ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಒತ್ತು ನೀಡಲಿ: ವೆಂಕಟ್ ವಳಲಂಬೆ

ಸುಳ್ಯ: ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿರುವುದನ್ನು ಸ್ವಾಗತಿಸಿರುವ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಯುವಜನರಿಗೆ...

ಮೌತ್ ಗಾರ್ಡ್ (ಬಾಯಿ ಕವಚ) : ಡಾ|| ಮುರಲೀ ಮೋಹನ್ ಚೂಂತಾರು

ಮೌತ್ ಗಾರ್ಡ್ ಎನ್ನುವುದು ಬಾಯಿಯ ರಕ್ಷಣಾ ಕವಚವಾಗಿದ್ದು, ಹಲ್ಲು ವಸಡುಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡು ಹಲ್ಲು, ತುಟಿ, ವಸಡುಗಳಿಗೆ ಗಾಯಗಳಾಗದಂತೆ ರಕ್ಷಿಸುತ್ತದೆ. ಇದೊಂದು ತೆಳುವಾದ ಬಾಗಿಸಬಹುದಾದ ವಸ್ತುವಿನಿಂದ ತಯಾರಿಸಿದ ರಕ್ಷಣಾ ಕವಚವಾಗಿದ್ದು ಒಂದು ರೀತಿಯ ಹಲ್ಲುಗಳ ಶಿರಸ್ತ್ರಾಣದಂತೆ ಕೆಲಸ ಮಾಡುತ್ತದೆ. ಅಪಘಾತಗಳಾದಾಗ ಎರಡೂ ದವಡೆಗಳು ಒಂದಕ್ಕೊಂದು ಸೇರಿಕೊಂಡು ಘರ್ಷಣೆಯಾಗದಂತೆ ತಡೆಯುತ್ತದೆ. ಈ ರೀತಿಯ ಹಲ್ಲು ರಕ್ಷಾ ಕವಚಗಳನ್ನು,...
Ad Widget

ನಡುಗಲ್ಲು : ಬಿದ್ದು ಸಿಕ್ಕಿದ ಪರ್ಸ್ ವಾರಸುದಾರರಿಗೆ ಹಸ್ತಾಂತರ

ನಡುಗಲ್ಲು ಮೆಸ್ಕಾಂ ಪವರ್ ಮ್ಯಾನ್ ವೆಂಕಟ್ ವಳಲಂಬೆ ರವರಿಗೆ ಸೆ.07ರಂದು ನಡುಗಲ್ಲಿನಿಂದ ಹಾಲೆಮಜಲು ಕಡೆಗೆ ಸಾಗುವ ರಸ್ತೆಯಲ್ಲಿ ಪರ್ಸ್ ಒಂದು ಬಿದ್ದು ಸಿಕ್ಕಿದ್ದು, ಅದರಲ್ಲಿ ಸುಮಾರು 7,660 ರೂಪಾಯಿ ನಗದು ಹಾಗೂ ಅಮೂಲ್ಯ ದಾಖಲಾತಿಗಳಿದ್ದು, ಈ ವಿಷಯವನ್ನು ವೆಂಕಟ್ ರವರು ನಡುಗಲ್ಲು ಕಲ್ಪವೃಕ್ಷ ಹೋಟೆಲ್ ನ ಕುಸುಮಾಧರ ನೆಲ್ಲಿಪುಣಿ ಹಾಗೂ ಸ್ಥಳೀಯರಾದ ಮೇಘನ್ ಕಲ್ಲಾಜೆರವರಿಗೆ ತಿಳಿಸಿ...

ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತೃತೀಯ ಸ್ಥಾನ ಪಡೆದ ಅನ್ವಿತ್ ಬಟ್ಟೋಡಿ

ಯುನೈಟೆಡ್ ಕರಾಟೆ ಬುಡೊಕಾನ್ ಇಂಟರ್ ನ್ಯಾಷನಲ್ ವತಿಯಿಂದ ಉಪ್ಪಿನಂಗಡಿಯ ಹೆಚ್.ಎಂ ಆಡಿಟೋರಿಯಂ ನಲ್ಲಿ ಸೆ.06ರಂದು ನಡೆದ 2026ನೇ ಸಾಲಿನ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವೈಯಕ್ತಿಕ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಅನ್ವಿತ್ ಬಟ್ಟೋಡಿ ತೃತೀಯ ಸ್ಥಾನ ಪಡೆದಿದ್ದಾರೆ. ಕೊಲ್ಲಮೊಗ್ರು ಗ್ರಾಮದ ಕುಮಾರನಾಥ ಬಟ್ಟೋಡಿ ಹಾಗೂ ಶ್ರೀಮತಿ ರಶ್ಮಿ ಕುಮಾರನಾಥ ಬಟ್ಟೋಡಿ...

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ – ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಗುರುವಂದನೆ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ – ಮುದ್ದು ಕೃಷ್ಣ ರಾದೆ ಸ್ಪರ್ಧೆ ಹಾಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 5ರಂದು ಆಯೋಜಿಸಲಾಯಿತು.ಘಟಕಾಧ್ಯಕ್ವರಾದ ಜೆಎಪ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರು ಶಿಕ್ಷಕರು ಆದ ಶ್ರೀಮತಿ ಗೀತಾಂಜಲಿ ಟಿ. ಜಿ., ಜೇಸಿಐ ಸುಳ್ಯ...

ರಬ್ಬರ್ ಮರ ಕಡಿಯುವ ವೇಳೆ ಹೃದಯಾಘಾತ: ನಿರಂಜನಾಕ್ಷ ಬಾಳೆಕಜೆ ನಿಧನ

ಸುಳ್ಯ: ತೊಡಿಕಾನ ಗ್ರಾಮದ ಬಾಳೆಕಜೆ ದಿ. ಆನಂದ ಅವರ ಪುತ್ರ ನಿರಂಜನಾಕ್ಷ ಬಾಳೆಕಜೆ (47) ಅವರು ಸೆ. 7ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ತೊಡಿಕಾನ ಮೂಲದ ನಿರಂಜನಾಕ್ಷ ಅವರು ಸೆ. 7ರಂದು ಬೆಳಿಗ್ಗೆ ಕಲ್ಲುಗುಂಡಿ ಉಳುವಾರು ರಾಜಗೋಪಾಲ್ ಅವರ ಮನೆಯಲ್ಲಿ ರಬ್ಬರ್ ಮರ ಕಡಿಯುವ ಕೆಲಸಕ್ಕೆ ತೆರಳಿದ್ದರು. ಕೆಲಸ ಆರಂಭಿಸಿದ ಕೆಲವೇ ಹೊತ್ತಿನಲ್ಲಿ...

ಏನೆಕಲ್ಲು ;  ಆದಿಶಕ್ತಿ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಏನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಊರ ಹಿರಿಯರು ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶ್ರೀ ರಾಮಯ್ಯಗೌಡ ಮಾದನಮನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಉಪಾಧ್ಯಕ್ಷರಾದ ಶ್ರೀ ಜನಾರ್ಧನ ಗೌಡ ಕಟ್ಟ, ಅಧ್ಯಕ್ಷರಾದ ಶ್ರೀ ಲಕ್ಷ್ಮಣಗೌಡ...

ಗುತ್ತಿಗಾರು : ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಕುರಿತು ವಿಶೇಷ ಗ್ರಾಮಸಭೆ ; ವರದಿಯನ್ನು ಸಂಪೂರ್ಣವಾಗಿ ಕೈಬಿಡಲು ಗ್ರಾಮಸ್ಥರ ಒಮ್ಮತದ ಆಗ್ರಹ

ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ಜನವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ‘ಜೀರೋ ಬಫರ್ ಝೋನ್’ ಘೋಷಿಸಬೇಕು ಎಂದು ಗುತ್ತಿಗಾರಿನಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಇಲ್ಲಿನ ದೀನ್ ದಯಾಳ್ ರೈತ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಈ ವಿಶೇಷ ಗ್ರಾಮಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಆಡಳಿತಾಧಿಕಾರಿ ದೇವರಾಜ್ ಮುತ್ಲಾಜೆ...

ಕಲ್ಮಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣೇಶ್ ಕೆ.ಎಸ್, ಉಪಾಧ್ಯಕ್ಷರಾಗಿ ಶೇಷಪ್ಪ ಗೌಡ.ಕೆ ಆಯ್ಕೆ

ಕಲ್ಮಕಾರು : ಕಲ್ಮಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೆ.07ರಂದು ನಡೆಯಿತು. ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಗಣೇಶ್ ಕೆ.ಎಸ್ ಹಾಗೂ ಉಪಾಧ್ಯಕ್ಷರಾಗಿ ಶೇಷಪ್ಪ ಗೌಡ.ಕೆ ಆಯ್ಕೆಯಾದರು. ಸಂಘದ ನಿರ್ದೇಶಕರಾಗಿ ಬಾಲಚಂದ್ರ ಬಿ., ಶಿವರಾಮ ಪಿ., ವೆಂಕಟ್ರಮಣ ಕೆ.ಕೆ., ಬೆಳ್ಯಪ್ಪ ಗೌಡ ಎಂ., ರಾಜೀವ ಪಿ.ಎಸ್., ತೇಜಕುಮಾರ ಡಿ., ಚಂದ್ರಶೇಖರ...

ಜಯನಗರ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

ಸುಳ್ಯ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಸುಳ್ಯ ಇದರ ಆಶ್ರಯದಲ್ಲಿ ಪೋಷಣ್ ಅಭಿಯಾನದಡಿ ಸಮುದಾಯ ಆಧಾರಿತ ಕಾರ್ಯಕ್ರಮವು ಸೆ. 7ರಂದು ಜಯನಗರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಸಮಗ್ರ ಬೆಳವಣಿಗೆಯ ಕುರಿತು ಜಾಗೃತಿ ಮೂಡಿಸಲಾಯಿತು. ಜಯನಗರ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ನೆಫಿಸತುಲ್...
Loading posts...

All posts loaded

No more posts

error: Content is protected !!