ಅರೆಭಾಷೆ ಸ್ಮರಣ ಸಂಚಿಕೆಗೆ ಅರೆಭಾಷೆ ಲೇಖನ, ಕತೆ, ಕವನ ಮತ್ತಿತರ ಬರಹ ಆಹ್ವಾನ

ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನವೆಂಬರ್, 29 ರಂದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಚೆಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡಡ್ಕ ಇಲ್ಲಿ ‘ಅರೆಭಾಷೆ ಸಾಹಿತ್ಯ ಸಮ್ಮೇಳನ-2026’ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಿದ್ದು, ಇದರ ಸಲುವಾಗಿ ಸ್ಮರಣ ಸಂಚಿಕೆ ಹೊರತರುತ್ತಿದ್ದು ಸ್ಮರಣ ಸಂಚಿಕೆಗೆ ‘ಅರೆಭಾಷೆ ಲೇಖನ, ಪ್ರಬಂಧ, ಕತೆ, ಕವನ, ಚುಟುಕು, ಗಾದೆಮಾತುಗಳು, ಒಗಟು ಇತ್ಯಾದಿ ಅರೆಭಾಷೆ ಬರಹಗಳನ್ನು ಆಹ್ವಾನಿಸಲಾಗಿದೆ.

. . . . . . . . .

ಲೇಖಕರು ತಮ್ಮ ಬರಹವನ್ನು ನವೆಂಬರ್ 25 ರೊಳಗೆ ಅಕಾಡೆಮಿ ಕಚೇರಿಗೆ ಕಳುಹಿಸಬೇಕು. ಬರಹಗಳನ್ನು ಕಳುಹಿಸಬೇಕಾದ ವಿಳಾಸ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿಕೃಪ ಕಟ್ಟಡ, 1ನೇ ಮಹಡಿ, ರಾಜಾಸೀಟ್ ರಸ್ತೆ, ಮಡಿಕೇರಿ email : arebaseacademy@gmail.com, ದೂ.ಸಂ. 6362522677 ನ್ನು ಸಂಪರ್ಕಿಸಬಹುದು ಎಂದು ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading