ನ.28, 29 ರಂಗಮನೆಯಲ್ಲಿ ನೀನಾಸಂ ನಾಟಕೋತ್ಸವ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರಂಗಮನೆಯ ಬೆಳ್ಳಿ ಸಂಭ್ರಮ ವರ್ಷದ ಅಂಗವಾಗಿ ನವಂಬರ್ 28 , 29 ರಂದು ಸಂಜೆ 6.45 ಕ್ಕೆ ರಂಗಮನೆಯ ಅಡಿಟೋರಿಯಂನಲ್ಲಿ ಹೆಗ್ಗೋಡಿನ ನೀನಾಸಂ ತಿರುಗಾಟದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.
ನ.28 ರಂದು ಪ್ರಸಿದ್ಧ ರಾಜಕಾರಣಿ, ಲೇಖಕರಾದ ಡಾ.ಕೆ.ವಿ. ಶಂಕರ ಗೌಡ ರಚಿಸಿದ, ಮಂಜು ಕೊಡಗು ನಿರ್ದೇಶನದ ‘ ಪಾದುಕಾ ಕಿರೀಟಿ ‘ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ನ.29 ರಂದು ಮರಾಠಿ ಮೂಲ ಪ್ರಸಿದ್ಧ ಸಾಹಿತಿ ಮಹೇಶ್ ಎಲ್ಕುಂಚವಾರ್ ರಚಿಸಿ, ನಂದಿನಿ ಕೆ.ಆರ್ ಮತ್ತು ಪ್ರಶಾಂತ್ ಹಿರೇಮಠ ಕನ್ನಡಕ್ಕೆ ಅನುವಾದಿಸಿದ, ಮಂಜು ಕಾಸರಗೋಡು ನಿರ್ದೇಶಿಸಿದ ‘ ಕೊಳ ‘ ಎಂಬ ನಾಟಕವು ಪ್ರದರ್ಶನಗೊಳ್ಳಲಿದೆ.
ಪಾದುಕಾ ಕಿರೀಟಿ ನಾಟಕದಲ್ಲಿ ರಂಗಮನೆಯ ಸದಸ್ಯ, ಆಳ್ವಾಸ್ ರಂಗ ತಂಡದ ನಟ ಮತ್ತು ಅರೆಭಾಷೆ ಕಲಾವಿದರಾದ ಹಾರಂಬಿ ಯತಿನ್ ವೆಂಕಪ್ಪ ಇವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ನಾಟಕೋತ್ಸವಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಅಧ್ಯಕ್ಷರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading