ಏನೆಕಲ್ಲು ;  ಆದಿಶಕ್ತಿ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಏನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

. . . . . . . . .

ಕಾರ್ಯಕ್ರಮದ ಉದ್ಘಾಟನೆಯನ್ನು ಊರ ಹಿರಿಯರು ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶ್ರೀ ರಾಮಯ್ಯಗೌಡ ಮಾದನಮನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಉಪಾಧ್ಯಕ್ಷರಾದ ಶ್ರೀ ಜನಾರ್ಧನ ಗೌಡ ಕಟ್ಟ, ಅಧ್ಯಕ್ಷರಾದ ಶ್ರೀ ಲಕ್ಷ್ಮಣಗೌಡ ಸಂಕಡ್ಕ ಹಾಗೂ ಕಾರ್ಯದರ್ಶಿ ಶ್ರೀ ಹವೀನ್ ಬಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ಭಜನಾ ಮಂದಿರದ ವತಿಯಿಂದ ಶ್ರೀಮತಿ ನಳಿನಾಕ್ಷಿ ಮುರಳೀಧರ ಬಾಲಾಡಿ ಸರ್ವರನ್ನು ಸ್ವಾಗತಿಸಿದರು. ಶ್ರೀ ವಿಶ್ವನಾಥ ಬಾಲಾಡಿ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಪ್ರತೀಕ್ಷಾ ಹವೀನ್ ಬಾಲಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ನಂತರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅಂಗನವಾಡಿ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು. ಮಕ್ಕಳ ಪ್ರತಿಭೆ, ಚುರುಕುತನ ಹಾಗೂ ಸೃಜನಶೀಲತೆಗೆ ಉತ್ತೇಜನ ನೀಡುವ ವಿವಿಧ ಸ್ಪರ್ಧೆಗಳು ನಡೆದಿದ್ದು,  ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಸಂಜೆ ನಡೆದ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಲಕ್ಷ್ಮಣಗೌಡ ಸಂಕಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ರೀಡಾಪಟು ಹಾಗೂ ಕ್ರೀಡಾ ತೀರ್ಪುಗಾರರಾದ ಶ್ರೀ ಮೋಹಿತ್ ಜೇನುಕೋಡಿ ಮತ್ತು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಿತ್ರ ವೆಂಕಟೇಶ್ ಭಾಗವಹಿಸಿದ್ದರು. ಭಜನಾ ಮಂದಿರದ ಕಾರ್ಯದರ್ಶಿ ಶ್ರೀ ಹವೀನ್ ಬಾಲಾಡಿ ಉಪಸ್ಥಿತರಿದ್ದರು.

ಶ್ರೀ ಸಚಿನ್ ಕುಕ್ಕಪ್ಪನಮನೆ ಸ್ವಾಗತಿಸಿದರು. ಶ್ರೀಮತಿ ಅನಿತಾ ಕುಸುಮಾಧರ ಬಾಲಾಡಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ರಾಕೇಶ್ ಬಾಲಾಡಿ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಪ್ರತೀಕ್ಷಾ ಹವೀನ್ ಬಾಲಾಡಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading