ಜಾಲ್ಸೂರು ಗೂಡಂಗಡಿಯಿಂದ ಕಳವು

ಜಾಲ್ಸೂರಿನ ಗೋಳಿಕಟ್ಟೆ ನಾರಾಯಣ ಭಟ್ ಅವರ ಅಂಗಡಿಗೆ ನುಗ್ಗಿದ ಕಳ್ಳರು ದಿನಸಿ ಸಾಮಾಗ್ರಿಗಳನ್ನು ಕಳವು ಗೈದ ಘಟನೆ ಜು.20ರಂದು ವರದಿಯಾಗಿದೆ ಜಾಲ್ಸೂರು ಹಾಗೂ ಕನಕಮಜಲು ಪರಿಸರದಲ್ಲಿ ಹಲವು ಕಳವು,ದರೋಡೆ ಪ್ರಕರಣಗಳು ವರದಿಯಾಗಿದ್ದು ಪೊಲೀಸರು ಇನ್ನಷ್ಟು ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ

ನಾಯಿ‌ ಅಡ್ಡ ಬಂದು ಸ್ಕೂಟಿಯಿಂದ ಬಿದ್ದ ಸಂಪಾಜೆ ಪಿಡಿಒ

ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಪಿಂಟೋ ಅವರ ಸ್ಕೂಟಿಗೆ ಐವರ್ನಾಡು ಸಮೀಪ ನಾಯಿ ಅಡ್ಡಬಂದ ಪರಿಣಾಮ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆ ವರದಿಯಾಗಿದೆ‌.ಜುಲೈ 18ರ ಸಂಜೆ ಬೆಳ್ಳಾರೆಯ ಮನೆಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
Ad Widget

ಜಾಲ್ಲೂರಿನ ಗೂಡಂಗಡಿಯಿಂದ ಬಿಸ್ಕೆಟ್ ಇನ್ನಿತರ ವಸ್ತುಗಳನ್ನು ಎಗರಿಸಿದ ಕಳ್ಳರು.

ಸುಳ್ಯ ತಾಲೂಕಿನ ನಾನಾ ಕಡೆಗಳಲ್ಲಿ ಕೆಲ ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಜು.20ರ ರಾತ್ರಿ ಗೂಡಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅಂಗಡಿ ಸಾಮಾಗ್ರಿಗಳನ್ನು ಕಳವುಗೈದ ಘಟನೆ ವರದಿಯಾಗಿದೆ. ಜಾಲ್ಲೂರಿನ ಗೋಳಿಕಟ್ಟೆಯಲ್ಲಿನ ನಾರಾಯಣ ಭಟ್ ಎಂಬವರ ಗೂಡಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳರು, ಅಂಗಡಿಯಲ್ಲಿದ್ದ ಜ್ಯೂಸ್ ಬಾಟ್ಲಿಗಳು, ಬಿಸ್ಕೆಟ್ ಪ್ಯಾಕೇಟ್, ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕಳವುಗೈದಿದ್ದಾರೆ ಎಂದು ತಿಳಿದುಬಂದಿದೆ....

ಸ್ಕೂಟಿಯಿಂದ ಬಿದ್ದು ಸಂಪಾಜೆ ಅಭಿವೃದ್ದಿ ಅಧಿಕಾರಿಗೆ ಗಾಯ, ವಿಶ್ರಾಂತಿ .

ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಪಿಂಟೋ ರವರು ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರು ಜುಲೈ 18ರ ಸಂಜೆ ಸ್ಕೂಟಿಯಲ್ಲಿ ಬೆಳ್ಳಾರೆಯ ಮನೆಗೆ ಹೋಗುತ್ತಿದ್ದ ಸಂದರ್ಭ ಐವರ್ನಾಡು ಸಮೀಪ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟಿ ಅಪಘಾತಕ್ಕೀಡಾಗಿ ಸರಿತಾರವರು ರಸ್ತೆಗೆ ಬಿದ್ದ ಪರಿಣಾಮ ಅವರ ಕೈ ಮತ್ತು ಕಾಲುಗಳಿಗೆ...

ರೈಟ್ ಟು ಲಿವ್ ಕೋಟೆ ಫೌಂಡೇಷನ್ ವತಿಯಿಂದ ಸುಳ್ಯ ಜೂನಿಯರ್ ಕಾಲೇಜಿಗೆ ಶೌಚಾಲಯ ಕೊಡುಗೆ

ರೈಟ್ ಟು ಲಿವ್ ಕೋಟೆ ಫೌಂಡೇಷನ್ (Right to live kote foundation) ವತಿಯಿಂದ ಸುಳ್ಯದ ಜೂನಿಯರ್ ಕಾಲೇಜಿನ ಹೈ ಸ್ಕೂಲ್ ವಿಭಾಗಕ್ಕೆ ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ಕೊಡುಗೆಯಾಗಿ ನೀಡಲಾಯಿತು.ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಶೌಚಾಲಯ ಕಟ್ಟಡ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಮೋಹನ್, ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತಾಯ, ರೈಟ್ ಟು ಲಿವ್ ಕೋಟೆ...

ಬೂಡು ಅಂಗನವಾಡಿ ಕೇಂದ್ರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ , ಸಮಸ್ಯೆ ಸರಿಪಡಿಸುವ ಭರವಸೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಬೂಡು ಅಂಗನವಾಡಿ ಕೇಂದ್ರಕ್ಕೆ ಸುಳ್ಯ ಶಾಸಕಿ ಭಾಗಿರಥೀ ಮುರುಳ್ಯ ಭೇಟಿ ನೀಡಿದರು . ಸುಮಾರು 35 ಮರ್ಷಗಳ ಹಳೆಯ ಕಟ್ಟಡವಾಗಿದ್ದು ಇದಕ್ಕೆ ಎಂಟು ವರುಷಗಳ ಹಿಂದೆ ಮೇಲ್ಚಾವಣಿಯನ್ನು ಸ್ಲಾಬ್ ಆಗಿ ಪರಿವರ್ತನೆಮಾಡಲಾಗಿತ್ತು . ಆದರೆ ಸದ್ಯ ಇದೀಗ ಮೇಲ್ಚಾವಣಿಯಲ್ಲಿ ನೀರಿನ ಪಸೆಗಳು ಕಾಣಿಸುತ್ತಿದ್ದು ಪುಟಾಣಿ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ತೆರಳಲು...

ಚಂದ್ರಾವತಿ ಬಡ್ಡಡ್ಕ ಅವರ “ಲಘುಬಿಘು” ಕೃತಿ ನುಗ್ಗೇಹಳ್ಳಿ ಪಂಕಜ ದತ್ತಿ ಪ್ರಶಸ್ತಿಗೆ ಆಯ್ಕೆ

ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು 2022ನೇ ಸಾಲಿನ ವಾರ್ಷಿಕ ವಿವಿಧ ದತ್ತಿ ಪ್ರಶಸ್ತಿಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಲಾಗಿದ್ದು, ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರಾದ ಚಂದ್ರಾವತಿ ಬಡ್ಡಡ್ಕ ಅವರ “ಲಘುಬಿಘು” ಕೃತಿಯು 2022ನೇ ಸಾಲಿನ ನುಗ್ಗೇಹಳ್ಳಿ ಪಂಕಜ(ಹಾಸ್ಯ ಕೃತಿ) ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ.ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ...

ಸುಳ್ಯದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ವ ಪ್ರಯತ್ನ : ಭಾಗೀರಥಿ  ಮುರುಳ್ಯ

ಸುಳ್ಯದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಭಾರತೀಯ  ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕ  ಮತ್ತು ಸುಳ್ಯ ವಾಣಿಜ್ಯ  ಮತ್ತು ಕೈಗಾರಿಕೋದ್ಯಮಿಗಳ  ಸಂಘದ  ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸುಳ್ಯ ವರ್ತಕರ  ಸಮುದಾಯ ಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವರ್ತಕ ಸಂಘದ  ಅಧ್ಯಕ್ಷ ಪಿ. ಬಿ....

ಸುಳ್ಯ : ಸೌತ್ ಕೊರಿಯಾದ ವಿಶ್ವ ಜಾಂಬೂರಿಗೆ ಸುಳ್ಯದ ಮನುಜ ನೇಹಿಗ ಮತ್ತು ಅಶ್ವಿನಿ  ಸರವು

ಸೌತ್ ಕೊರಿಯಾದಲ್ಲಿ ಆ.02 ರಿಂದ  ಆ.12 ರ ವರೆಗೆ ನಡೆಯುವ 25 ನೇ ಅಂತರಾಷ್ಟ್ರೀಯ ಸ್ಕೌಟ್-ಗೈಡ್ ಜಾಂಬೂರಿಯಲ್ಲಿ ಸುಳ್ಯದ ಸಾಂಸ್ಕೃತಿಕ ಪ್ರತಿಭೆಗಳಾದ ಮಾ| ಮನುಜ ನೇಹಿಗ ಮತ್ತು ಕು|ಅಶ್ವಿನಿ ಸರವು ಭಾಗವಹಿಸಲಿದ್ದಾರೆ. ಮನುಜ ನೇಹಿಗ ಸುಳ್ಯ ಎಳವೆಯಿಂದಲೇ ಯಕ್ಷಗಾನ, ರಂಗಭೂಮಿ, ಸಂಗೀತ, ನೃತ್ಯ, ಇಂದ್ರಜಾಲ , ಮಣಿಪುರಿ ಸ್ಟಿಕ್ ಡ್ಯಾನ್ಸ್ ಮುಂತಾದ ಬಹುಮುಖ ಪ್ರತಿಭೆಯನ್ನು ಹೊಂದಿರುವ...

“ಕಂಡದ ಗೌಜಿ ಕೆಸರ್ದ ಪರ್ಬ ” ಆಮಂತ್ರಣ ಪತ್ರಿಕೆ ಬಿಡುಗಡೆ.

ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ಹಾಗೂ ಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ಇದರ ಆಶ್ರಯದಲ್ಲಿ ಜುಲೈ 30ರಂದು ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ನಡೆಯಲಿರುವ ಎರಡನೇ ವರ್ಷದ ಕಂಡದ ಗೌಜಿ ಕೆಸರ್ದ್ ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಇದರ ಮುಂಭಾಗದಲ್ಲಿ ನಡೆಯಿತು. ಈ ಸಂದರ್ಭದಲ್ಲಿ...
Loading posts...

All posts loaded

No more posts

error: Content is protected !!