- Thursday
- September 17th, 2026
ಸುಳ್ಯ: ಸುಳ್ಯದ ಜಯನಗರದ ಮಿಲಿಟರಿ ಗ್ರೌಂಡ್‌ನ ನಿವಾಸಿಗಳ ಅಡಿಸ್ಥಳವನ್ನು ದಾಖಲುಗೊಳಿಸುವ ವಿಚಾರವಾಗಿ ಕಳೆದ 12 ವರ್ಷಗಳಿಂದ ನಿವಾಸಿಗಳು ಹೋರಾಟ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸೆ. 5ರಂದು ಸ್ಥಳ ವೀಕ್ಷಣೆ ನಡೆಸಿದರು. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕಡತ ಪರಿಶೀಲನೆಯ ಹಂತದಲ್ಲಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು, ಪುತ್ತೂರು...
ಬಂದೂಕು ಪರವಾನಗಿ ನವೀಕರಣ ಸಮಸ್ಯೆಗಳ ಕುರಿತು ಸೆ.05ರಂದು ಪುತ್ತೂರಿನ ಪುರಭವನದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಕೆ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ರೈತರನ್ನು ಒಳಗೊಂಡ ನಿಯೋಗವು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಫರೀದ್ ರವರಿಗೆ ಅಹವಾಲು ಸಲ್ಲಿಕೆ ಮಾಡುತ್ತಾ “ದಕ್ಷಿಣ ಕನ್ನಡ ಜಿಲ್ಲೆಯ ರೈತರು...
ಯುನೈಟೆಡ್ ಕರಾಟೆ ಬುಡೋಕಾನ್ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್ ನಡೆಯಿತು.ಈ ಚಾಂಪಿಯನ್ ಶಿಪ್ ನಲ್ಲಿ ಎಡಮಂಗಲ ಪ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥಿ ಹಾರ್ದಿಕ್ ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ಕರಾಟೆ ಶಿಕ್ಷಕರಾದ ಯಾದವ ಬೀರಂತಡ್ಕ ಅವರು ತರಬೇತಿ ನೀಡುತ್ತಿದ್ದಾರೆ. ಈತ ಎಡಮಂಗಲ ಗ್ರಾಮದ...
ಬೆಳ್ಳಾರೆ : ಬೆಳ್ಳಾರೆ ಗ್ರಾಮದ ಬೀಡು ತಿರುವಿನಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ವಾಹನ ಸವಾರರಿಗೆ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಗೋಚರಿಸುವಂತೆ ರೊಟೇರಿಯನ್ ಹಾಗೂ ವಿದಾದ್ ಹೋಲಿಡೇಸ್ ಮಾಲಕ ಹನೀಫ್ ಸಲಾಲರು ಪೀನ ದರ್ಪಣವನ್ನು(Convex Mirror) ಪ್ರಾಯೋಜಕರಾಗಿ ನೀಡಿದರು. ಪೀನ ದರ್ಪಣದ ಉದ್ಘಾಟನೆಯನ್ನು ಸೆ.06ರಂದು ಮಾಜಿ ಸೈನಿಕ ಕುತ್ಯಾಳ ಭಾಸ್ಕರ ಗೌಡ ನೆರವೇರಿಸಿದರು. ಈ...
ಶಿಕ್ಷಕ ದಿನಾಚರಣೆ ಪ್ರಯುಕ್ತ ಸೆ.05ರಂದು ಇಬ್ಬರು ನಿವೃತ್ತ ಶಿಕ್ಷಕ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಪೂರ್ವಾಹ್ನ ಪೈಲಾರಿನಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕ ಎಂ.ಟಿ ಶಾಂತಿಮೂಲೆ ಇವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪುಸ್ತಕಗಳನ್ನು ಖರೀದಿ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು...
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆಯುವ ಜಿ.ಎಲ್ ಆಚಾರ್ಯ ಸಂಸ್ಮರಣೆ ಮತ್ತು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಮಾಜದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನಿವೃತ್ತ ಸುಳ್ಯ ಕನ್ನಡ ಸಾಹಿಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು ರವರಿಗೆ "ಆಚಾರ್ಯ ಪುರಸ್ಕಾರ" ಸನ್ಮಾನವನ್ನು ನೀಡಿ ಜಿ.ಎಲ್ ಆಚಾರ್ಯ ಸಭಾಭವನ ಪುತ್ತೂರು ಇಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ...
ಅಜ್ಜಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.), ಸುಳ್ಯ ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಜ್ಜಾವರ ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಜ್ಜಾವರ ವಲಯದ ಸಂಯುಕ್ತ ಆಶ್ರಯದಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವು ಸೆ. 3ರಂದು ಸರ್ಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ನಡೆಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಕಾಶ್...
ಫ್ರೆಂಡ್ಸ್ ಸಂಕೇಶ ಇದರ ಆಶ್ರಯದಲ್ಲಿ 14ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆಪ್ಟೆಂಬರ್ 6ರಂದು ಭಾನುವಾರ ಸಂಕೇಶ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಯಿಲಪ್ಪ ಸಂಕೇಶ ಉದ್ಘಾಟಿಸಿದರು. ಗೌರವ ಉಪಸ್ಥಿತರಾಗಿ ಪ್ರೆಂಡ್ಸ್ ಸಂಕೇಶ ಇದರ ಗೌರವಾಧ್ಯಕ್ಷರಾದ ಪುನೀತ್ ಸಂಕೇಶ, ಅಧ್ಯಕ್ಷರಾದ ಜಗ್ಗೇಶ್ ಸಂಕೇಶ ಮತ್ತಿತರರು ಉಪಸ್ಥಿತರಿದ್ದರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ...
ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಜೇಸಿಐ ಸಪ್ತಾಹ “ಸುಸ್ನಿಲ 2026” ಅಂಗವಾಗಿ ಸುಳ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳಿಗೆ ಮುಟ್ಟು ಗುಟ್ಟಲ್ಲ ಹದಿಹರೆಯದ ಹೆಜ್ಜೆಗೆ ಆರೋಗ್ಯದ ಮಾಹಿತಿ ಕಾರ್ಯಾಗಾರ ಸೆ.05 ರಂದು ನಡೆಯಿತು. ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೇಸಿ ಹೆಚ್ ಜಿ ಎಪ್ ರಂಜಿತ್ ಕುಕ್ಕೆಟ್ಟಿ ಅವರು ದೀಪ ಬೆಳಗಿಸುವುದರ...
ಮಕ್ಕಳಲ್ಲಿ ದೈಹಿಕ ಸದೃಢತೆ, ಆತ್ಮವಿಶ್ವಾಸ ಹಾಗೂ ಸ್ವಯಂ ರಕ್ಷಣಾ ಕೌಶಲ್ಯ ಬೆಳೆಸುವ ಉದ್ದೇಶದಿಂದ ಶೋಟೋಕಾನ್ ಸ್ಕೂಲ್ ಆಫ್ ಕರಾಟೆ ಫೆಡರೇಷನ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕರಾಟೆ ತರಗತಿಗೆ ಚಾಲನೆ ನೀಡಲಾಗಿದೆ. 4ನೇ ಡ್ಯಾನ್ ಬ್ಲ್ಯಾಕ್ ಬೆಲ್ಟ್ ಕರಾಟೆ ಕೋಚ್ ರಾಮಕೃಷ್ಣ (ಕಿಶನ್) ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯದಲ್ಲಿ ಕರಾಟೆ ತರಬೇತಿ ನಡೆಯುತ್ತಿದ್ದು, ಇದರ ಅಂಗವಾಗಿ ಭಾನುವಾರ ಸುಬ್ರಹ್ಮಣ್ಯ...
Loading posts...
All posts loaded
No more posts
