ಹರೀಶ್ ಕಂಜಿಪಿಲಿ ಬೆಂಬಲಕ್ಕೆ ಬಿಜೆಪಿ ಕೊನೆವರೆಗೂ ನಿಲ್ಲಲಿದೆ – ಎವಿ ತೀರ್ಥರಾಮ

ಸರಸ್ವತಿ ಕಾಮತ್ ಅವರ ಆರೋಪ ದುರುದ್ದೇಶಪೂರಿತವಾಗಿದೆ. ಆದರೂ ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಹರೀಶ್ ಕಂಜಿಪಿಲಿ ಅವರು ತಪ್ಪು ಮಾಡಿಲ್ಲ ಎಂದು ನಾವು ಮೇಲಿನ ನ್ಯಾಯಾಲಯದಲ್ಲಿ ಸಾಬೀತುಪಡಿಸುತ್ತೇವೆ ಎಂದು ರಾಜ್ಯ ರೈತಮೋರ್ಚಾದ ಉಪಾಧ್ಯಕ್ಷ ಎ.ವಿ ತೀರ್ಥರಾಮ ಅವರು ಹೇಳಿದರು. ಸುಳ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕಂಜಿಪಿಲಿ ಅವರು ಬಿಜೆಪಿ ಮಂಡಲದ ಆಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ...

ಆಲೆಟ್ಟಿ ಶಕ್ತಿ ಕೇಂದ್ರದ ಯುವಮೋರ್ಚಾ ಅಧ್ಯಕ್ಷರಾಗಿ ಪ್ರದೀಪ್ ಕೊಲ್ಲರಮೂಲೆ

ಆಲೆಟ್ಟಿ (ಅರಂತೋಡು) ಬಿಜೆಪಿ ಮಹಾಶಕ್ತಿ ಕೇಂದ್ರದ ಯುವಮೋರ್ಚಾ ಅಧ್ಯಕ್ಷರಾಗಿ ಪ್ರದೀಪ್ ಕೊಲ್ಲರಮೂಲೆ ಆಯ್ಕೆಯಾಗಿದ್ದಾರೆ. ಇವರು ಕೋಲ್ಚಾರ್ ಬೂತ್ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
Ad Widget

ಹರಿಶ್ಚಂದ್ರ ಕೋನಡ್ಕ ನಿಧನ

ಕೊಲ್ಲಮೊಗ್ರು ಗ್ರಾಮದ ಹರಿಶ್ಚಂದ್ರ ಕೋನಡ್ಕ ಸೆ.09 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. (ವರದಿ :- ಉಲ್ಲಾಸ್ ಕಜ್ಜೋಡಿ)

ಅರಂತೋಡು : ಗಣೇಶೋತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮ

ಅರಂತೋಡು ದುರ್ಗಾ ಮಾತಾ ಭಜನಾ ಮಂದಿರದಲ್ಲಿ ಗಣೇಶೋತ್ಸವ ಕಾರ್ಯಕ್ರಮ ಸರಳ ರೀತಿಯಲ್ಲಿ ಆಚರಣೆ ನಡೆಯಿತು. ಬೆಳಿಗ್ಗೆ 5 ಗಂಟೆಗೆ ಗಣಪತಿ ಹವನ, ಸಂಜೆ 5 ಗಂಟೆಯಿಂದ ರಾತ್ರಿ 7.30ರ ತನಕ ಭಜನಾ ಕಾರ್ಯಕ್ರಮ ನಡೆಯಿತು.

ಮಡಪ್ಪಾಡಿ ಗಣೇಶೋತ್ಸವ ಕಾರ್ಯಕ್ರಮ

ಯುವಕ ಮಂಡಲ (ರಿ) ಮಡಪ್ಪಾಡಿ, ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ, ಮಂಜುಶ್ರೀ ಯಕ್ಷಗಾನ ಕಲಾ ಸಂಘ (ರಿ) ಮಡಪ್ಪಾಡಿ, ಉಜ್ವಲ ಮಹಿಳಾ ಮಂಡಳ(ರಿ) ಮಡಪ್ಪಾಡಿ, ಗ್ರಾಮಸ್ಥರ ಹಾಗೂ ಸಮಸ್ತ ಭಕ್ತಾದಿಗಳ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಈ ವರ್ಷ ಸರಕಾರದ ಷರತ್ತುಬದ್ಧ ನಿಯಮಗಳಿರುವುದರಿಂದ ಕೇವಲ ಗಣಪತಿ ಹವನದೊಂದಿಗೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಜಂಟಿ...

ಕುಲ್ಕುಂದ : ದಶ ವರ್ಷದ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 10 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು.

ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರಾಗಿ ಧನ್ಯಕುಮಾರ್ ದೇರುಮಜಲು – ಕಾರ್ಯದರ್ಶಿ ಭಗತ್ ದೇರಾಜೆ

ಮಡಪ್ಪಾಡಿ ಯುವಕ ಮಂಡಲದ 2020-21 ಸಾಲಿನ ಮಹಾಸಭೆ ಸೆ.10 ರಂದು ನಡೆದು ನೂತನ ಪದಾಧಿಕಾರಿಗಳ  ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಲೋಹಿತ್ ಬಾಳಿಕಳ, ಅಧ್ಯಕ್ಷರಾಗಿ  ಧನ್ಯಕುಮಾರ್ ದೇರುಮಜಲು, ಕಾರ್ಯದರ್ಶಿಯಾಗಿ ಭಗತ್ ದೇರಾಜೆ, ಉಪಾಧ್ಯಕ್ಷರಾಗಿ ಚೇತನ್ ಕುಚ್ಚಾಲ & ರಂಜಿತ್ ಬೊಮ್ಮೆಟ್ಟಿ, ಜತೆ ಕಾರ್ಯದರ್ಶಿಯಾಗಿ ಪ್ರೆಕ್ಷಿತ್ ಬೊಮ್ಮೆಟ್ಟಿ & ಮಣೀಶ್ ಕೇವಳ, ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ್ ಶೀರಡ್ಕ &...

ಬಾಳಿಲ-ಮುಪ್ಪೇರ್ಯ ನಾಗರಿಕ ಸೇವಾ ಸಮಿತಿಯಿಂದ 39ನೇ ವರ್ಷದ ನಾಡಹಬ್ಬ ಗಣೇಶೋತ್ಸವ ಆಚರಣೆ

ನಾಗರಿಕ ಸೇವಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ವತಿಯಿಂದ 39ನೇ ವರ್ಷದ ನಾಡಹಬ್ಬ ಗಣೇಶೋತ್ಸವ ಆಚರಣೆಸೆ.10 ರಂದು ನಡೆಯಿತು. ಕೋವಿಡ್ ನಿಬಂಧನೆಯಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಗಣಪತಿ ಪ್ರತಿಷ್ಠೆ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು. ಸ್ಥಳೀಯ ಭಜನಾ ಮಂಡಳಿ ಹಾಗೂ ನಡುಗಲ್ಲು ಶ್ರೀ ದುರ್ಗಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಸಮಿತಿಯ...

ಬೆಳ್ಳಾರೆ : 50ನೇ ವರ್ಷದ ಶ್ರೀ ಗಣೇಶೋತ್ಸವ

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ(ರಿ.) ಮತ್ತು ವಿರಾಟ್ ಫ್ರೆಂಡ್ಸ್ (ರಿ.) ಬೆಳ್ಳಾರೆ ಇದರ ಆಶ್ರಯದಲ್ಲಿ 50ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಸಲಾಯಿತು. ಈ ಬಾರಿ ಕೋವಿಡ್ ಹಾವಳಿಯಿಂದಾಗಿ ಅದ್ದೂರಿಯ ಆಚರಣೆ ನಡೆಸದೆ ಸರಳವಾಗಿ ಗಣೇಶೋತ್ಸವ ಆಚರಿಸಲಾಯಿತು. ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಹಾಗೂ ಮಹಾಪೂಜೆ ನೆರವೇರಿತು. ಬೆಳ್ಳಾರೆ ಶ್ರೀ...

ಶುಭಶ್ರೀ ಮಹಿಳಾ ಮಂಡಲದಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕಿಯರಿಗೆ ಸನ್ಮಾನ

ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಕನ್ನಡ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಎಂ. ಮೀನಾಕ್ಷಿ ಗೌಡ ಅವರು ಉದ್ಘಾಟಿಸಿದರು. ಕಾಂತಮಂಗಲ ಕಿರಿಯ ಪಾಥಮಿಕ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಶಿಕ್ಷಕಿ ವಿಜಯಲಕ್ಷ್ಮೀ. ಎಸ್ ರವರನ್ನು "ಉತ್ತಮ ಶಿಕ್ಷಕ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಬಳಿಕ ಶುಭಶ್ರೀ ಮಹಿಳಾ ಮಂಡಲದ ಮಹಾಸಭೆಯು ನಡೆಯಿತು. ಈ ಸಂದರ್ಭದಲ್ಲಿ ಸರಕಾರಿ...
Loading posts...

All posts loaded

No more posts

error: Content is protected !!