ಲತಾಶ್ರೀ ಸುಪ್ರೀತ್ ಮೋಂಟಡ್ಕರಿಗೆ – ಜಾನ್ಸಿರಾಣಿ ಲಕ್ಷ್ಮೀ ಬಾಯಿ ರಾಜ್ಯ ಪ್ರಶಸ್ತಿ

ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ.) ಹಾಗೂ ಬೆಳಕು ಟಿವಿ ಸಹಯೋಗದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಜಾನ್ಸಿರಾಣಿ ಲಕ್ಷ್ಮೀ ಬಾಯಿ ಪ್ರಶಸ್ತಿಗೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರು ಭಾಜನರಾಗಿದ್ದಾರೆ. ಫೆ 7 ರಂದು ನಡೆಯುವ ರಾಜ್ಯ ಮಟ್ಟದ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಜ್ಯ ದಿಂದ ಆಯ್ಕೆ ಯಾದ...

ಜ್ಞಾನಮಂದಾರ ಅಕಾಡೆಮಿಯಿಂದ ಸುಳ್ಯದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ – ಸಾಧಕರಿಗೆ “ಸಮಾಜ ರತ್ನ ರಾಜ್ಯ ಪ್ರಶಸ್ತಿ” ಪ್ರದಾನ

ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಕಳೆದ ಹಲವು ವರ್ಷಗಳಿಂದ ವಿವಿಧ ಸಾಧಕರನ್ನು ಗೌರವಿಸುವ ಸಲುವಾಗಿ ಸಮಾಜರತ್ನ ರಾಜ್ಯ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿಯ ಸಮಾಜರತ್ನ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಕಲಾ ಪ್ರತಿಭೋತ್ಸವ ಕಾರ್ಯಕ್ರಮವು ಜ.17 ರಂದು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷರಾದ...
Ad Widget

ಗಾಂಧಿನಗರ : ತಡೆಬೇಲಿಗೆ ಡಿಕ್ಕಿಯಾಗಿ ಕಾರು ಜಖಂ

ಗಾಂಧಿನಗರ ಮಸೀದಿ ಸಮೀಪ ಕಾರೊಂದು (KL 14 Z 3232):ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ ಘಟನೆ ಇಂದು ರಾತ್ರಿ 3 ಗಂಟೆಗೆ ನಡೆದಿದೆ. ಕಾರಿನ ಮುಂಭಾಗ ಜಖಂ ಗೊಂಡಿದ್ದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಅರಂತೋಡು : ಬಿಯರ್ ತುಂಬಿದ ಲಾರಿ ಪಲ್ಟಿ – ಜನ ದಾಪುಗಾಲು

ಮೈಸೂರಿನಿಂದ ಮಂಗಳೂರಿಗೆ ಸಾಗುತ್ತಿದ್ದ ಬಿಯರ್ ತುಂಬಿದ ಲಾರಿ ಅರಂತೋಡು ಸಮೀಪ ಕೊಡಂಕೇರಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ. ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಚಾಲಕ ಮತ್ತು ಕ್ಲಿನರ್ ಅಪಾಯದಿಂದ ಪಾರಾಗಿದ್ದಾರೆ. ಸುಮಾರು ರೂ 45 ಲಕ್ಷ ಮೌಲ್ಯದ ಬಿಯರ್ ಇತ್ತೆಂದು ಹೇಳಲಾಗುತ್ತಿದೆ....

ಜ.20 ರಂದು ರೈತಪರ ಸಂಘಟನೆಗಳ ವತಿಯಿಂದ ಸುಳ್ಯದಲ್ಲಿ ಉಪವಾಸ ಸತ್ಯಾಗ್ರಹ

ಸುಳ್ಯ ತಾಲೂಕಿನ ರೈತ,ಕಾರ್ಮಿಕ, ದಲಿತ, ಜನಪರ ಚಳವಳಿಗಳ ಒಕ್ಕೂಟ ಇದರ ಆಶ್ರಯದಲ್ಲಿ ರೈತ,ಕಾರ್ಮಿಕ, ದಲಿತ ಹಾಗೂ ಜನ ವಿರೋಧಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಸುಳ್ಯ ತಾಲೂಕು ಮಟ್ಟದ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹ ಜ.೨೦ ರಂದು ಖಾಸಗಿ ನಿಲ್ದಾಣ ಬಳಿ ನಡೆಯಲಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹೇಳಿದರು.ಜ.26 ರಂದು...

ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾಗಿ ವಿಜಯ ಪಾಟಾಜೆ

ಅಂಬೇಡ್ಕರ್ ರಕ್ಷಣಾ ವೇದಿಕೆ ಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ. ವಿಜಯ ಪಾಟಾಜೆಯವರು ನೇಮಕಗೊಂಡಿದ್ದಾರೆ.

ಕಳಂಜ : ರಾಮಮಂದಿರ ನಿಧಿ ಸಮರ್ಪಣೆ ಕಾರ್ಯಕ್ಕೆ ಚಾಲನೆ

ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಮರ್ಪಣೆ ಮಾಡುವ ಕಾರ್ಯಕ್ಕೆ ಕಳಂಜ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕರ್ತರು ಮನೆ ಮನೆಗೆ ತೆರಳಿ ನಿಧಿ ಸಮರ್ಪಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕರಿಕ್ಕಳ : ರಾಮಮಂದಿರ ನಿಧಿ ಸಮರ್ಪಣೆ ಕಾರ್ಯಕ್ಕೆ ಚಾಲನೆ

ಐವತ್ತೊಕ್ಲು ಗ್ರಾಮದ ಕರಿಕ್ಕಳದಲ್ಲಿ ಅಯೋಧ್ಯ ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಜನೆಯೊಂದಿಗೆ ಊರವರು ಕರಿಕ್ಕಳದಲ್ಲಿ ನಿಧಿಸಮರ್ಪಣೆ ಅಭಿಯಾನ ನಡೆಸಿದರು.

ಕೊಲ್ಲಮೊಗ್ರ : ಮಕ್ಕಳ ಗ್ರಾಮ ಸಭೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವತಿಯಿಂದ ಜ.16 ರಂದು ಗ್ರಾ. ಪಂ. ಸಭಾಂಗಣದಲ್ಲಿ ಕೆ.ವಿ.ಜಿ ಪ್ರೌಢಶಾಲೆಯ ವಿದ್ಯಾರ್ಥಿ ರಚನ್ ಎ.ಡಿ ಇವರ ಅಧ್ಯಕ್ಷತೆಯಲ್ಲಿ 2020-21ನೇ ಸಾಲಿನ ಮಕ್ಕಳ ಗ್ರಾಮ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕೆ.ವಿ.ಜಿ ಪ್ರೌಢಶಾಲೆ ಕೊಲ್ಲಮೊಗ್ರು ಇದರ ಸಹ ಶಿಕ್ಷಕರಾದ ವೆಂಕಟ್ರಮಣ ಕೆ.ಕೆ. ಹಾಗೂ ರಾಜೇಶ್ ಕುಮಾರ್ ಆರ್. ಸ. ಹಿ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು...

ಜ.17- ಅಜ್ಜಾವರದಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ

ಅಜ್ಜಾವರ ಗ್ರಾ.ಪಂ.ವ್ಯಾಪ್ತಿಯಲ್ಲಿ ಉಚಿತವಾಗಿ ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಜ.17 ರಂದು ಗ್ರಾಮದ ಆರು ಕಡೆಗಳಲ್ಲಿ ನಡೆಯಲಿದೆ. ದೊಡ್ಡೇರಿ ಭಜನಾ ಮಂದಿರದ ಬಳಿ, ಮುಳ್ಯ ಭಜನಾ ಮಂದಿರದ ಬಳಿ, ಮೇನಾಲ ಹಾಲು ಸೊಸೈಟಿ ಬಳಿ, ಕಾಂತಮಂಗಲ ಬಸ್ ಸ್ಟಾಂಡ್ ಬಳಿ, ಅಜ್ಜಾವರ ಹಾಲು ಸೊಸೈಟಿ ಬಳಿ, ಅಡ್ಪಂಗಾಯ ಶಾಲಾ ಬಳಿ ನಡೆಯಲಿದೆ ಎಂದು...
Loading posts...

All posts loaded

No more posts

error: Content is protected !!