ರಸ್ತೆ ಬದಿ ತ್ಯಾಜ್ಯ ಎಸೆದವರ ವಿರುದ್ದ ಕ್ರಮ ಕೈಗೊಳ್ಳದ ಪಂಚಾಯತ್

ಆಲೆಟ್ಟಿ ಗ್ರಾಮದ ಅರಂಬೂರು ಮುಖ್ಯ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದನ್ನು ಸ್ಥಳೀಯ ಗ್ರಾ.ಪಂ.ಸದಸ್ಯರಾದ ಸುಧೀಶ್ ಅರಂಬೂರು ಇವರ ನೇತೃತ್ವದಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿಸಿದ್ದರು. ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಕವರ್ ನಲ್ಲಿ ತಂದು ಸುರಿದಿದ್ದು ಅದರಲ್ಲಿ ಅವರ ಹೆಸರು ಇದೆ ಅವೆಲ್ಲವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ತಿಂಗಳುಗಳೇ ಮೂರು ಕಳೆದರು ಇನ್ನು ಕ್ರಮ...

ನೆಲ್ಲೂರುಕೆಮ್ರಾಜೆ : ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಧನಂಜಯ ಕುಮಾರ್ ಕೋಟೆಮೂಲೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ವಂದನಾ ಹೆಚ್ ಆರ್ ಹೊಸ್ತೋಟ ಅವಿರೋಧವಾಗಿ ಆಯ್ಕೆಗೊಂಡಿದ್ದು, ಆ.18 ರಂದು ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
Ad Widget

ಸುಳ್ಯ : ರಸ್ತೆಯಲ್ಲೇ ಹರಿಯುತ್ತಿದೆ ಒಳಚರಂಡಿ ನೀರು – ಇದು ನಗರಾಡಳಿತದ ಸ್ವಚ್ಚತೆಗೆ ಹಿಡಿದ ಕೈಗನ್ನಡಿಯೇ?

ಸುಳ್ಯ ರಥಬಿದಿಯಿಂದ ಕೆರೆಮೂಲೆ ತೆರಳುವ ರಸ್ತೆಯಲ್ಲಿ ಇದೀಗ ಕೊಳಚೆ ನೀರು ಹರಿಯುತ್ತಿದೆ . ತಾಲೂಕಿನಾದ್ಯಾಂತ ಎಲ್ಲೆಡೆ ವೈರಲ್ ಫಿವರ್ ಬರುತ್ತಿದ್ದು ಈ ಕುರಿತಂತೆ ಆರೋಗ್ಯ ಇಲಾಖೆ ಮನೆ ಮನೆ ತೆರಳಿ ನೀರು ನಿಲ್ಲದಂತೆ ಶುಚಿತ್ವದ ಬಗ್ಗೆ ಮಾಹಿತಿ ನೀಡುತ್ತಿದೆ. ಆದರೆ ತಾಲೂಕು ಆಡಳಿತ ಹಾಗೂ ಎಲ್ಲಾ ಇಲಾಖೆಗಳು ಇಲ್ಲೆ ಇದ್ದರೂ ಸುಳ್ಯದ ಚರಂಡಿ ಸಮಸ್ಯೆಯ ಕುರಿತಾಗಿ...

ಅಶಕ್ತ ಕು ಟುಂಬಕ್ಕೆ ಹೆಗಲು ನೀಡಿದ ನಾಯಕರು

ಕಳೆದೆರಡು ದಿನಗಳ ಹಿಂದೆ ಕಾಟಿಪಳ್ಳದ ಸಾವಿತ್ರಿ ವಿಷ್ಣುನಗರ ಮರಣ ಹೊಂದಿದಾಗ ಅವರ ಸಂಸ್ಕಾರದ ಸಂದರ್ಭದಲ್ಲಿ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ಹರಿಶ್ಚಂದ್ರ ಘಾಟ್ ಇರುವ ಕಾರಣವಾಗಿ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವ ಬಗ್ಗೆ ಚಿಂತಿಸಿದಾಗ ಇದನ್ನು ತಿಳಿದ ಸ್ಥಳೀಯ ನಾಯಕರು ಜಾತಿ ಹಾಗೂ ಸಂಪ್ರದಾಯ ಪ್ರಕಾರವೇ ಮಾಡಬೇಕು ಎಂದು ತಿಳಿಸಿ ಸಾವಿತ್ರಿರವರ ಅಂತಿಮ ಯಾತ್ರೆಯಲ್ಲಿ ಸುಭೋದ್...

ಎಂ.ಬಿ. ಸದಾಶಿವರರಿಗೆ ಮಾತೃವಿಯೋಗ

ಸುಳ್ಯದ ಹಿರಿಯ ಉದ್ಯಮಿ ದಿ. ಎಂ.ಬಾಲಕೃಷ್ಣ ಗೌಡರ ಧರ್ಮಪತ್ನಿ ಶ್ರೀಮತಿ ಎಂ.ಬಿ.ದೇವಕಿಯವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಎಂ.ಬಿ. ಜಯರಾಮ, ಎಂ.ಬಿ.ಪ್ರಭಾಕರ, ಎಂ.ಬಿ.ಸದಾಶಿವ, ಪುತ್ರಿ ಸವಿತಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಅರಂಬೂರು ಆಕಸ್ಮಿಕವಾಗಿ ಧಗಧಗಿಸಿದ ಮರ..!

ಸುಳ್ಯದ ಅರಂಬೂರು ಜಂಕ್ಷನ್ ಬಳಿ ಮರಕ್ಕೆ ಬೆಂಕಿ ತಗುಲಿದ ಘಟನೆ ವರದಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಬೀಟಿ ಮರಕ್ಕೆ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

ಕೇನ್ಯ: ನೇಲ್ಯಡ್ಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಸ ಕಿ ಪ್ರಾ ಶಾಲೆ ನೇಲ್ಯಡ್ಕ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯaನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶಾಲಾ ಮಕ್ಕಳು ಭಾರತೀಯ ಸಾಂಸ್ಕೃತಿಕ ಉಡುಗೆಗಳನ್ನು ತೊಟ್ಟು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಭಾರತ ಎಂದು ಹಾಡಿ ಕುಣಿದು ಘೋಷಣೆ ಕೂಗಿದರು . ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಕೆ ರಘುನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವಜಾರೋಹಣ ಗೈದು...

ಎಣ್ಮೂರು : ಸ್ವಾತಂತ್ರ್ಯ ದಿನಾಚರಣೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು ಇಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ಶರೀಫ್ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಪಂಜ ಲಯನ್ಸ್ ಕ್ಲಬ್ ವತಿಯಿಂದ ಶಾಲೆಗೆ ರಾಷ್ಟ್ರ ನಾಯಕರ ಭಾವಚಿತ್ರ ಕೊಡುಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ನಂತರ ಸಭಾ...

ದೊಡ್ಡೆರಿ ಬಿರುಕು ಬಿಟ್ಟ ಶಾಲಾ ಕಟ್ಟಡ _ ಶಾಸಕಿ , ಅಧಿಕಾರಿಗಳು ಭೇಟಿ _ ಪರಿಶೀಲನೆ, ದುರಸ್ತಿ ಭರವಸೆ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದೊಡ್ಡೇರಿ ಸರಕಾರಿ ಶಾಲೆಯು ಶಿಥೀಲ ವ್ಯವಸ್ಥೆಯಲ್ಲಿದ್ದು ಈ ಹಿಂದಿನಿಂದಲೂ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು ಈ ಹಿನ್ನಲೆಯಲ್ಲಿ ಇಂದು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಹಾಗೂ ಇಲಾಖಾ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಯವರು ಮತ್ತು ಸ್ಪೀಕರ್ ಗಮನಕ್ಕೆ ತಂದು ತಕ್ಷಣವೇ ಟೆಂಡರ್ ಪ್ರಕ್ರಿಯೆ ನಡೆಸಲು...

ಸುಬ್ರಹ್ಮಣ್ಯ : ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮ

ಶ್ರೀ ವಾಣಿ ವನಿತಾ ಸಮಾಜ(ರಿ) ಸುಬ್ರಮಣ್ಯ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ) ಸುಳ್ಯ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ (ರಿ) ಸುಬ್ರಮಣ್ಯ, ಅಂಬಿಕಾ ಗೊಂಚಲು ಸಮಿತಿ ಸುಬ್ರಮಣ್ಯ (ಸ್ತ್ರೀಶಕ್ತಿ), ಅಂಗನವಾಡಿ ಕೇಂದ್ರ ಸುಬ್ರಮಣ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮವನ್ನು ಸುಬ್ರಮಣ್ಯ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಪ್ರೆಸ್...
Loading posts...

All posts loaded

No more posts

error: Content is protected !!