- Tuesday
- September 1st, 2026
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಇಂದು ಸಂಜೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.ಘಟ್ಟ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದೆ. ಇತ್ತ ಸುಬ್ರಹ್ಮಣ್ಯದ ಪರಿಸರದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ಭಕ್ತಾಧಿಗಳಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಭಕ್ತರು ನೀರಿಗಿಳಿಯದಂತೆ ಕಾವಲು ಕಾಯುತ್ತಿದ್ದಾರೆ.
ಗಡಿಪಾರಿನ ಮೂಲಕ ಭಜರಂಗದಳವನ್ನು ಮಟ್ಟ ಹಾಕುತೇವೆ ಎಂದು ಹೊರಟಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ.ಭಜರಂಗದಳ ಕಾರ್ಯಕರ್ತರು ಧರ್ಮದ ರಕ್ಷಣೆಯ ಜತೆಗೆ ಸಮಾಜಮುಖಿ ಕೆಲಸ ಮಾಡುತ್ತಾ ನೆರೆ ಹಾಗೂ ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತ ಬಂದಿದ್ದಾರೆ. ಇಂತಹ ಕಾರ್ಯಕರ್ತರನ್ನು ಗಡಿ ಪಾರು ಮಾಡುವುದನ್ನು ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ ಪ್ರಖಂಡ...
ಸುಳ್ಯ ತಾಲೂಕಿನ ಬಹುತೇಕ ಪಂಚಾಯತ್ ಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಸರ್ವರ್ ಸಮಸ್ಯೆ, ತಾಂತ್ರಿಕ ಅಡಚಣೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಅಜ್ಜಾವರ ಗ್ರಾಮ ಪಂಚಾಯತ್ ಗೆ ತಾಲೂಕು ಕಾರ್ಯನಿರ್ವಾಹನಾ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೃಹ ಲಕ್ಷ್ಮಿ ಯೋಜನೆಯು ಪಲಾನುಭವಿಗಳಿಗೆ ತಲುಪುವಂತೆ ಮಾಡಬೇಕು ಎಂದು ಪಂಚಾಯತ್ ಆಡಳಿತ ಸಿಬ್ಬಂದಿಗಳಿಗೆ ಸೂಚಿಸಿದರು....
ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರದಲ್ಲಿ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಇಂದು ನಡೆಯಿತು. ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಅವರು ಉದ್ಘಾಟಿಸಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲೆಯು 4 ವರ್ಷಗಳ ಹಿಂದೆ ಮೇಲ್ದರ್ಜೆಗೇರಿದ್ದು, ಸರಕಾರದಿಂದ ಸುಮಾರು 19 ಕೋಟಿ ಅನುದಾನವಿದ್ದು, ಸರಕಾರದೊಂದಿಗೆ,ನಿರಂತರ ಸಂಪರ್ಕ ಸಾದಿಸಿ ಅತೀ ಶೀಘ್ರದಲ್ಲಿ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ...
ಒಂದು ಕಾಲದಲ್ಲಿ ಕುಗ್ರಾಮವೆಂದು ಗುರುತಿಸಿಕೊಂಡ ಮಂಡೆಕೋಲು ಇಂದು ಅಭಿವೃದ್ಧಿಗೊಂಡು ಸುಗ್ರಾಮವಾಗಿ ರೂಪುಗೊಂಡಿದೆ ಎಂದು ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ದ.ಕ.ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಮಂಡೆಕೋಲು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ, ಅಮೃತ ಗ್ರಾಮ ಯೋಜನೆ ಮತ್ತು ಸರಕಾರದ ವಿಶೇಷ ಅನುದಾನದಿಂದ ಕೈಗೊಂಡ ಕಾಮಗಾರಿಗಳನ್ನು...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಸಂದ್ಯಾರಶ್ಮಿ ಮತ್ತು ಸಂದ್ಯಾಚೇತನ ಸುಳ್ಯ ತಾಲೂಕು ಇದರ ಸಹಯೋಗದೊಂದಿಗೆ ಜು.22 ರಂದು ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ಹಿರಿಯ ನಾಗರಿಕರ ಸಮ್ಮಿಲನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ, ಭಾರತೀಯ ನೌಕಾಪಡೆಯ ದೀಕ್ಷಿತ್.ಕೆ.ಜೆ ಹಾಗೂ ಚಾರ್ಟೆಡ್ ಅಕೌಂಟೆಂಟ್ ಆಶ್ರಿತಾ ಪೊಯ್ಯೆಮಜಲು ಇವರಿಗೆ...
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಗಿಡ ನಾಟಿ ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿದರು. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯ ರಾಮಣ್ಣ ಅವರ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯ ನಡೆಯಿತು. ಗದ್ದೆಗಳಲ್ಲಿ ಸಸಿ ನೆಟ್ಟು, ಕೆಸರಲ್ಲಿ ಮಿಂದೆದ್ದು ವಿದ್ಯಾರ್ಥಿಗಳು ನೇಗಿಲ ಯೋಗಿಗಳಾದರು. ಹಿರಿಯರು...
ಇತ್ತೀಚಿನ ದಿನಗಳಲ್ಲಿ ದಂತ ವೈದ್ಯಕೀಯ ರಂಗದಲ್ಲಿ ಚಿಕಿತ್ಸೆಗಾಗಿ ಲೇಸರ್ ಬಳಕೆ ಹೆಚ್ಚುತ್ತಿದೆ. ಲೇಸರ್ ಕಿರಣ ಬಳಸಿ ದೇಹದಲ್ಲಿನ ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲಾಗುತ್ತದೆ. ಮತ್ತು ಕೆಲವೊಮ್ಮೆ ಅನಗತ್ಯವಾದ ಜೀವಕೋಶಗಳ ಬೆಳವಣಿಗೆಯನ್ನು ನಿಲ್ಲಿಸಲಾಗುತ್ತದೆ. ದಂತ ಚಿಕಿತ್ಸೆಯಲ್ಲಿ ಸೌಂದರ್ಯಕ್ಕೆ ಹೆಚ್ಚು ಗಮನ ನೀಡುವುದರಿಂದ ಹಲ್ಲಿನ ವಸಡಿನ ಸೌಂದರ್ಯವನ್ನು ಹೆಚ್ಚಿಸಲೂ ಇತ್ತೀಚಿಗೆ ಲೇಸರ್ ಕಿರಣಗಳ ಬಳಕೆಯನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಾರೆ. ದಂತ...
ಸುಳ್ಯದ ಅಂಬೆಟಡ್ಕದಲ್ಲಿರುವ ಮಾಣಿಬೆಟ್ಟು ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಪಾರ್ಟ್ಸ್ ವರ್ಲ್ಡ್ ನಲ್ಲಿ ಪ್ರಸಿದ್ದ ಕಂಪನಿಯಾದ ಆಮ್ ರೋನ್ ಕಂಪನಿಯ ಬ್ಯಾಟರಿಗಳ ಮೇಲೆ ಬಾರಿ ದರಕಡಿತ ಮಾರಾಟ ಆಯೋಜಿಸಿದೆ. ಕಾರ್ , ಬೈಕ್ ಮುಂತಾದವುಗಳ ಬ್ಯಾಟರಿಗಳು ಹಾಗೂ ಎಲ್ಲಾ ಬಗೆಯ ಸ್ಪೇರ್ ಪಾರ್ಟ್ಸ್ ಗಳು ಲಭ್ಯವಿದೆ ಎಂದು ಮಾಲಕರಾದ ಅವಿನಾಶ್ ಎ ಜಿ ತಿಳಿಸಿದ್ದಾರೆ.
ಐವರ್ನಾಡು ಪೆಟ್ರೋಲ್ ಪಂಪ್ ಬಳಿ ಇರುವ ನಿಸರ್ಗ ಕಾಂಪ್ಲೆಕ್ಸ್ ನಲ್ಲಿ ವಾಸ್ತವ್ಯವಿರುವ ಪ್ರವೀಣ ಎಂಬವರು ಇನ್ನೊರ್ವ ನಿವಾಸಿ ಧರ್ಮಲಿಂಗಂ ಎಂಬವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ತಮ್ಮ ವಾಹನದಿಂದ ತಲವಾರು ತೆಗೆದು ಹಲ್ಲೆ ನಡೆಸಲು ಮುಂದಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕೂಡಲೇ ಸ್ಥಳೀಯರು ತಡೆದಿದ್ದಾರೆ. ಈ ಬಗ್ಗೆ ಧರ್ಮಲಿಂಗಂ ರವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು...
Loading posts...
All posts loaded
No more posts
