ಬಾಳಿಲ: ಪಂಜ ವಲಯ ಮಟ್ಟದ ಪ್ರೌಢ ಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆ: 2026-27

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ನವಂಬರ್ 12 ರಂದು ಪಂಜ ವಲಯ ಮಟ್ಟದ ಪ್ರೌಢ ಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆ: 2026-27 ನಡೆಯಿತು.

. . . . . . . . .

” ಪ್ರತಿಭಾ ಕಾರಂಜಿ ಪ್ರತಿಭೆಗಳ ಉದ್ದೀಪನಕ್ಕೆ ಪ್ರೇರಣೆಯಾಗಲಿ”ಎಂದು
ರಾಧಾಕೃಷ್ಣ ರಾವ್ ಯು,ಅಧ್ಯಕ್ಷರು
ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ (ರಿ) ಬಾಳಿಲ ಇವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹೇಳಿದರು.

. . . . . . .

ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ, ಖ್ಯಾತ ಸಾಹಿತಿ ಆಗಿರುವ ವೈ ಎಸ್ ಹರಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು ಕೆ . ಉಸಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ವೇದಿಕೆಯಲ್ಲಿ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಚಾಲಕರಾದ ಪಿ. ಜಿ. ಎಸ್.ಎನ್ ಪ್ರಸಾದ್, ಪ್ರತಿಭಾ ಕಾರಂಜಿ ತಾಲೂಕು ನೋಡೆಲ್ ಅಧಿಕಾರಿ ನಾರಾಯಣ ಬಿ, ಎಣ್ಮೂರು ಸಿ.ಆರ್.ಪಿ ಜಯಂತ ಕೆ, ಸರಕಾರ ನೌಕರರ ಸಂಘ, ಸುಳ್ಯ ಘಟಕ ಇದರ ಉಪಾಧ್ಯಕ್ಷ ಲಿಂಗಪ್ಪ ಬೆಳ್ಳಾರೆ, ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೀತಾರಾಮ ಕಾಯಾರ, ವಿದ್ಯಾಬೋಧಿನೀ ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಹರಿಣಾಕ್ಷಿ ಬಿ, ಪ್ರೌಢ ಶಾಲಾ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷರಾದ ರಮೇಶ್ ಕೆ. ಉಸಸ್ಥಿತರಿದ್ದರು.

ಮುಖ್ಯಶಿಕ್ಷಕರಾದ ಉದಯಕುಮಾರ್ ರೈ ಎಸ್ ಸ್ವಾಗತಿಸಿದರು, ಪಂಜ ವಲಯದ ನೋಡೆಲ್ ಅಧಿಕಾರಿ ಬಿ.ಆರ್.ಪಿ ಸುಂದರ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಹಶಿಕ್ಷಕ ವೆಂಕಟೇಶ್ ಕುಮಾರ್ ಯು ವಂದನಾರ್ಪಣೆಗೈದರು. ಸಹಶಿಕ್ಷಕಿ ಸಹನಾ ಬಿ.ಬಿ ಕಾರ್ಯಕ್ರಮ ನಿರೂಪಿಸಿದರು .

ಬಾಳಿಲ ವಿದ್ಯಾಬೋಧಿನೀ ಪ್ರೌಢ ಶಾಲೆಯು 79 ಅಂಕಗಳೊಂದಿಗೆ ಸಮಗ್ರ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿತು.

ಸರ್ಕಾರಿ ಪ್ರೌಢಶಾಲೆ ಎಣ್ಮೂರು 54 ಅಂಕಗಳೊಂದಿಗೆ ಸಮಗ್ರದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.

ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಸಮಗ್ರ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading