ಶ್ರೀಮಂತ ದೇವಸ್ಥಾನಗಳಿಂದ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ – ಕುಕ್ಕೆಯಲ್ಲಿ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ

(ವರದಿ : ರತ್ನಾಕರ ಸುಬ್ರಹ್ಮಣ್ಯ ) ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ನಡೆಸಲು ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಎ, ಬಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ಆಯಾ ದೇವಸ್ಥಾನಗಳಲ್ಲಿ ಅನುದಾನ ಲಭ್ಯವಿರುತ್ತದೆ....

ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸಹಕಾರಿ ಸಂಘದ ಸಿಬ್ಬಂದಿ ಸೀತಾರಾಮ ಯು. ನಿವೃತ್ತಿ – ಬೀಳ್ಕೊಡುಗೆ ಸಮಾರಂಭ

ಅರoತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘದಲ್ಲಿ ಸುಮಾರು 26 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸೀತಾರಾಮ ಉಳುವಾರು-ಶುಂಠಿಯಡ್ಕರವರು ಜೂನ್ 30ರಂದು ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದು, ಅವರ ಬೀಳ್ಕೊಡುಗೆ ಸಮಾರಂಭ ಇಂದು ಸಂಘದ ಸಿರಿಸೌಧ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರು, ಸಮೃಧಿ ಮಾರ್ಟ್ನ ಅಧ್ಯಕ್ಷರಾದ ದಯಾನಂದ ಕುರುಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ...
Ad Widget

ಅರಂತೋಡು: ವಿದ್ಯಾರ್ಥಿ ಸರಕಾರದ ಪದಗ್ರಹಣ ಕಾರ್ಯಕ್ರಮ

'ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ನಾಯಕರಾಗಬೇಕು'ಸಂತೋಷ್ ಕುತ್ತಮೊಟ್ಟೆ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿ ನೆಡೆದ 2025-26ನೇ ಸಾಲಿನ ನೂತನ ವಿದ್ಯಾರ್ಥಿ ಸರಕಾರದ ಪದಗ್ರಹಣ ಕಾರ್ಯಕ್ರಮವನ್ನು ಕಾಲೇಜಿನ ಸಂಚಾಲಕರಾದ ಕೆ ಆರ್ ಗಂಗಾಧರ ದೀಪಪ್ರಜ್ವಲನ ಮಾಡುವುದರ ಮೂಲಕ ಉದ್ಘಾಟಿಸಿದರು ಮತ್ತು ವಿದ್ಯಾರ್ಥಿ ಸರಕಾರದ ಸಚಿವರುಗಳಿಗೆ ಪ್ರಮಾಣ ವಚನ ಬೋಧಿಸಿದರುಅಧ್ಯಕ್ಷತೆಯನ್ನು ಕಾಲೇಜಿನ...

ಎಡಮಂಗಲ : ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಒತ್ತಾಯ

ಎಡಮಂಗಲದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು, ವಾಹನಗಳು ಮತ್ತು ನಡೆದುಕೊಂಡು ಹೋಗುವ ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಈ ದುಸ್ಥಿತಿಯನ್ನು ಕಂಡ ರೈಲ್ವೆ ನಿತ್ಯ ಪ್ರಯಾಣಿಕರು ಹಾಗೂ ಸ್ಥಳೀಯರು ಶ್ರಮದಾನ ನಡೆಸಿ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡರು. ಈ ಬಗ್ಗೆ ರೈಲ್ವೆ ಇಲಾಖೆ ಹಾಗು ಸ್ಥಳೀಯ ಆಡಳಿತ ಹದಗೆಟ್ಟ ರಸ್ತೆಯ ಬಗ್ಗೆ...

ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ – ವೆಂಕಟ್ ವಳಲಂಬೆ ಅಸಮಾಧಾನ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು ರಾಜ್ಯದ ಮಾನ್ಯ ಮುಜರಾಯಿ ಮಂತ್ರಿ ರಾಮಲಿಂಗ ರೆಡ್ಡಿಯವರು ನೂತನ ಆಶ್ಲೇಷ ಮಂದಿರಕ್ಕೆ ಶಂಕುಸ್ಥಾಪನ ನೆರವೇರಿಸಲಿದ್ದಾರೆ. ಈ ಹಿಂದೆ ಮೋಹನ್ ರಾಮ್ ಸುಳ್ಳಿ ಆಡಳಿತ ಅವಧಿಯಲ್ಲಿ ದಾನಿಯಾದ ಮಾಲೂರು ಕೃಷ್ಣಯ್ಹ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದ್ದು ಕಾಮಗಾರಿ ಅನೇಕ ಕಾರಣಗಳಿಂದ ನಿಂತು ಹೋಗಿತ್ತು ಇದೀಗ ಮತ್ತೆ ಅದಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಈ ವಿಚಾರವಾಗಿ...

ಸುಳ್ಯದ ಸ್ವರ್ಣಶ್ರೀ ಸೊಸೈಟಿ 3ನೇ ವರ್ಷಕ್ಕೆ ಪಾದಾರ್ಪಣೆ ಪ್ರಯಕ್ತ ಗಣಹೋಮ, ಲಕ್ಷ್ಮೀಪೂಜೆ

ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ 3ನೇ ವರ್ಷಕ್ಕೆ ಪಾದಾರ್ಪಣೆ ಪ್ರಯಕ್ತ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಅಧ್ಯಕ್ಷರಾದ ಜನಾರ್ಧನ ದೋಳ, ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ, ನಿರ್ದೇಶಕರಾದ ಪ್ರಕಾಶ್ ಕೆರ್ಪಳ, ಸಚಿನ್ ಕುಮಾರ್ ಬಳ್ಳಡ್ಕ, ಶ್ರೀಮತಿ ಭವಾನಿ ಬಿಳಿಮಲೆ, ಕೇಶವ ನಾಯಕ್, ಚಿದಾನಂದ ವಿದ್ಯಾನಗರ, ಸತೀಶ್...

ಆರಂತೋಡು ಕಾಲೇಜಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಸ್ಥಾಪನೆ

ಅರೆಭಾಷೆ ಹೃದಯದ ಭಾಷೆ ‌: ಕೆ.ಆರ್.ಗಂಗಾಧರ್

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮತ್ತು ನೆಹರು ಸ್ಮಾರಕ ಪದವಿ ಪೂರ್ವ  ಕಾಲೇಜು ಆಶ್ರಯದಲ್ಲಿ ಅರೆಭಾಷೆ ಸಂಘದ ಉದ್ಘಾಟನೆ ಮತ್ತು ಕಾಲೇಜು ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮವು ಜೂ.28 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರು ವಹಿಸಿ "ಅರೆಬಾಷೆ ತ್ರೈಮಾಸಿಕ ಪತ್ರಿಕೆ ಹಿಂಗಾರದಲ್ಲಿ ವಿದ್ಯಾರ್ಥಿ ಸಾಹಿತ್ಯಕ್ಕಾಗಿಯೇ ಪುಟಗಳನ್ನು...

ಗುತ್ತಿಗಾರು :-ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಜನಜಾಗೃತಿ ವೇದಿಕೆ ಸುಳ್ಯ ಗುತ್ತಿಗಾರು ವಲಯ ಮತ್ತು ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಗುತ್ತಿಗಾರು ವಲಯ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು....

ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ನಿರಂತರ ಯೋಗ ಕೇಂದ್ರಕ್ಕೆ ಪ್ರಶಸ್ತಿ

ಶ್ರೀ ಬಸವರಲಿ ಯೋಗ ಪ್ರತಿಷ್ಠಾನ ಪೈಲ್ವಾನ್ ಯಜಮಾನ್ "ಶ್ರೀ ಬಸವರಾಜು" ರವರ ಸ್ಮರಣಾರ್ಥ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದ್ವಿತೀಯ ವರ್ಷದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯು ಜೂ.29 ರಂದು ಮೈಸೂರಿನಲ್ಲಿ ನಡೆಯಿತು.10 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಧಾತ್ ಗೌಡ.ಎಂ.ಟಿ ದ್ವಿತೀಯ ಸ್ಥಾನ, 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು ತೃತೀಯ ಸ್ಥಾನ, 15...

ಉಲ್ಲಾಸ್ ಕಜ್ಜೋಡಿ ಯವರ ಮೊದಲ ಕೃತಿ “ಜೀವನಯಾನ” ಕವನ ಸಂಕಲನವನ್ನು ಖರೀದಿಸಲಿಚ್ಚಿಸುವ ಆಸಕ್ತ ಓದುಗರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪುಸ್ತಕ ದೊರೆಯುವ ಸ್ಥಳವನ್ನು ತಿಳಿಯಬಹುದು

ಅಮರ ಸುದ್ದಿ ವಾರಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಉಲ್ಲಾಸ್ ಕಜ್ಜೋಡಿ ಯವರು ಬರೆದ ಮೊದಲ ಕೃತಿ "ಜೀವನಯಾನ" ಕವನ ಸಂಕಲನವು ಇತ್ತೀಚೆಗೆ ಸುಳ್ಯದ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದ್ದು, ಆಸಕ್ತ ಓದುಗರು ಈ ಕೆಳಗಿನ ಅಂಗಡಿಗಳಿಂದ ಪುಸ್ತಕವನ್ನು ಖರೀದಿಸಬಹುದುಹರಿಹರ ಪಳ್ಳತ್ತಡ್ಕ : ಶಿವ ಡಿಜಿಟಲ್ಸ್, ಶ್ರೀ ದುರ್ಗಾ...
Loading posts...

All posts loaded

No more posts

error: Content is protected !!