ಭೋವಿ(ವಡ್ಡರ) ಕ್ಷೇಮಾಭಿವೃದ್ಧಿ ಸಂಘದ ಸುಳ್ಯ ತಾಲೂಕು ಸಮಿತಿ ರಚನೆ : ಅಧ್ಯಕ್ಷರಾಗಿ ಕೃಷ್ಣ ಕೇರ್ಪಳ, ಕಾರ್ಯದರ್ಶಿಯಾಗಿ ತಿಲೇಶ್ ಆಯ್ಕೆ

ಸುಳ್ಯ: ಭೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂಘದ ಸುಳ್ಯ ತಾಲೂಕು ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಕೃಷ್ಣ ಕೇರ್ಪಳ ಹಾಗೂ ಕಾರ್ಯದರ್ಶಿಯಾಗಿ ತಿಲೇಶ್ ಆಯ್ಕೆಯಾಗಿದ್ದಾರೆ.

. . . . . . . . .

ಪದಾಧಿಕಾರಿಗಳಾಗಿ ಸುಬ್ರಹ್ಮಣ್ಯ ಜಟ್ಟಿಪಳ್ಳ, ರಾಮು ಬೀರಮಂಗಲ, ಸುಬ್ರಹ್ಮಣ್ಯ ತಳೂರು, ಮಂಜುನಾಥ್ ಕಲ್ಲುಮುಟ್ಲು, ಮಂಜುನಾಥ್ ಕುರುಂಜಿಗುಡ್ಡೆ, ಸ್ವಾಮಿನಾಥ್ ತಳೂರು, ಕುಮಾರ ಪಂಜ, ಪ್ರಶಾಂತ್ ಕಲ್ಲುಮುಟ್ಲು ಹಾಗೂ ವಿನೋದ್ ಜಯನಗರ ಆಯ್ಕೆಯಾಗಿದ್ದಾರೆ.

. . . . . . .

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಭೇಟಿಸುಳ್ಯ ತಾಲೂಕು ಭೋವಿ (ವಡ್ಡರ) ಅಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ. ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಜಾತಿ ಪ್ರಮಾಣ ಪತ್ರವನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ವಿತರಿಸುವಂತೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ನಿಗಮದ ಅಧ್ಯಕ್ಷ ರಾಮಪ್ಪ ಎಂ. ಅವರು, ಈ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದರು.ಇದಲ್ಲದೆ, ಸಂಘದ ಸಮಗ್ರ ಅಭಿವೃದ್ಧಿ, ಸರ್ಕಾರದ ವಿವಿಧ ಸೌಲಭ್ಯಗಳ ಅನುಷ್ಠಾನ ಹಾಗೂ ಸಮುದಾಯದ ಬೇಡಿಕೆಗಳ ಈಡೇರಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading