- Thursday
- August 6th, 2026
ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಬಿ. ಯಎಂ. ಕಾಂಪ್ಲೆಕ್ಸ್‌ನಲ್ಲಿ ಉಮರ್ ಮಣಿಮಜಲು ಹಾಗೂ ಜಮಾಲ್ ಬೆಳ್ಳಾರೆಯವರ ಪಾಲುದಾರಿಕೆಯ ಹೋಟೆಲ್ ವೆಲ್ಕಂ ಎ.13ರಂದು ಶುಭಾರಂಭಗೊಂಡಿತು.ಈ ಅತ್ಯಾಪ್ತ ತಾಣದಲ್ಲಿ ಚಹಾ, ಕಾಫಿ, ತಿಂಡಿ,ಚಿಕನ್ ಬಿರಿಯಾನಿ, ಚಿಕನ್ ಮಂದಿ ಹಾಗೂ ತಾಜಾ ಜ್ಯೂಸ್ ಐಟಂಗಳು ದೊರೆಯುತ್ತವೆ ಎಂದು ಪಾಲುದಾರರು ತಿಳಿಸಿದ್ದಾರೆ. (ವರದಿ : ಎಂ.ಎ. ಮುಸ್ತಫಾ ಬೆಳ್ಳಾರೆ)
ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏ.15ರಂದು ಪೂರ್ವಾಹ್ನ “ವಿಷುಕಣಿ ಪೂಜೆ” ನೆರವೇರಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ವಿಷುಕಣಿ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)
ದಿನಾಂಕ : 15 ಏಪ್ರಿಲ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 15) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-460-482/485ಹಳೆ ಅಡಿಕೆ...
ಅಸಾಧಾರಣ ಸಾಂಸ್ಕೃತಿಕ ಪ್ರತಿಭೆ ಸುಳ್ಯದ ಮನುಜ ನೇಹಿಗನಿಗೆ ದ್ವಿತೀಯ ಪಿ.ಯು ಪರೀಕ್ಷೆಯ ಕಲಾ ವಿಭಾಗದಲ್ಲಿ ಶೇ.93.50 ಅಂಕ ಬಂದಿರುತ್ತದೆ. ಆಳ್ವಾಸ್ ಪ.ಪೂ.ಕಾಲೇಜಿನ ವಿದ್ಯಾರ್ಥಿಯಾಗಿರುವ ಮನುಜ ನೇಹಿಗ ವರ್ಷವಿಡೀ ತನ್ನ ತಂದೆ ಸುಳ್ಯ ರಂಗಮನೆಯ ರೂವಾರಿ ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ಚಾರುವಸಂತ, ನಾಯಿಮರಿ ನಾಟಕ, ದೇವವೃದ್ಧರು , ಕರ್ಣಾಸ್ತಮಾನ ಮುಂತಾದ ನಾಟಕಗಳ ಪ್ರದರ್ಶನ, ಅಭಿನಯ,...
ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ. 24 ರಿಂದ ಮೇ. 03 ರ ತನಕ ನಡೆಯಲಿದ್ದು, ಭರದ ಕಾರ್ಯ ನಡೆಯಿತ್ತಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಗೊನೆ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಚಂದ್ರಪ್ರಕಾಶ್ ಕಂಬಳ, ಪುನರ್ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನೇಮಿರಾಜ್ ಪಲ್ಲೋಡಿ,...
ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ. 24 ರಿಂದ ಮೇ. 03 ರ ತನಕ ನಡೆಯಲಿದ್ದು, ಭರದ ಕಾರ್ಯ ನಡೆಯಿತ್ತಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಗೊನೆ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಚಂದ್ರಪ್ರಕಾಶ್ ಕಂಬಳ, ಪುನರ್ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನೇಮಿರಾಜ್ ಪಲ್ಲೋಡಿ,...
ಮಡಪ್ಪಾಡಿ ಗ್ರಾಮದ ಅಂಬೆಕಲ್ಲುಹೂವಪ್ಪ ಗೌಡರ ಪುತ್ರ ಕಿಶನ್ (ಮಿಟ್ಟಿ ) ಏ.14 ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಲಿವರ್ ಸಮಸ್ಯೆಗೊಳಗಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಂದೆ , ತಾಯಿ ನೀಲಾವತಿ, ಸಹೋದರರಾದ ತನುರಾಜ್ ಮತ್ತು ಸುಜನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ, ಸಾಮಾಜಿಕ ಸಮಾನತೆಯ ಹರಿಕಾರ ಡಾ. ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆಯನ್ನು ಇಂದು ಸುಳ್ಯದಲ್ಲಿ ಸುಮಾರು 15 ವರ್ಷಗಳಿಂದ ನಿರ್ಮಾಣ ಕಾರ್ಯ ಕುಂಠಿತ ಗೊಂಡು ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಇಂದು ಆಯೋಜಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರು ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ...
ಸುಳ್ಯದ ಶ್ರೀ ಗುರುರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕೋತ್ಸವವು ಎ.21 ಮತ್ತು 22ರಂದು ನಡೆಯಲಿದ್ದು, ಈ ಬಾರಿ “ಶ್ರೀ ಗುರುರಾಘವೇಂದ್ರಾನುಗ್ರಹ ಪ್ರಶಸ್ತಿ”ಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರಿಗೆ ಪ್ರದಾನ ಮಾಡಲಾಗುವುದು. ಎಂದು ಶ್ರೀ ಗುರುರಾಘವೇಂದ್ರ ಮಠದ ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ....
Loading posts...
All posts loaded
No more posts
