗಿ ಸಹಕಾರ ಮಾಡುವ ಅಧಮ್ಯ ಮನಸ್ಥಿತಿಯನ್ನು ಹೊಂದಬೇಕಾದುದು ಅತ್ಯಗತ್ಯ.ವ್ಯಾಸಂಗದ ಅವಧಿಯಲ್ಲಿ ಬದುಕಿನ ಪಾಠವನ್ನು ಕಲಿಯಲು ರೋವರ್ ರೇಂಜರ್‌ನಂತಹ ಸಂಸ್ಥೆಗಳು ಪೂರಕ ವಾತಾವರಣ ಕಲಿಸುತ್ತದೆ.ವಿದ್ಯಾಸಂಸ್ಥೆಯಲ್ಲಿ ರೋವರ್ ರೇಂಜರ್ ಘಟಕದ ವಿದ್ಯಾರ್ಥಿಗಳು ನೆರವೇರಿಸಿದ ಅಪ್ರತಿಮ ಸೇವೆಯು ಸದಾ...

ಸುಳ್ಯ : ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸುಳ್ಯ ಗಾಂಧಿನಗರದಲ್ಲಿರುವ ಅರಣ್ಯ ಇಲಾಖೆ ಕ್ವಾಟ್ರಸ್ ಹಿಂಭಾಗ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಮೃತ ದೇಹ ಇದೀಗ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಬಂದಿದ್ದು ತನಿಖೆ ಆರಂಭಿಸಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಈಶ್ವರಮಂಗಲ ಮೂಲದ ವ್ಯಕ್ತಿಯ ಶವ ಎಂದು ಹೇಳಲಾಗುತ್ತಿದೆ. (ಚಿತ್ರ : ಅಚ್ಚು ಪ್ರಗತಿ)

ಸ್ನೇಹಶ್ರೀ ಮಹಿಳಾ ಮಂಡಲದ ವತಿಯಿಂದ ವಿಕಲಚೇತನ ಹೆಣ್ಣು ಮಗುವಿನ ಮನೆಯಲ್ಲಿ ಕಾರ್ಯಕ್ರಮ

ಜನವರಿ 29 ರಂದು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆಯ ವತಿಯಿಂದ ದಶ ಸಂಭ್ರಮದ ಕಾರ್ಯಕ್ರಮದ ಅಂಗವಾಗಿ ವಾತ್ಸಲ್ಯ ಕಾರ್ಯಕ್ರಮದ ಪ್ರಯುಕ್ತ ಬೆಳ್ಳಾರೆ ಗ್ರಾಮದ ದರ್ಕಾಸ್ತು ಬಡ ಮಹಿಳೆ ಲಲಿತಾ ರೈಯವರ ವಿಕಲಚೇತನ ಮಗಳಾದ ಶೈಲಿ ರೈ ಇವರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಪೂರ್ಣಿಮಾ ಪಡ್ಪು, ಕಾರ್ಯದರ್ಶಿ ಶೋಭಾ ಕುರುಂಬುಡೇಲು,...

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಇಂದು (ಫೆ.01ರಂದು) ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಭಗವದ್ಭಕ್ತರು ಉಪಸ್ಥಿತರಿದ್ದರು.

ವಳಲಂಬೆ ಜಾತ್ರೋತ್ಸವ – ಹಸಿರುವಾಣಿ ಸಮರ್ಪಣೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವದ ಅಂಗವಾಗಿ ಕ್ಷೇತ್ರದ ಭಕ್ತಾಧಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಿತು. ಫೆ.01 ರಂದು ಬೆಳಿಗ್ಗೆ ಗಂಟೆ 8-00ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಗಂಟೆ 12-00ಕ್ಕೆ ನವ ಕಲಾಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಸಂಜೆ 6 ರಿಂದ 7 ರವರೆಗೆ ದೈವಗಳ ಭಂಡಾರ ತೆಗೆಯುವುದು ಮತ್ತು...
Loading posts...

All posts loaded

No more posts

error: Content is protected !!