ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ವಿಶ್ವ ಹಿಂದೂ ಪರಿಷತ್ ಭಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ವತಿಯಿಂದ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪುಣ್ಯಭೂಮಿ ಅಯೋಧ್ಯೆಯಲ್ಲಿ ಇಂದು ನೆರವೇರಲಿರುವ ಪ್ರಭು ಶ್ರೀರಾಮಚಂದ್ರನ ಭವ್ಯಮಂದಿರದ ಭೂಮಿಪೂಜೆಯ ಅಂಗವಾಗಿ ನೆರವೇರಿದ ಈ ವಿಶೇಷ ಪೂಜೆಯ ಸಂದರ್ಭದಲ್ಲಿ ಶಾಖೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೊಡಗಿನಲ್ಲಿ ಇಂದು ನಿಷೇಧಾಜ್ಞೆ ಜಾರಿ

ಅಯೋಧ್ಯೆಯಲ್ಲಿ ಆಗಸ್ಟ್, 05 ರಂದು ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜಾ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದೆ. ಹಾಗೆಯೇ ಕೋವಿಡ್-19 ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿಯಂತೆ ಹಲವು ನಿರ್ಬಂಧಗಳನ್ನು ಪಾಲಿಸಬೇಕಿದೆ. ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144, 144(ಎ) ಮತ್ತು ಕರ್ನಾಟಕ ಪೊಲೀಸ್...
Ad Widget

ದ.ಕ.ಇಂದು ಭಾರಿ ಮಳೆ – ರೆಡ್ ಅಲರ್ಟ್ ಘೋಷಣೆ

 ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗಲಿರುವುದರಿಂದ ಜಿಲ್ಲಾಧಿಕಾರಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ.ಆ.5ರಂದು ಭಾರಿ ಮಳೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಹಾಗೂ ಆ.6 ರಿಂದ 8ರವರೆಗೆ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಹವಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಪೆರಾಜೆ ಮನೆ ಮೇಲೆ ಮರ ಬಿದ್ದು ಹಾನಿ

ಪೆರಾಜೆ ಗ್ರಾಮದ ದಾಸರಹಿತ್ಲು ಬಳಿ ನಿವಾಸಿ ಖದೀಜಮ್ಮ ರವರ ಮನೆಯ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ.

ಮಡಿಕೇರಿ ನಗರದ ಓಂಕಾರೇಶ್ವರ ದೇವಾಲಯಕ್ಕೆ ಹೋಗುವ ರಸ್ತೆಯ ಮೇಲೆ ಬರೆ ಕುಸಿತ

ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಕೊಡಗಿನ ವಿವಿಧ ಪ್ರದೇಶಗಳಲ್ಲಿ ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಸುಂಟಿಕೊಪ್ಪ ಪರಿಸರದಲ್ಲಿ ಇಂದು ಬೀಸಿದ ಭಾರೀ ಗಾಳಿ ಮಳೆಗೆ ಮನೆಗಳ ಮೇಲೆ ಮರಗಳು ಬಿದ್ದಿವೆ. ಇದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.ಇನ್ನೊಂದು ಘಟನೆಯಲ್ಲಿ ಮಡಿಕೇರಿ ನಗರದ ಓಂಕಾರೇಶ್ವರ ದೇವಾಲಯದ ರಸ್ತೆಯಲ್ಲಿ ಭಾರಿ ಗಾತ್ರದ...

ರಾಮ ಮಂದಿರದ ಭೂಮಿಪೂಜೆಯ ಸಮಾರಂಭವನ್ನು ಉತ್ಸಾಹ ಮತ್ತು ಆನಂದದಿಂದ ಆಚರಿಸಿ, ಜತೆಗೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ : ಸನಾತನ ಸಂಸ್ಥೆ

ರಾಮಜನ್ಮಭೂಮಿಯು ೫೦೦ ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದೆ. ದೈವೀ ಆಯೋಜನೆಯಂತೆ ಆ ಪರಮಾನಂದದ ಕ್ಷಣವು ಸಮೀಪಿಸಿದೆ. ನಮಗೆ ಈ ಭವ್ಯ ಮತ್ತು ಈಶ್ವರಿ ಕಾರ್ಯದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ ಸಿಗುತ್ತಿದೆ, ಅದಕ್ಕಾಗಿ ಈ ಐತಿಹಾಸಿಕ ಕ್ಷಣವನ್ನು ಉತ್ಸಾಹದಿಂದ ಮತ್ತು ಆನಂದದಿಂದ ಆದರೆ ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಆಚರಿಸಿರಿ. ಈ ಭೂಮಿ...

ಕೊಡಗು : ಪೌರಕಾರ್ಮಿಕನಲ್ಲಿ ಮೂಡಿದ ಉರಗ ಪ್ರೇಮ

ಸುಂಟಿಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಬಾಲಚಂದ್ರ ಸ್ನೇಕ್ ಬಾಲನ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಇವರು ಕಳೆದ 14 ವರ್ಷಗಳಿಂದ ಈ ಕಾಯಕವನ್ನು ಮಾಡುತ್ತಿದ್ದಾರೆ. ಉರಗಗಳ ಮೇಲೆ ಇಟ್ಟಿರುವ ಇವರ ಅಪಾರ ಪ್ರೀತಿ ಇಂದು ಸುಂಟಿಕೊಪ್ಪ ದ ಪರಿಸರದ ಜನತೆಗೆ ವರವಾಗಿದೆ. ಇಲ್ಲಿಯವರೆಗೆ ಸುಮಾರು 200 ಉರಗಗಳನ್ನು ಸಂರಕ್ಷಿಸಿರುವ ಇವರು ಸ್ಥಳೀಯ ಕಾಡುಗಳಲ್ಲಿ ಅವುಗಳನ್ನು...

ಕೊಡಗು ಜಿಲ್ಲೆ ಕೋಕೆರಿ ಗ್ರಾಮದಲ್ಲಿ ಜೋಡಿ ಕೊಲೆ

ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಕೋಕೆರಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಹೆತ್ತ ತಂದೆ ತಾಯಿಯನ್ನು ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಈ ಕೃತ್ಯ ಸೋಮವಾರ ರಾತ್ರಿ ನಡೆದಿದ್ದು ಮೃತ ದುರ್ದೈವಿಗಳು ರಾಜು 70 ವರ್ಷಗೌರಿ 65 ವರ್ಷಎಂದು ತಿಳಿದುಬಂದಿದೆ. ಈ ಕೃತ್ಯವನ್ನು ಮಗ ಅಯ್ಯಪ್ಪ 26 ವರ್ಷ ಎಂಬಾತನಿಂದ ನಡೆದಿದೆ. ಸ್ಥಳಕ್ಕೆ ಪೊಲೀಸರು...

ರಾಮಮಂದಿರ ಶಿಲಾನ್ಯಾಸ ಅಂಗವಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚನೆ

ಆ.5 ರಂದು ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯಲಿರುವ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಶಿಲಾನ್ಯಾಸ ಹಾಗೂ ರಾಮಮಂದಿರ ನಿರ್ಮಾಣ ಕೆಲಸ ಯಾವುದೇ ವಿಘ್ನಗಳಿಲ್ಲದೇ ಸಾಂಗವಾಗಿ ನಡೆಯುವಂತಾಗಲು ವಿಶೇಷ ಪೂಜೆ ,ಪ್ರಾರ್ಥನೆ ಸಲ್ಲಿಸುವಂತೆ ತಿಳಿಸಿದ್ದಾರೆ. ಕೋವಿಡ್ ನಿಯಮ ಪಾಲಿಸಿಕೊಂಡು...

ಧ.ಗ್ರಾ.ಯೋಜನೆಯ ವಿಪತ್ತು ನಿರ್ವಹಣಾ ಸಮಿತಿಯ ತಾ. ಸಂಯೋಜಕರಾಗಿ ಸತೀಶ್ ಬಂಬುಳಿ ಆಯ್ಕೆ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿನೂತನ ಕಾರ್ಯಕ್ರಮ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಸುಳ್ಯ ತಾಲ್ಲೂಕು ಸಮಿತಿಯ ಸಂಯೋಜಕರಾಗಿ ಗುತ್ತಿಗಾರು ವಲಯದ ನಾಲ್ಕೂರು ಹಾಲೆಮಜಲು ಒಕ್ಕೂಟ ಅಧ್ಯಕ್ಷರಾದ ಸತೀಶ್ ಬಂಬುಳಿ ಇವರು ಆಯ್ಕೆಯಾಗಿರುತ್ತಾರೆ.
Loading posts...

All posts loaded

No more posts

error: Content is protected !!