ಕಲ್ಮಕಾರು ಸ.ಹಿ.ಪ್ರಾ ಶಾಲೆಯಲ್ಲಿ “ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ”

ದ.ಕ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಸಮೂಹ ಸಂಪನ್ಮೂಲ ಕೇಂದ್ರ ಹರಿಹರ ಪಳ್ಳತ್ತಡ್ಕ ಹಾಗೂ ಸ.ಹಿ.ಪ್ರಾ ಶಾಲೆ ಕಲ್ಮಕಾರು ಇವುಗಳ ಸಹಭಾಗಿತ್ವದಲ್ಲಿ ನ.12 ರಂದು ಕಲ್ಮಕಾರು ಪ್ರಾಥಮಿಕ ಶಾಲೆಯಲ್ಲಿ “ಹರಿಹರ ಪಳ್ಳತ್ತಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ” ಕಾರ್ಯಕ್ರಮವು ನಡೆಯಿತು. ಉಮೇಶ್ ಬಿಳಿಮಲೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ದಿವ್ಯ ಎಂ.ಕೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕುಶಾಲಪ್ಪ ತುಂಬತ್ತಾಜೆ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಸೋಮಸುಂದರ ಬಿಳಿಮಲೆ, ಗುರುಚರಣ್ ಕೊಪ್ಪಡ್ಕ, ಪುನೀತ್ ಕೊಪ್ಪಡ್ಕ, ಬೆಳ್ಯಪ್ಪ ಮಣಿಯಾನಮನೆ, ಪ್ರವೀಣ್ ಕೊಪ್ಪಡ್ಕ, ಗಣೇಶ್ ಭಟ್ ಇಡ್ಯಡ್ಕ, ಕುಶಾಲಪ್ಪ ಮೆದುಮನೆ, ಗಣೇಶ್ ಕೆರೆಮನೆ, ರಾಧಾಕೃಷ್ಣ ಬಿಲ್ಲಾರಮಜಲು, ಚಂದ್ರಶೇಖರ ಅಂಜನಕಜೆ ಹಾಗೂ ಯಶವಂತ ನಿಡುಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಹರಿಹರ ಪಳ್ಳತ್ತಡ್ಕ ಕ್ಲಸ್ಟರ್ ಮಟ್ಟದ ಶಾಲೆಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳು ನಡೆದು 1 ರಿಂದ 4ನೇ ತರಗತಿಯ ಕಿರಿಯ ವಿಭಾಗದಲ್ಲಿ ಸ.ಹಿ.ಪ್ರಾ ಶಾಲೆ ಹರಿಹರ ಪಳ್ಳತ್ತಡ್ಕ ಪ್ರಥಮ, ಸ.ಹಿ.ಪ್ರಾ ಶಾಲೆ ಬಂಗ್ಲೆಗುಡ್ಡೆ ದ್ವಿತೀಯ ಹಾಗೂ ಸ.ಹಿ.ಪ್ರಾ ಶಾಲೆ ಬಾಳುಗೋಡು ತೃತೀಯ ಸ್ಥಾನವನ್ನು ಪಡೆದುಕೊಂಡರೆ 5 ರಿಂದ 7ನೇ ತರಗತಿಯ ಹಿರಿಯ ವಿಭಾಗದಲ್ಲಿ ಸ.ಹಿ.ಪ್ರಾ ಶಾಲೆ ಕಲ್ಮಕಾರು ಮತ್ತು ಸ.ಹಿ.ಪ್ರಾ ಶಾಲೆ ಬಾಳುಗೋಡು ಪ್ರಥಮ, ಸ.ಹಿ.ಪ್ರಾ ಶಾಲೆ ಬಂಗ್ಲೆಗುಡ್ಡೆ ದ್ವಿತೀಯ ಹಾಗೂ ಸ.ಹಿ.ಪ್ರಾ ಶಾಲೆ ಹರಿಹರ ಪಳ್ಳತ್ತಡ್ಕ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಉದಯ್ ಕುಮಾರ್, ಹರಿಹರ ಪಳ್ಳತ್ತಡ್ಕ ಕ್ಲಸ್ಟರ್ ನ ಎಲ್ಲಾ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕಲ್ಮಕಾರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಮಾಲಿನಿ ಕೆ.ಎಸ್ ಸ್ವಾಗತಿಸಿ ಸಾಗರ್ ಆರ್ ಧನ್ಯವಾದ ಸಮರ್ಪಿಸಿದರು. ಚಿರಶ್ರೀ ಕೆ ಕಾರ್ಯಕ್ರಮ ನಿರೂಪಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading