ಅಮರಮುಡ್ನೂರು: ಸ್ವಚ್ಛತಾ ಹೀ ಸೇವಾ ಮತ್ತು ಗಾಂಧಿ ಜಯಂತಿ ಆಚರಣೆ

ಅಮರಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಚತಾ ಹೀ ಸೇವಾ ಮತ್ತು ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಪಂಚಾಯತ್ ಸ್ವಚ್ಚ ಸಂಕೀರ್ಣ ಘಟಕದ ಕಾರ್ಮಿಕರನ್ನು ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.ಪಂಚಾಯತ್ ಅಧ್ಯಕ್ಷೆ ಪದ್ಮ ಪ್ರಿಯಾ ಮೇಲ್ತೋಟ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಂಚಾಯತ್ ಸದಸ್ಯರು ಹಾಗೂ ಪಿ.ಡಿ.ಒ ಆಕಾಶ್ ಮತ್ತು ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಆರೋಗ್ಯ...

ಅ.9: ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮ‌

ಸುಳ್ಯ ನಾಡ ಹಬ್ಬಗಳ ದಿನಾಚರಣಾ ಸಮಿತಿ,ತಾಲೂಕು ಆಡಳಿತ ಇದರ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವು ಅ.9ರಂದು ಬೆಳಗ್ಗೆ 10:30 ಕ್ಕೆ ಸುಳ್ಯ ತಾಲೂಕು ಪಂಚಾಯತ್ " ಸಾಮರ್ಥ್ಯ ಸೌಧದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನುಗಾರಿಕೆ, ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸುಳ್ಯ ನಗರ...
Ad Widget

ಪೇರಾಲು ಫ್ರೆಂಡ್ಸ್ ತಂಡದಿಂದ ಸುಳ್ಯದ ಇಬ್ಬರ ಚಿಕಿತ್ಸೆಗೆ 40 ಸಾವಿರ ಧನಸಹಾಯ

ಪೇರಾಲಿನ ಯುವಕರ ತಂಡ ಕ್ರಿಕೆಟ್ ಪಂದ್ಯಾಟವನ್ನು ಆ.2 ರಂದು ನಡೆಸಿತ್ತು. ಇದರಲ್ಲಿ ಒಟ್ಟು 38 ತಂಡಗಳು ಭಾಗವಹಿಸಿ ಒಂದು ತಂಡದ ನೋಂದಣಿ ಶುಲ್ಕ ರೂ. 800 ಪಡೆದುಕೊಂಡಿದ್ದರು. ಪಂದ್ಯಾಟ ಮುಗಿದು ಬಹುಮಾನ ವಿತರಣೆಯಾದ ಬಳಿಕ ಉಳಿಕೆ ಹಣ ಎಣಿಸಿದಾಗ ರೂ.40 ಸಾವಿರ ಸಂಗ್ರಹವಾಗಿತ್ತು. ಈ ಹಣವನ್ನು ಗುತ್ತಿಗಾರಿನ ಸಮೀಕ್ಷಾ ಎಂಬ ಬಾಲಕಿ ಕ್ಯಾನ್ಸರ್ ಕಾಯಿಲೆಯಿಂದ ಹಾಗೂ...

ಪರ್ಸ್ ಕಳೆದುಹೋಗಿದೆ

ಗುತ್ತಿಗಾರು ಹರಿಹರಪಲ್ಲತ್ತಡ್ಕ ಮಧ್ಯೆ ಅ.5 ರಂದು ಅಮೂಲ್ಯ ದಾಖಲೆಗಳಿದ್ದ  ಪರ್ಸೊಂದು ಕಳೆದುಹೋಗಿವೆ. ಸಿಕ್ಕಿದವರು ದಯ ವಿಟ್ಟು ಈ ನಂಬರ್ ಗೆ ( 9353548576) ತಿಳಿಸಬೇಕಾಗಿ ವಿನಂತಿಸಿದ್ದಾರೆ.

ನಿಧನ : ಚನಿಯಪ್ಪ ನಾಯ್ಕ ಪನ್ನೆ

ಕಲ್ಮಕಾರು ಗ್ರಾಮದ ಚನಿಯಪ್ಪ ನಾಯ್ಕ ಪನ್ನೆ ಅವರು ಅಕ್ಟೋಬರ್ 06 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಕುಟುಂಬಸ್ಥರು ಹಾಗೂ ಬಂಧು ಮಿತ್ರರುಗಳನ್ನು ಅಗಲಿದ್ದಾರೆ.

ಹಾಸನದ ಮತ್ಸ್ಯ ದರ್ಶನಿಗೆ ಭೇಟಿ ನೀಡಿ ಲೆಕ್ಕಪತ್ರ ಪರಿಶೀಲಿಸಿದ ನಿಗಮ ಅಧ್ಯಕ್ಷ ಎ.ವಿ.ತೀರ್ಥರಾಮ

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧೀನಲ್ಲಿರುವ ಹಾಸನದ ಮತ್ಸ್ಯ ದರ್ಶನಿಗೆ ಕೆ.ಎಫ್.ಡಿ.ಸಿ. ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ ರವರು ಹಠತ್ತಾಗಿ ಭೇಟಿದರು. ಕಛೇರಿಯ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದರು.

ಐನೆಕಿದು ಕೊಪ್ಪಳಗದ್ದೆ ಸೇತುವೆ ಕೆಳಗೆ ದನದ ತಲೆ ಹಾಗೂ ತ್ಯಾಜ್ಯ ಪತ್ತೆ ಪ್ರಕರಣ ; ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ

ಐನೆಕಿದು ಗ್ರಾಮದ ಕೊಪ್ಪಳಗದ್ದೆ ಸೇತುವೆಯ ಕೆಳಗೆ ದನದ ತಲೆ ಹಾಗೂ ತ್ಯಾಜ್ಯ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದನದ ಹತ್ಯೆ ಮಾಡಿದವರು ಹಾಗೂ ಸ್ಥಳಿಯವಾಗಿ ಸಹಕರಿಸಿದವರು ಸಿಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅ.04 ರಂದು ಶ್ರೀ ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್...

ಪೆರುವಾಜೆ : ಬಿದ್ದುಸಿಕ್ಕಿದ ಕಿವಿಯೋಲೆ ಹಿಂತಿರುಗಿಸಿದ ಜನಿತಾ ಬೈತಡ್ಕ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಮಹಿಳೆಯೋರ್ವರ ಕಿವಿಯ ಬೆಂಡೋಲೆ ಬಿದ್ದು ಹೋಗಿತ್ತು. ಇದು ಉಬರಡ್ಕ ಗ್ರಾಮದ ರಾಧಾಕೃಷ್ಣ ಬೈತಡ್ಕ ಹಾಗೂ ಹವ್ಯಾ ಬೈತಡ್ಕ ರವರ ಮಗಳಾದ ಜನಿತಾಳಿಗೆ ಸಿಕ್ಕಿತ್ತು. ಕೂಡಲೇ ಅದನ್ನು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಪ್ರಾಮಾಣಿಕತೆ ಮೆರೆದ ಆಕೆಗೆ ವ್ಯವಸ್ಥಾಪನಾ ಸಮಿತಿ ವತಿಯಿಂದ ಭಗವದ್ಗೀತೆ ಪುಸ್ತಕ ನೀಡಿ ಗೌರವಿಸಲಾಯಿತು.

ಕಲ್ಲಪ್ಪಳ್ಳಿ – ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಕಲ್ಲಪ್ಪಳ್ಳಿ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಮಹಾಸಭೆಯು ಕ್ಲಬ್ ನ ಕಚೇರಿಯಲ್ಲಿ ಎನ್. ನಿರಂಜನ ಮಾಸ್ತರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. Nithin MS ಕಾರ್ಯದರ್ಶಿ ಗುಡ್ಡಪ್ಪ ವರದಿ ವಾಚಿಸಿದರು. ಲೆಕ್ಕಪತ್ರ ಅಂಗೀಕಾರವಾದ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್ ಗರುಗುಂಜ, ಕಾರ್ಯದರ್ಶಿಗಳಾಗಿ ವಸಂತ ಯಂ.ಯಂ., ಖಜಾಂಚಿಯಾಗಿ ನಿತಿನ್ ಯಂ.ಎಸ್., ಉಪಾಧ್ಯಕ್ಷರಾಗಿ ಪ್ರದೀಪ್...

ಮಾವಿನಪಳ್ಳ : ಮಹಮ್ಮಾಯಿ ದೇವಿ ದೇವಸ್ಥಾನದಲ್ಲಿ ವಿಜಯದಶಮಿ ಆಚರಣೆ

ಅಜ್ಜಾವರ ಗ್ರಾಮದ ಮಾವಿನಪಳ್ಳ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ವಿಜಯದಶಮಿಯಂದು ಶ್ರೀ ದೇವಿಗೆ ವಿಶೇಷ ಮಹಾಪೂಜೆ ನೈವೇದ್ಯ ಸಮರ್ಪಣೆ ಹಾಗೂ ಮಕ್ಕಳಿಗೆಅನ್ನಪ್ರಾಶನ ಹಾಗೂ ಮಹಾ ಅನ್ನದಾನ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟ ಹತ್ತು ಸಮಸ್ತರು ಹಾಗೂ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ, ಮಹಮ್ಮಾಯಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರಾದ...
Loading posts...

All posts loaded

No more posts

error: Content is protected !!