ಕಲ್ಲುಗುಂಡಿಯಲ್ಲಿ ಸ್ವಚ್ಛತಾ ಕಾರ್ಯದ ಮೂಲಕ ನೆಹರೂ ಜನ್ಮದಿನಾಚರಣೆ – ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಸಾರ್ವಜನಿಕ ಸ್ಥಳಗಳು, ಬಸ್ ತಂಗುದಾಣಗಳ ಸ್ವಚ್ಛತೆ

ಕಲ್ಲುಗುಂಡಿ: ಎಸ್‌ಕೆಎಸ್‌ಎಸ್‌ಎಫ್ ಕಲ್ಲುಗುಂಡಿ ಶಾಖೆಯ ವತಿಯಿಂದ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನವನ್ನು ಸ್ವಚ್ಛತಾ ಕಾರ್ಯಕ್ರಮದ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

. . . . . . . . .

ಕಲ್ಲುಗುಂಡಿ ದೊಡ್ಡಡ್ಕ ಪರಿಸರದ ಹಯಾತುಲ್ ಇಸ್ಲಾಂ ಮದರಸ, ಸಮೀಪದ ಸ್ವಾಮಿ ಕೊರಗಜ್ಜ ದೇವಸ್ಥಾನದ ಪರಿಸರ, ಸಾರ್ವಜನಿಕ ಬಸ್ ತಂಗುದಾಣ, ರಾಜರಾಂಪುರ ಕಾಲನಿಯ ಬಸ್ ತಂಗುದಾಣ, ಶುದ್ಧ ಕುಡಿಯುವ ನೀರಿನ ಘಟಕ, ಬೈಲೆ ಬಸ್ ತಂಗುದಾಣ, ತೆಕ್ಕಿಲ್ ಶಾಲಾ ಪರಿಸರ ಹಾಗೂ ಬಸ್ ತಂಗುದಾಣ ಮತ್ತು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಲಾಯಿತು. ಕಾರ್ಯಕರ್ತರು ಬಸ್ ತಂಗುದಾಣಗಳಿಗೆ ನೀರು ಹಾಕಿ ತೊಳೆದು ಶುಚಿಗೊಳಿಸಿದರು.

. . . . . . .

ಕಾರ್ಯಕ್ರಮಕ್ಕೆ ಕಲ್ಲುಗುಂಡಿ ಜುಮಾ ಮಸೀದಿಯ ಅಧ್ಯಕ್ಷರಾದ ಎಸ್. ಆಲಿ ಹಾಜಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ, ಕಲ್ಲುಗುಂಡಿ ಜುಮಾ ಮಸೀದಿಯ ಉಪಾಧ್ಯಕ್ಷರಾದ ಅಶ್ರಫ್ ಕೆ.ಎಂ., ಸುಳ್ಯ ತಾಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ಸಂಪಾಜೆ, ಕಲ್ಲುಗುಂಡಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಎಂ.ಸಿ., ಕಲ್ಲುಗುಂಡಿ ಎಸ್‌ಕೆಎಸ್‌ಎಸ್‌ಎಫ್ ಕಾರ್ಯದರ್ಶಿ ಇರ್ಷಾದ್ ಬದ್ರಿಯಾ, ಕಡೆಪಾಲ ಮದರಸ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಕಾನಾಕೋಡ್, ಪ್ರಗತಿ ಚಿಕನ್ ಮಾಲಕರಾದ ರಫೀಕ್ ಕೆ.ಎಂ., ಸಾಮಾಜಿಕ ಮುಖಂಡ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಮುಖಂಡರಾದ ತಾಜ್ ಟರ್ಲಿ, ಕೆ.ಎಂ. ರುಶೈಧ್ ಪ್ರಗತಿ, ಸಧುಮೋನ್ ಪೇರಡ್ಕ, ಕಡೆಪಾಲ ಮದರಸ ಉಪಾಧ್ಯಕ್ಷರಾದ ಅಬ್ದುಲ್ಲ, ಜಮಾಯತ್ ಸಮಿತಿ ಸದಸ್ಯರಾದ ಅಶ್ರಫ್ ಬಂಗ್ಲೆಗುಡ್ಡೆ, ಆದಿಲ್ ಕಲ್ಲುಗುಂಡಿ, ಉಮ್ಮರ್ ಗುಲ್ಮಕಜೆ ಸೇರಿದಂತೆ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.

ನೆಹರೂ ಅವರ ಜನ್ಮದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಸಾರ್ವಜನಿಕ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ ಎಸ್‌ಕೆಎಸ್‌ಎಸ್‌ಎಫ್ ಕಾರ್ಯಕರ್ತರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading