ಬೆಳ್ಳಾರೆ ಫಿದಾ ಫಾತಿಮಳಿಗೆ ಡಿಸ್ಟಿಂಕ್ಷನ್

ಪುತ್ತೂರು: ಮರ್ಕಝುಲ್ ಹುದಾ ವುಮೆನ್ಸ್ ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಾಡ್ನೂರು ನಿವಾಸಿ ಫಿದಾ ಫಾತಿಮಾ 518 ಅಂಕ ಪಡೆದು ಡಿಸ್ಟಿಂಕ್ಷನ್ ಆಗಿ ಹೊರ ಹೊಮ್ಮಿದ್ದಾಳೆ..ಈಕೆ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಬೆಳ್ಳಾರೆ ಇವರ ಅಕ್ಕನ ಮಗಳು ಹಾಗೂ ಮಾಡ್ನೂರು ಕೊಳಂಬೆ ಖಾದರ್ ಮತ್ತು ನಸೀಮಾ ಬೆಳ್ಳಾರೆ ದಂಪತಿಗಳ ಪುತ್ರಿ

47 ವರ್ಷಗಳಿಂದ ಕತ್ತಲೆಯಲ್ಲಿದ್ದ ಕುಟುಂಬಕ್ಕೆ ಬೆಳಕು ನೀಡಿದ ಸೆಲ್ಕೋ ಸಂಸ್ಥೆ – ಇದು ಅಮರ ಸುದ್ದಿ ವರದಿಯ ಫಲಶ್ರುತಿ

ಬಳ್ಪ ಗ್ರಾಮ ದೇಶದಲ್ಲೆ ಗುರುತಿಸಿದ ಆದರ್ಶ ಗ್ರಾಮ. ಹೆಸರಿನಂತ ಗ್ರಾಮವಾಗದೇ ಕುಗ್ರಾಮವಾಗಿ ಉಳಿದಿದೆ. ಸಭೆ ಸಮಾರಂಭಗಳಿಗೆ ಸೀಮಿತವಾಯಿತೆ ಹೊರತು ಬಳ್ಪ ಗ್ರಾಮ ಆದರ್ಶ ಗ್ರಾಮವಾಗಿ ಕಾಣಲು ಸಾಧ್ಯವಾಗಿಲ್ಲ. ಸಾಧ್ಯವಾಗಲೂ ಇನ್ನೆಷ್ಟೂ ವರ್ಷ ಬೇಕೋ ?ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಿಗದೇ ಕತ್ತಲೆಯಲ್ಲಿದ್ದ ಮನೆಯ ಬಗ್ಗೆ ಅಮರ ಸುದ್ದಿ ಪತ್ರಿಕೆಯಲ್ಲಿ "47 ವರ್ಷಗಳಿಂದ ಕತ್ತಲೆಯಲ್ಲಿ ಬದುಕುತ್ತಿರುವ ಶೋಚನೀಯ ಬದುಕು"...
Ad Widget

ಜು.26 : ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆಯು ಜುಲೈ 26 ರಂದು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನ ದಲ್ಲಿ ಜರುಗಲಿದೆ. ಈ ಸಭೆಗೆ ಮಂಡಲದ ಪದಾಧಿಕಾರಿಗಳು, ಸದಸ್ಯರು , ವಿಶೇಷ ಆಹ್ವಾನಿತರು, ಮಂಡಲದ ಮೋರ್ಚಾಗಳ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳು, ಮಂಡಲದ ಪ್ರಕೋಷ್ಠಗಳ ಸಂಚಾಲಕ ಸಹ ಸಂಚಾಲಕರು, ರಾಜ್ಯದ ಪದಾಧಿಕಾರಿಗಳು, ರಾಜ್ಯ ಕಾರ್ಯಕಾರಿಣಿ...

ಸುಳ್ಯ ಸಂಪಾಜೆ ರಸ್ತೆಯಲ್ಲಿ ಸರಣಿ ಅಪಘಾತ – ವಿದ್ಯುತ್ ಕಂಬಕ್ಕೆ ಟ್ಯಾಂಕರ್ ಹಾಗೂ ಲಾರಿ ಡಿಕ್ಕಿ

ಸುಳ್ಯ ಸಂಪಾಜೆ ರಸ್ತೆಯಲ್ಲಿ ಕುಲ್ಚಾರ್ ಸೇತುವೆ ಬಳಿ ವಿದ್ಯುತ್ ಕಂಬಕ್ಕೆ ಟ್ಯಾಂಕರ್ ಡಿಕ್ಕಿಯಾದ ಘಟನೆ ಇಂದು ರಾತ್ರಿ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇನ್ನೊಂದು ಅಪಘಾತದಲ್ಲಿ ಕಡೆಪಾಲ ಸೇತುವೆ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಲಾರಿ ಸೇತುವೆಯಿಂದ ಕೆಳಕ್ಕುರುಳಿದೆ. ಎರಡು ಕಡೆ ವಿದ್ಯುತ್ ಕಂಬ ಮುರಿದಿರುವುದರಿಂದ ಅರಂತೋಡು ಸಂಪಾಜೆ ಭಾಗದಲ್ಲಿ ಹಲವು ತಾಸು ವಿದ್ಯುತ್ ವ್ಯತ್ಯಯ...

ಕಲ್ಲುಗುಂಡಿ : ಸೇತುವೆಯಿಂದ ಕೆಳಗುರುಳಿದ ಲಾರಿ : ಚಾಲಕ ಪಾರು

ಕಲ್ಲುಗುಂಡಿ ಸಮೀಪ ಕಡೆಪಾಲ ಸೇತುವೆ ಮತ್ತು ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿಯಾದ ಲಾರಿ ಹೊಳೆಗೆ ಉರುಳಿದ ಘಟನೆ ಇಂದು ನಡೆದಿದೆ. ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಸುಳ್ಯ ಕಡೆಯಿಂದ ಮಡಿಕೇರಿಗೆ ಲಾರಿ ತೆರಳುತ್ತಿದ್ದ ಲಾರಿಯಲ್ಲಿ ಸಿಮೆಂಟ್ ಹಾಗೂ ಟೈಲ್ಸ್ ಸಾಗಿಸಲಾಗುತ್ತಿತ್ತು. ವಿದ್ಯುತ್ ಕಂಬವೊಂದು ತುಂಡಾಗಿದೆ.

ಕೆ.ವಿ.ಜಿ ಅಮರಜ್ಯೋತಿ ಕಾಲೇಜಿಗೆ ಶೇ100 ಫಲಿತಾಂಶ – ಐವರು ವಿದ್ಯಾರ್ಥಿಗಳಿಗೆ 600 ರಲ್ಲಿ 600 ಅಂಕ

ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿಗೆ ಶೇ100 ಪಲಿತಾಂಶ ಬಂದಿದ್ದು ವಿಜ್ಞಾನ ವಿಭಾಗದಲ್ಲಿ ಕೆ ಅನುಷ ಪ್ರಭು, ಎಂ ಅರ್ ಶೃತಿ, ಶಿವಕೃಷ್ಣ, ಅನನ್ಯ ಲಕ್ಷ್ಮಿ ಎನ್, ಆಯಿಶತ್ ಹಾಶಿರ 600ರಲ್ಲಿ 600 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 52 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು ಅದರಲ್ಲಿ 36 ಡಿಸ್ಟಿಂಕ್ಷನ್ ಮತ್ತು ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ...

ಬಸ್ ಪಾಸ್ ವ್ಯವಸ್ಥೆ ಹಾಗೂ ಹಾಸ್ಟೆಲ್ ಗಳನ್ನು ಪ್ರಾರಂಭಿಸುವ ಬಗ್ಗೆ ಸರಕಾರ ಶೀಘ್ರ ಕ್ರಮ ಕೈಗೊಳ್ಳಲು ಎಬಿವಿಪಿ ಮನವಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ ಹಾಸ್ಟೆಲ್ ಗಳನ್ನು ಪ್ರಾರಂಭಿಸುವ ಕುರಿತು ಹಾಗೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಒದಗಿಸುವ ಬಗ್ಗೆ ಸರಕಾರಕ್ಕೆ ತಹಶಿಲ್ದಾರ್ ಮುಖಾಂತರ ಮನವಿಯನ್ನು ನೀಡಲಾಯಿತು. ಕೋವಿಡ್ ಎರಡನೆಯ ಅಲೆಯಿಂದಾಗಿ ರಾಜ್ಯದ ಎಲ್ಲಾ ಹಾಸ್ಟೆಲ್ ಗಳು ಹಾಗೂ ಕಾಲೇಜುಗಳು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಬಂದ್ ಆಗಿದ್ದವು. ಇದೀಗ ಸರಕಾರ...

ಕೊಡಗು ಸಂಪಾಜೆ ಶಾಲೆಗೆ ಲ್ಯಾಪ್ ಟಾಪ್ ಕೊಡುಗೆ

ಬದುರುಲ್ ಹುದಾ ಗಲ್ಫ್ ಕಮಿಟಿ ಸಂಪಾಜೆ ಇದರ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಪಾಜೆ ಇಲ್ಲಿಗೆ ಲ್ಯಾಪ್ ಟಾಪ್ ಕೊಡುಗೆಯಾಗಿ ನೀಡಲಾಯಿತು. ಆನ್ಲೈನ್ ತರಗತಿಗಳು ನಡೆಯುವ ಈ ಲಾಕ್ಡೌನ್ ಸಮಯದಲ್ಲಿ ತರಗತಿಗಳು ಯಾವುದೇ ಅಡಚಣೆಗಳು ಇಲ್ಲದೆ ನಡೆಯಲು ಗಲ್ಫ್ ಕಮಿಟಿ ವತಿಯಿಂದ ತಾವು ಕಲಿತ ಶಾಲೆಗೆ ಲ್ಯಾಪ್‌ಟಾಪ್ ನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ...

ಮಣಿಯಾನ ಓಬಯ್ಯ ಗೌಡ ನಿಧನ

ಗುತ್ತಿಗಾರು ಗ್ರಾಮದ ಮಣಿಯಾನ ಕುಟುಂಬದ ಹಿರಿಯರಾದ ಓಬಯ್ಯ ಗೌಡ (90) ಸ್ವಗೃಹದಲ್ಲಿ ಇಂದು ನಿಧನರಾದರು. ಹಲವು ಹಿರಿಯರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಮೃತರು ಪುತ್ರರಾದ ಪಿಡಿಓ ಪುರುಷೋತ್ತಮ, ದುರ್ಗೇಶ್, ಸೀತಾರಾಮ, ಶಿವಕುಮಾರ ಹಾಗೂ ಪುತ್ರಿ ಶ್ರೀಮತಿ ಮಮತಾ ಹಾಗೂ ಅಳಿಯ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಜ್ಜೋಡಿ : ಮನೆಯ ಮೇಲೆ ಮರ ಬಿದ್ದು ಹಾನಿ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿಯ ನಿವಾಸಿ ಐತೆ ಎಂಬುವವರ ಮನೆಯ ಮೇಲೆ ಜು.22ರ ಸಂಜೆ ಮರ ಉರುಳಿ ಬಿದ್ದಿದ್ದು ಮನೆಗೆ ಅಪಾರ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿ, ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಿಯರು ಮರ ತೆರವು ಹಾಗೂ ದುರಸ್ತಿ ಕಾರ್ಯಕ್ಕೆ...
Loading posts...

All posts loaded

No more posts

error: Content is protected !!