ಸುಳ್ಯ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹25 ಕೋಟಿ ಅನುದಾನಕ್ಕೆ ಮನವಿ | 8 ಪ್ರಮುಖ ರಸ್ತೆ ಕಾಮಗಾರಿಗಳ ಅಭಿವೃದ್ಧಿಗೆ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಕೆ

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿರುವ ವಿವಿಧ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಟ್ಟು ₹25 ಕೋಟಿ ಅನುದಾನ ಒದಗಿಸುವಂತೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

. . . . . . . . .

ಕ್ಷೇತ್ರದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಹಾಗೂ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಒಟ್ಟು 8 ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

. . . . . . .

ರಾಜ್ಯ ಹೆದ್ದಾರಿ ಕಾಮಗಾರಿಗಳು:

  1. ಸುಳ್ಯ ತಾಲೂಕಿನ ರಾಜ್ಯ ಹೆದ್ದಾರಿ 276ರ 13.80ರಿಂದ 14.80 ಕಿ.ಮೀ.ವರೆಗಿನ ಒಂದು ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು ₹3 ಕೋಟಿ.
  2. ಕಡಬ ತಾಲೂಕಿನ ರಾಜ್ಯ ಹೆದ್ದಾರಿ 100ರ 14.70ರಿಂದ 14.90 ಕಿ.ಮೀ.ವರೆಗಿನ 0.20 ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು ₹4 ಕೋಟಿ.

ಜಿಲ್ಲಾ ಮುಖ್ಯ ರಸ್ತೆ ಹಾಗೂ ಇತರ ಕಾಮಗಾರಿಗಳು:

  1. ಸುಳ್ಯ ತಾಲೂಕಿನ ಎಲಿಮಲೆ–ಅರಂತೋಡು ರಸ್ತೆಯ 6ರಿಂದ 10 ಕಿ.ಮೀ.ವರೆಗಿನ 4 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹4.50 ಕೋಟಿ.
  2. ಅಯ್ಯನಕಟ್ಟೆ ಭಾಗದ ರಸ್ತೆಯ 4ರಿಂದ 9 ಕಿ.ಮೀ.ವರೆಗಿನ 5 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹4.50 ಕೋಟಿ.
  3. ಮಂಡೆಕೋಲು ರಸ್ತೆಯ 6.50ರಿಂದ 10 ಕಿ.ಮೀ.ವರೆಗಿನ 3.50 ಕಿ.ಮೀ. ರಸ್ತೆ ಮರುಡಾಂಬರೀಕರಣಕ್ಕೆ ₹2 ಕೋಟಿ.
  4. ಕಡಬ ತಾಲೂಕಿನ ಸುಬ್ರಹ್ಮಣ್ಯ–ಉಪ್ಪಿನಂಗಡಿ ರಸ್ತೆಯ 29.50ರಿಂದ 31.50 ಕಿ.ಮೀ.ವರೆಗಿನ ರಸ್ತೆ ಕಾಂಕ್ರೀಟೀಕರಣ ಹಾಗೂ ಅಭಿವೃದ್ಧಿಗೆ ₹2 ಕೋಟಿ.
  5. ಕಡಬ ತಾಲೂಕಿನ ಪೆರ್ವಾಜೆ ಭಾಗದ ರಾಜ್ಯ ಹೆದ್ದಾರಿಯ 29ರಿಂದ 31 ಕಿ.ಮೀ.ವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ₹2 ಕೋಟಿ.
  6. ನೆಲ್ಯಾಡಿ ಭಾಗದ ರಾಷ್ಟ್ರೀಯ ಹೆದ್ದಾರಿ 75 ಹಾಗೂ ರಾಜ್ಯ ಹೆದ್ದಾರಿ 113 ಸಂಪರ್ಕಿಸುವ ರಸ್ತೆಯ 8.45ರಿಂದ 10 ಕಿ.ಮೀ.ವರೆಗಿನ ರಸ್ತೆ ಅಗಲೀಕರಣಕ್ಕೆ ₹3 ಕೋಟಿ.

ಈ ಎಂಟು ಕಾಮಗಾರಿಗಳಿಗೆ ಒಟ್ಟು ₹2,500 ಲಕ್ಷ ಅಂದರೆ ₹25 ಕೋಟಿ ಅನುದಾನ ಒದಗಿಸುವಂತೆ ಮನವಿಯಲ್ಲಿ ಕೋರಲಾಗಿದೆ.

ಕ್ಷೇತ್ರದ ಗ್ರಾಮೀಣ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗತ್ಯ ಅನುದಾನ ಮಂಜೂರು ಮಾಡುವ ಮೂಲಕ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading