ಗುತ್ತಿಗಾರು : ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಕುರಿತು ವಿಶೇಷ ಗ್ರಾಮಸಭೆ ; ವರದಿಯನ್ನು ಸಂಪೂರ್ಣವಾಗಿ ಕೈಬಿಡಲು ಗ್ರಾಮಸ್ಥರ ಒಮ್ಮತದ ಆಗ್ರಹ

ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ಜನವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ‘ಜೀರೋ ಬಫರ್ ಝೋನ್’ ಘೋಷಿಸಬೇಕು ಎಂದು ಗುತ್ತಿಗಾರಿನಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

. . . . . . . . .

ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಇಲ್ಲಿನ ದೀನ್ ದಯಾಳ್ ರೈತ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಈ ವಿಶೇಷ ಗ್ರಾಮಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಆಡಳಿತಾಧಿಕಾರಿ ದೇವರಾಜ್ ಮುತ್ಲಾಜೆ ವಹಿಸಿದ್ದರು.

. . . . . . .

ಆರಂಭದಲ್ಲಿ ಲೋಕೇಶ್ ಪೀರನಮನೆ ಅವರು ಕಸ್ತೂರಿ ರಂಗನ್ ವರದಿಯ ಸ್ವರೂಪ, ಅದರಲ್ಲಿರುವ ವಿಷಯಗಳು ಹಾಗೂ ಸ್ಥಳೀಯರ ಮೇಲಾಗುವ ಸಾಧಕ-ಬಾಧಕಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ವರದಿಯಿಂದ ನೇರ ಪರಿಣಾಮಕ್ಕೊಳಗಾಗುವ ನಾಲ್ಕೂರು ಗ್ರಾಮದ ನಿವಾಸಿಗಳು ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿ ಚರ್ಚಿಸಿದರು.

ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡುವುದು, ಜೀರೋ ಬಫರ್ ಝೋನ್ ಮಾಡುವುದು, ಸರ್ಕಾರದಿಂದ ಬಾಧಿತ ಝೋನ್ ವಿಚಾರವಾಗಿ ಸ್ಪಷ್ಟ ಮಾಹಿತಿ ನೀಡುವುದು, ತಾಂತ್ರಿಕ ಲೋಪ ತಪ್ಪಿಸಲು ಹಸ್ತಚಾಲಿತ(ಮ್ಯಾನುವಲ್) ಭೂ ಸರ್ವೆ ನಡೆಸುವುದು, ಸರ್ಕಾರಿ ಭೂಮಿ ಸರ್ಕಾರಿ ಸ್ವತ್ತಾಗಿಯೇ ಉಳಿಯುವಂತೆ ನೋಡಿಕೊಳ್ಳುವುದು ಹಾಗೂ ಪಶ್ಚಿಮ ಘಟ್ಟಕ್ಕೂ ಮತ್ತು ಜನವಸತಿ ಪ್ರದೇಶಕ್ಕೂ ಪ್ರತ್ಯೇಕ ಸ್ಪಷ್ಟ ಗಡಿ ಗುರುತು ಮಾಡಬೇಕು ಎಂದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್, ಕಾರ್ಯದರ್ಶಿ ಮೋಹನ್ ಕುಮಾರ್ ಕಡ್ತಲ್ ಕಜೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಅರಣ್ಯ ಇಲಾಖೆಯ ಸಂತೋಷ್ ದಮ್ಮಸೂರು ಹಾಗೂ ಧರಣಪ್ಪ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading