- Wednesday
- May 6th, 2026
ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಗಂಗಾಧರ ನಾಯ್ಕ ಅವರ ಪುತ್ರಿ ಪ್ರಸನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. .ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ತಾಯಿ ಸಹೋದರನ್ನು ಅಗಲಿದ್ದಾರೆ.
ಸುಳ್ಯದಲ್ಲಿ ಸುಮಾರು 11 ವರ್ಷಗಳಿಂದ ಜನರಿಗೆ ಉತ್ತಮ ಸೇವೆಯ ಮುಖಾಂತರ ಆಯುರ್ಧಾಮ ಆಸ್ಪತ್ರೆ ಆಯುರ್ವೇದ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವುದರ ಜತೆಗೆ ಜನಮನ್ನಣೆ ಗಳಿಸಿದೆ. ಹಲವಾರು ವಿದೇಶಿಗರು ಕೂಡ ಆಯುರ್ವೇದ ಚಿಕಿತ್ಸೆ ಹಾಗೂ ಅಧ್ಯಯನಕ್ಕಾಗಿ ಇಲ್ಲಿಗೆ ಆಗಮಿಸಿದ್ದರು. ಇದೀಗ ಸುಳ್ಯದ ಹಳೆಗೇಟಿನಲ್ಲಿ ನೂತನವಾಗಿ ಸಕಲ ವ್ಯವಸ್ಥೆಗಳೊಂದಿಗೆ ಆಸ್ಪತ್ರೆ ಸಂಕೀರ್ಣ ನಿರ್ಮಾಣಗೊಂಡು ಜನಸೇವೆ ಸಿದ್ದಗೊಂಡಿದೆ. ಅ.18 ಮತ್ತು...
ಜಯನಗರ ಮಿಲಿಟರಿ ಗ್ರೌಂಡ್ ಸೇರಿ 19ನೇ ವಾರ್ಡಿನ ಬಿಜೆಪಿ ವಾರ್ಡ್ ಸಮಿತಿ ರಚನೆ ನಗರ ಅಧ್ಯಕ್ಷ ಐ.ಬಿ. ಚಂದ್ರಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ನಗರ ಸಮಿತಿಯ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡು ಪನ್ನೆ,, ಸುಳ್ಯ ನ ಪಂ ಸದಸ್ಯರುಗಳಾದ ವಿನಯ ಕುಮಾರ್ ಕಂದಡ್ಕ, ಶಿಲ್ಪ ಸುದೇವ್, ಪಕ್ಷದ...
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದೇವಸ್ಥಾನದ ಆಭರಣಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯ ನಿವಾಸಿಯಾದ ಶ್ರೀನಾಥ್ ಟಿ.ಎಸ್. ಅವರು ಮಂಗಳೂರು ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಅಧೀಕ್ಷರಲ್ಲಿ ದೂರು ದಾಖಲಿಸಿ, ತನಿಖೆಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ರೂಪಾ ಎಂ.ಜೆ. ಹಾಗೂ ದೇಗುಲದ ಮಾಜಿ ಮುಖ್ಯ...
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ದಿನಸಿ ವ್ಯಾಪಾರ ಮಳಿಗೆ *ಸುವರ್ಣ ಸಹಕಾರ ಮಾರ್ಟ್* ಅ.25 ರಂದು ಶುಭಾರಂಭಗೊಳ್ಳಲಿದೆ. ಸಂಘದ ಸದಸ್ಯರು ಕೊವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸಭೆ ಮತ್ತು ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ಸಮಾಲೋಚನ ಸಭೆ ಅ.23ರಂದು ಕಡಬ ತಾಲೂಕಿನ ಬಿಳಿನೆಲೆಯಲ್ಲಿ ಪೂರ್ವಾಹ್ನ 10 ಗಂಟೆ ಗೆ ನಡೆಯಲಿದೆ. ಈ ಭಾಗದ ಗ್ರಾಮಸ್ಥರು ಹೆಚ್ಚಿನ ಭಾಗವಹಿಸುವಂತೆ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ನಗರ ಪಂಚಾಯತ್ ನಲ್ಲಿ ಕಳೆದ ಎರಡು ವರ್ಷಗಳಿಂದ ಮುಖ್ಯಾಧಿಕಾರಿಯಾಗಿದ್ದ ಮತ್ತಡಿಯವರಿಗೆ ವರ್ಗಾವಣೆ ಆದೇಶವಾಗಿದ್ದು, ಸುಳ್ಯಕ್ಕೆ ಎಂ.ಆರ್.ಸ್ವಾಮಿ ಆಗಮಿಸಲಿದ್ದಾರೆ. ಇವರು ಮೈಸೂರು ಮಹಾನಗರಪಾಲಿಕೆಯ ಸಹಾಯಕ ಕಂದಾಯ ಆಧಿಕಾರಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಎಮ್.ಆರ್. ಸ್ವಾಮಿಯವರು ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು
ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು,ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ,ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇವುಗಳ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಅ.28 ರಿಂದ ನ 03 ರವರೆಗೆ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್...
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಮತ್ತು ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 49 ನೇ ವರ್ಷದ ದಸರಾ ಕಾರ್ಯಕ್ರಮದಲ್ಲಿ ಅ.21 ರಂದು ಸುಳ್ಯ ದ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ) ಸುಳ್ಯ ಇದರ ವತಿಯಿಂದ ಕೊರೋನಾ ಜಾಗೃತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ವಾರಿಯರ್ಸ್...
Loading posts...
All posts loaded
No more posts
